ತನ್ನ ವಿದ್ಯಾರ್ಥಿನಿಯನ್ನೇ ಪುಸಲಾಯಿಸಿ ಮದುವೆ; ಶಿಕ್ಷಕನ ಬೇಸಗೆ ಪುರಾಣ ಬಯಲು!
ಶಿಕ್ಷಕನೋರ್ವ ತನ್ನ ವಿದ್ಯಾರ್ಥಿನಿಯನ್ನೇ ಪುಸಲಾಯಿಸಿ ಮದುವೆ ಮಾಡಿಕೊಂಡ ಘಟನೆ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಈ ಘಟನೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದು ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಬೀದರ್ (ಆ.19): ಶಿಕ್ಷಕನೋರ್ವ ತನ್ನ ವಿದ್ಯಾರ್ಥಿನಿಯನ್ನೇ ಪುಸಲಾಯಿಸಿ ಮದುವೆ ಮಾಡಿಕೊಂಡ ಘಟನೆ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ದಿಲೀಪ್ ಕುಮಾರ ಎಂಬ ಶಿಕ್ಷಕನೇ ಅಪ್ರಾಪ್ತ ವಿದ್ಯಾರ್ಥಿನಿಗೆ ತಾಳಿ ಕಟ್ಟಿರುವ ಅಸಾಮಿ. ಮೂಲತಃ ಬೆಳಗಾವಿ ಜಿಲ್ಲೆಯ ದಿಲೀಪ್ ಕುಮಾರ ಅಜೂರೆ. ಶಾಲೆಯಲ್ಲಿ ಶಿಕ್ಷಕನಾಗಿದ್ದ. ಅದೇ ಶಾಲೆಯಲ್ಲಿ ಓದುತ್ತಿದ್ದ 15 ವರ್ಷದ ವಿದ್ಯಾರ್ಥಿನಿ. ಕಳೆದ ಬೇಸಿಗೆ ಅಂದರೆ ಮಾರ್ಚ್ ತಿಂಗಳ ಸಮಯದಲ್ಲಿ ವಿದ್ಯಾರ್ಥಿನಿ ಮನೆಯಲ್ಲೇ ಬಾಡಿಗೆ ಉಳಿದುಕೊಂಡಿದ್ದ. ಈ ವೇಳೆ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ. ಮನೆಯವರು ಇಲ್ಲದ ವೇಳೆ ವಿದ್ಯಾರ್ಥಿನಿಯೊಂದಿಗೆ ಸಂಪರ್ಕ. ಯಾರಿಗೂ ಗೊತ್ತಾಗದ ತಾಳಿಕಟ್ಟಿ ಮನೆಯಲ್ಲೆ ಠಿಕಾಣಿ ಹೂಡಿರುವ ಶಿಕ್ಷಕ ಜೂನ್ ತಿಂಗಳ ಆರಂಭದಲ್ಲಿ ಶಿಕ್ಷಕನ ಮದುವೆ ಪುರಾಣ ಬಯಲಾಗಿದೆ.
Bengaluru crime: ಅತ್ಯಾಚಾರ ದೂರು ಕೊಡಲು ಬಂದವಳಿಗೆ ಕಿರುಕುಳ ಕೊಟ್ಟ ಎಸ್‌ಐ ಅಮಾನತು
fಅಘಾತಕಾರಿ ವಿಷಯ ಏನೆಂದರೆ ಶಿಕ್ಷಕನಿಗೆ ಈಗಾಗಲೇ ಮದುವೆಯಾಗಿದೆ. ಒಂದು ಮಗು ಕೂಡ ಇದೆ. ಹೀಗಿದ್ದೂ ತನ್ನ ಶಾಲಾ ವಿದ್ಯಾರ್ಥಿನಿಯನ್ನೇ ಪುಸಲಾಯಿಸಿ ಮದುವೆ ಮಾಡಿಕೊಂಡಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಈ ಘಟನೆ ಸಂಬಂಧ ಶಿಕ್ಷಕನ ವಿರುದ್ಧ ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕನಿಗೆ ಅಮಾನತು ಬದಲು ವಜಾ ಮಾಡಬೇಕೆಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.