ಆಕಾಶದಿಂದ ಇಳಿದುಬಂದ ವಿಚಿತ್ರ ವಸ್ತು ಕಂಡು ಬೆಚ್ಚಿಬಿದ್ದ ಭೀಮಾತೀರದ ಮಂದಿ! ಭೂಮಿಗೆ ಬಂತ ಏಲಿಯನ್?
ವಿಜಯಪುರ ಜಿಲ್ಲೆ ವಿಚಿತ್ರ ಘಟನೆಗಳಿಗೆ ಸುದ್ದಿಯಾಗುತ್ತಲೇ ಇದೆ. ಹಲವು ವರ್ಷಗಳಿಂದ ಪದೇಪದೆ ಭೂಕಂಪನ, ನಿಗೂಢ ಸದ್ದು ಇಲ್ಲೇನಾಗುತ್ತಿದೆ ಎಂದೇ ಗಾಬರಿಯಾಗಿ ಜನ ಊರು ಬಿಡುತ್ತಿದ್ದಾರೆ. ಇದೀಗ ಮತ್ತೊಂದು ಘಟನೆ ಸ್ಥಳೀಯರಲ್ಲಿ ಕೆಲಕಾಲ ಗಾಬರಿಯಾಗಿಸುವಂತೆ ಮಾಡಿದೆ.
ವಿಜಯಪುರ (ಆ.2): ವಿಜಯಪುರ ಜಿಲ್ಲೆ ವಿಚಿತ್ರ ಘಟನೆಗಳಿಗೆ ಸುದ್ದಿಯಾಗುತ್ತಲೇ ಇದೆ. ಹಲವು ವರ್ಷಗಳಿಂದ ಪದೇಪದೆ ಭೂಕಂಪನ, ನಿಗೂಢ ಸದ್ದು ಇಲ್ಲೇನಾಗುತ್ತಿದೆ ಎಂದೇ ಗಾಬರಿಯಾಗಿ ಜನ ಊರು ಬಿಡುತ್ತಿದ್ದಾರೆ. ಇದೀಗ ಮತ್ತೊಂದು ಘಟನೆ ಸ್ಥಳೀಯರಲ್ಲಿ ಕೆಲಕಾಲ ಗಾಬರಿಯಾಗಿಸುವಂತೆ ಮಾಡಿದೆ.
ಹೌದು ಆಕಾಶದಿಂದ ವಿಚಿತ್ರ ವಸ್ತು ಭೂಮಿಗೆ ಇಳಿಯುವುದನ್ನು ಕಂಡು ಭೀಮಾತೀರದ ಜನ ಬೆಚ್ಚಿಬಿದ್ದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿರುವ ಘಟನೆ. ಆಕಾಶದಿಂದ ಹಾರುತ್ತ ಭೂಮಿಗೆ ಬಿದ್ದಿದ್ದು ಏನು? ಅದ್ಯಾಕೆ ಬಂತು? ಏಲಿಯನ್ ಏನಾದರೂ ಭೂಮಿಗೆ ಬಂತಾ? ಹೀಗೆ ಹಲವು ಅನುಮಾನ ಭೀಮಾತೀರದ ಜನರ ಆತಂಕಕ್ಕೆ ಕಾರಣವಾಯಿತು.
ಚಿಕಿತ್ಸೆ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಷಕರಿಂದ ವೈದ್ಯನಿಗೆ ಬಿತ್ತು ಗೂಸಾ!
ನೋಡನೋಡುತ್ತಲೇ ಆಕಾಶದಿಂದ ಇಳಿದು ಬಂದ ವಿಚಿತ್ರ ವಸ್ತು!
ಎತ್ತರದಲ್ಲಿ ಬಲೂನಿನಂತೆ ಕಂಡ ವಸ್ತು. ನಿಧಾನಕ್ಕೆ ಪ್ಯಾರಾಚೂಟ್ ಮೂಲಕ ನೆಲಕ್ಕೆ ಬಿದ್ದ ವಸ್ತು ಕಂಡು ಗಾಬರಿಯಾದ ಸ್ಥಳೀಯರು. ಹತ್ತಿರಕ್ಕೆ ಹೋಗಿ ನೋಡಿದಾಗ ಬಾಕ್ಸ್, ಮಶೀನ್, ವೈರಿಂಗ್ ಇರುವ ಡಿವೈಸ್ ಕಾಣಿಸಿದೆ. ಬಾಕ್ಸ್ ರೀತಿ ಇರೋ ಡಿವೈಸ್ ಕಂಡು ಗಾಬರಿಯಾದ ಸ್ಥಳೀಯರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಚಡಚಣ ಪೊಲೀಸರು, ತಹಸೀಲ್ದಾರ್ ಡಿವೈಸ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಕೇಂದ್ರ ಹವಾಮಾನ ಇಲಾಖೆಗೆ ಸೇರಿದ ಸೈಂಟಿಫಿಕ್ ಡಿವೈಸ್ ಎಂಬುದು ಬೆಳಕಿಗೆ ಬಂದಿದೆ.
ಭೂಮಿಗೆ ಬಿದ್ದ ವಸ್ತುವಿನ ಬಗ್ಗೆ ಗಾಬರಿಗೊಂಡಿದ್ದ ಸ್ಥಳೀಯರಿಗೆ ಮಾಹಿತಿ ನೀಡಿದ ಅಧಿಕಾರಿಗಳು. ಇದು ಯಾವುದೋ ಅನ್ಯಗ್ರಹ ವಸ್ತು ಅಲ್ಲ. ಭಾರತ ಸರ್ಕಾರದ ರಾಷ್ಟ್ರೀಯ ಪರಮಾಣು ವಿಜ್ಞಾನ ಗಣಿತ ಕೇಂದ್ರಕ್ಕೆ ಸೇರಿದ ವಸ್ತು ಇದಾಗಿದೆ. ಹವಾಮಾನ ಬದಲಾವಣೆ, ಹವಾಮಾನ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುವ ಪಿಐಎಫ್‌ಆರ್ ವಸ್ತು ಇದು, ಹೈದರಾಬಾದ್ ಸೆಂಟರ್‌ನಿಂದ ಹಾರಿಬಿಡಲಾಗಿದೆ. ತಾಂತ್ರಿಕ ದೋಷದಿಂದ ಕೆಳಗೆ ಬಿದ್ದಿರಬಹುದು ಎಂದು ಸ್ಥಳೀಯರಿಗೆ ಮಾಹಿತಿ ನೀಡಿದ ತಹಸೀಲ್ದಾರರು. ನಿಟ್ಟುಸಿರುವ ಬಿಟ್ಟ ಸ್ಥಳೀಯರು.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ: ಬಿಎಸ್‌ವೈ ಬಂಧನ ತಡೆ ಆದೇಶ ಒಂದು ವಾರ ವಿಸ್ತರಣೆ
ವಿಜಯಪುರ ಜಿಲ್ಲೆಯ ಸುತ್ತಮುತ್ತ ವಿಚಿತ್ರ ಸದ್ದು, ಭೂಕಂಪ ಪದೇಪದೆ ಕೇಳಿ ಕೇಳಿ ಆತಂಕದಲ್ಲಿರುವ ಜನರಿಗೆ ಆಕಾಶದಿಂದ ಬಿದ್ದ ನಿಗೂಢ ವಸ್ತು ಮತ್ತಷ್ಟು ಆತಂಕ ತಂದೊಡ್ಡಿತ್ತು. ಇದೀಗ ಆಕಾಶದಿಂದ ಬಿದ್ದ ವಸ್ತು ಹವಾಮಾನ ಇಲಾಖೆಗೆ ಸಂಬಂಧಿಸಿದ ವೈಜ್ಞಾನಿಕ ಡಿವೈಸ್ ಎಂಬುದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ನೆಲದೊಳಗಿಂದ ಬರುತ್ತಿರುವ ನಿಗೂಢ ಶಬ್ದ ಯಾವುದು? ಪದೇಪದೆ ಭೂಕಂಪನ ಅನುಭವ ಯಾಕಾಗುತ್ತಿದೆ? ಈ ಬಗ್ಗೆ ಇನ್ನೂ ಆತಂಕದಲ್ಲಿರುವ ಗ್ರಾಮಗಳು.