ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಖಾಸಗಿ ಆಸ್ಪತ್ರೆಯ ವೈದ್ಯನಿಗೆ ಬಾಲಕಿ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಚಿಕ್ಕೋಡಿ (ಆ.2): ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಖಾಸಗಿ ಆಸ್ಪತ್ರೆಯ ವೈದ್ಯನಿಗೆ ಬಾಲಕಿ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುತ್ತುರಾಜ ಹೂಗಾರ, ಬಾಲಕಿಯ ಪೋಷಕರಿಂದ ಗೂಸಾ ತಿಂದ ವೈದ್ಯ. ವೃತ್ತಿಯಲ್ಲಿ ವೈದ್ಯನಾಗಿದ್ದು, ಹುಕ್ಕೇರಿ ಪಟ್ಟಣದಲ್ಲಿ ಸುರಕ್ಷಾ ಹೆಸರಿನಲ್ಲಿ ಹೊಮಿಯೋಪತಿಕ್ ಆಸ್ಪತ್ರೆ ನಡೆಸುತ್ತಿದ್ದಾನೆ. ಹೆಸರಿಗೆ ಹೊಮಿಯೋಪತಿ ಆಸ್ಪತ್ರೆ ಇದ್ದರೂ ಆಲೋಪತಿ ಚಿಕಿತ್ಸೆ ನೀಡುತ್ತಿದ್ದ ವೈದ್ಯ.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ: ಬಿಎಸ್‌ವೈ ಬಂಧನ ತಡೆ ಆದೇಶ ಒಂದು ವಾರ ವಿಸ್ತರಣೆ

ಬಾಲಕಿಗೆ ಅನಾರೋಗ್ಯವೆಂದು ಆಸ್ಪತ್ರೆಗೆ ಕರೆತಂದಿದ್ದ ಪೋಷಕರು. ಈ ವೇಳೆ ಬಾಲಕಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವೈದ್ಯ. ಚಿಕಿತ್ಸೆ ಬಳಿಕ ಪಾಲಕರ ಬಳಿ ನೋವಿನಿಂದ ಅಳುತ್ತ ಹೋದ ಬಾಲಕಿ. ಪೋಷಕರು ವಿಚಾರಿಸಿದಾಗ ನಡೆದ ಘಟನೆ ತಿಳಿಸಿರುವ ಬಾಲಕಿ. ಇದರಿಂದ ರೊಚ್ಚಿಗೆದ್ದ ಬಾಲಕಿ ಪೋಷಕರು, ಸಂಬಂಧಿಕರು ವೈದ್ಯ ಮುತ್ತರಾಜನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಸದ್ಯ ಘಟನೆ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೋಷಕರು.