ರೈಲ್ವೆ ಶೌಚಾಲಯದಲ್ಲಿ ಪಿಸ್ತೂಲ್ ಬಿಟ್ಟು ಹೋದ ಪೊಲೀಸಪ್ಪ! ದುಷ್ಕರ್ಮಿಗಳ ಕೈಗೆ ಸಿಕ್ಕಿದ್ರೆ ಏನು ಗತಿ?
ಕಾಚಿಗುಡ-ಮೈಸೂರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ಆತಂಕಕನ್ನಡಪ್ರಭ ವಾರ್ತೆ ಬೆಂಗಳೂರುಕಾಚಿಗುಡ-ಮೈಸೂರು ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಪಿಸ್ತೂಲ್ ಪತ್ತೆಯಾಗಿದ್ದು, ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದ ಘಟನೆ ಜರುಗಿದೆ.
ಬೆಂಗಳೂರು (ಡಿ.18): ಕಾಚಿಗುಡ-ಮೈಸೂರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ಆತಂಕಕನ್ನಡಪ್ರಭ ವಾರ್ತೆ ಬೆಂಗಳೂರುಕಾಚಿಗುಡ-ಮೈಸೂರು ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಪಿಸ್ತೂಲ್ ಪತ್ತೆಯಾಗಿದ್ದು, ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದ ಘಟನೆ ಜರುಗಿದೆ.
ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕೆಂಗೇರಿ ರೈಲು ನಿಲ್ದಾಣದತ್ತ ರೈಲು ಬರುವಾಗ ಪ್ರಯಾಣಿಕರೊಬ್ಬರು ಶೌಚಾಲಯಕ್ಕೆ ತೆರಳಿದ್ದಾರೆ. ಈ ವೇಳೆ ಶೌಚಾಲಯದ ಕಟ್ಟೆಯ ಮೇಲೆ ಪಿಸ್ತೂಲ್ ಇರುವುದನ್ನು ಗಮನಿಸಿದ್ದಾರೆ. ಬಳಿಕ ಈ ವಿಚಾರವನ್ನು ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ.ಬಳಿಕ ರೈಲ್ವೆ ಪೊಲೀಸರು ಆ ಪಿಸ್ತೂಲ್ ವಶಕ್ಕೆ ಪಡೆದು ರಾಜ್ಯದ ಎಲ್ಲಾ ಕಂಟ್ರೋಲ್ ರೂಮ್‌ಗಳಿಗೆ ಮಾಹಿತಿ ನೀಡಿದ್ದಾರೆ. ಪಿಸ್ತೂಲ್‌ನ ನಂಬರ್ ಆಧರಿಸಿ ಪರಿಶೀಲಿಸಿದಾಗ ಅದು ಮಂಡ್ಯ ಜಿಲ್ಲೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್)ಯ ಕಾನ್‌ಸ್ಟೇಬಲ್ ನಾಗರಾಜ್ ಎಂಬುವವರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ.
ಡೈಪರ್‌ರನ್ನು ಬಾಂಬ್ ಅಂದುಕೊಂಡು ವಿಮಾನ ತುರ್ತಾಗಿ ನಿಲ್ಲಿಸಿದರು!
ಮರೆತು ಬಿಟ್ಟಿದ್ದರು:
ಡಿಎಆರ್ ಕಾನ್ಸ್‌ಟೇಬಲ್ ನಾಗರಾಜ್ ಅವರು ವಿಶೇಷ ಸರ್ಕಾರಿ ಅಭಿಯೋಜಕರೊಬ್ಬರಿಗೆ ಗನ್‌ಮ್ಯಾನ್ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದರು. ಭಾನುವಾರ ಮುಂಜಾನೆ ಕಾಚಿಗುಡ-ಮೈಸೂರು ಮಾರ್ಗದ ರೈಲಿನಲ್ಲಿ ಬೆಂಗಳೂರಿನಿಂದ ಮಂಡ್ಯಕ್ಕೆ ಹೊರಟಿದ್ದರು. ಪ್ರಯಾಣದ ಮಧ್ಯೆ ರೈಲಿನ ಶೌಚಾಲಯಕ್ಕೆ ಹೋದಾಗ ತಮ್ಮ ಬಳಿ ಇದ್ದ ಪಿಸ್ತೂಲ್ ಅನ್ನು ಶೌಚಾಲಯದ ಕಟ್ಟೆ ಮೇಲೆ ಇರಿಸಿದ್ದರು. ಬಳಿಕ ಅದನ್ನು ವಾಪಸ್ ತೆಗೆದುಕೊಂಡು ಹೋಗದೇ ಮರೆತು ಹೋಗಿದ್ದರು. ಪ್ರಯಾಣಿಕರೊಬ್ಬರು ಶೌಚಾಲಯಕ್ಕೆ ತೆರಳಿದ್ದಾಗ ಪಿಸ್ತೂಲ್ ಕಂಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಡಿಸಿಎಆರ್ ಕಾನ್ಸ್‌ಟೇಬಲ್ ನಾಗರಾಜ್ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಪಿಸ್ತೂಲ್ ವಾಪಸ್ ಪಡೆಯಲು ಸೂಚಿಸಲಾಗಿದೆ. ಈ ಸಂಬಂಧ ಮಂಡ್ಯ ಎಸ್ಪಿಗೂ ವರದಿ ನೀಡುವುದಾಗಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ: ಪೊಲೀಸ್ ಪಿಸ್ತೂಲ್ ಕಸಿದು ಆಟವಾಡಿಸಿದ ಕುಖ್ಯಾತ ಕಳ್ಳ ಖಾಜಪ್ಪ!