ವಿಮಾನದ ಶೌಚಾಲಯದಲ್ಲಿ ಡೈಪರ್‌ ಸರಿಯಾಗಿ ಕಸದ ಬುಟ್ಟಿಯಲ್ಲಿ ಬಿಸಾಡದೆ, ಇದನ್ನು ಕಂಡ ಸಿಬ್ಬಂದಿ ಇದು ಬಾಂಬ್‌ ಇರಬಹುದು ಎಂದು ಅಂದುಕೊಂಡು ವಿಮಾನವನ್ನು ಪನಾಮಾ ವಿಮಾನದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿರುವ ಘಟನೆ ನಡೆದಿದೆ.

ವಿಮಾನದಲ್ಲಿ ಬಾಂಬ್‌ ಇದೆ ಎನ್ನುವ ಹುಸಿ ಬೆದರಿಕೆ ಕರೆಗಳು ಈ ನಡುವೆ ಹೆಚ್ಚಾಗುತ್ತಿದ್ದಂತೆ ಅಮೆರಿಕದಲ್ಲಿ ಇನ್ನೊಂದು ರೀತಿಯ ಹಾಸ್ಯಮಯ ಪ್ರಸಂಗ ನಡೆದಿದೆ. ವಿಮಾನದ ಶೌಚಾಲಯದಲ್ಲಿ ಯಾರೋ ವ್ಯಕ್ತಿ ವಯಸ್ಕರ ಡೈಪರ್‌ ಸರಿಯಾಗಿ ಕಸದ ಬುಟ್ಟಿಯಲ್ಲಿ ಬಿಸಾಡದೆ, ನೆಲದ ಮೇಲೆ ಬಿಸಾಡಿದ್ದ. ಇದನ್ನು ಕಂಡ ಸಿಬ್ಬಂದಿ ಇದು ಬಾಂಬ್‌ ಇರಬಹುದು ಎಂದು ಅಂದುಕೊಂಡು ವಿಮಾನವನ್ನು ಪನಾಮಾ ವಿಮಾನದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಬಳಿಕ ಎಲ್ಲ ರೀತಿಯ ಪರೀಕ್ಷೆ ಮಾಡಿಸಿದಾಗ ಅದು ಡೈಪರ್‌ ಎಂದು ಪತ್ತೆಯಾಗಿದೆ. ನಮ್ಮ ಹಿರಿಯರು ಸುಮ್ಮನೇ ಹೇಳಿಲ್ಲ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತ!

ಇಸ್ರೋ ಗಗನಯಾನಕ್ಕೆ ಮಹಿಳೆಯರನ್ನು ಕಳಿಸುವ ಉದ್ದೇಶ

ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಏರ್ಲೈನ್ಸ್‌ ಕಠಿಣ ನಿಯಮಗಳ ನಡುವೆ, ಸಾಮಾನ್ಯ ಗೃಹೋಪಯೋಗಿ ವಸ್ತುಗಳನ್ನು ಶಸ್ತ್ರಾಸ್ತ್ರಗಳೆಂದು ತಪ್ಪಾಗಿ ಗ್ರಹಿಸಿದ ಘಟನೆಗಳೂ ಇವೆ.

ಕೇವಲ 1 ರೂ ನಲ್ಲಿದ್ದ ಅನಿಲ್‌ ಅಂಬಾನಿ ಷೇರುಗಳ ಬೆಲೆ ಬಾರೀ ಜಿಗಿತ, 6 ತಿಂಗಳಲ್ಲಿ ಡಬಲ್!

ಟ್ರಾನ್ಸ್‌ಪೋರ್ಟೇಶನ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಷನ್ (ಟಿಎಸ್‌ಎ) ಏಜೆಂಟ್‌ಗಳು ಸೋನಿ (ಎಸ್‌ಎನ್‌ಇಜೆಎಫ್) ಪ್ಲೇಸ್ಟೇಷನ್ ಅನ್ನು ಬಾಂಬ್ ಎಂದು ತಪ್ಪಾಗಿ ಗ್ರಹಿಸಿದ ನಂತರ ಬೋಸ್ಟನ್‌ನ ಲೋಗನ್ ಅಂತರಾಷ್ಟ್ರೀಯ ನಿಲ್ದಾಣಕ್ಕೆ ಬರುವ ವಿಮಾನವನ್ನು ಒಮ್ಮೆ ಸ್ಥಳಾಂತರಿಸಲಾಯಿತು.