ಕರೆ ಮಾಡಿ ಒಟಿಪಿ ಪಡೆದು ವಂಚಿಸುವುದು ಹಳೇ ವರ್ಸನ್: ಸೈಬರ್ ವಂಚಕರ ಹೊಸ ತಂತ್ರ ಇಲ್ಲಿದೆ ನೋಡಿ!
ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳು ಸಾಂಕ್ರಾಮಿಕದಂತೆ ಹೆಚ್ಚಳವಾಗುತ್ತಿವೆ. ಅದರಲ್ಲೂ ಬೆಂಗಳೂರನ್ನು ಕೇಂದ್ರ ಸ್ಥಾನ ಮಾಡಿಕೊಂಡಿರುವ ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಈ ಮೊದಲು ಮೊಬೈಲ್‌ಗೆ ಕರೆ ಮಾಡಿ ಒಟಿಪಿ ಕೇಳಿ ವಂಚಿಸುತ್ತಿದ್ದರು.ಅದೀಗ ಓಲ್ಡ್ ವರ್ಸನ್ ಆಗಿದೆ. ಇದೀಗ ಹೊಸತಂತ್ರದೊಂದಿಗೆ ಜನರನ್ನು ವಂಚಿಸಲು ರೆಡಿಯಾಗಿದ್ದಾರೆ.
ಬೆಂಗಳೂರು (ಆ.22) ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳು ಸಾಂಕ್ರಾಮಿಕದಂತೆ ಹೆಚ್ಚಳವಾಗುತ್ತಿವೆ. ಅದರಲ್ಲೂ ಬೆಂಗಳೂರನ್ನು ಕೇಂದ್ರ ಸ್ಥಾನ ಮಾಡಿಕೊಂಡಿರುವ ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಈ ಮೊದಲು ಮೊಬೈಲ್‌ಗೆ ಕರೆ ಮಾಡಿ ಒಟಿಪಿ ಕೇಳಿ ವಂಚಿಸುತ್ತಿದ್ದರು.ಅದೀಗ ಓಲ್ಡ್ ವರ್ಸನ್ ಆಗಿದೆ. ಇದೀಗ ಹೊಸತಂತ್ರದೊಂದಿಗೆ ಜನರನ್ನು ವಂಚಿಸಲು ರೆಡಿಯಾಗಿದ್ದಾರೆ. ಮೊಬೈಲ್ ಕರೆ, ಒಟಿಪಿ ವಿಷಯದಲ್ಲಿ ನೀವು ಸ್ವಲ್ಪ ಯಾಮಾರಿದ್ರೂ ಬ್ಯಾಂಕ್ ಅಕೌಂಟ್ ಕ್ಷಣ ಮಾತ್ರದಲ್ಲಿ ಖಾಲಿಯಾಗುವುದು ಖಚಿತ.
ನಿಮ್ಮ ಮನೆಗೆ ಬರುತ್ತೆ ಸೈಬರ್ ವಂಚಕರ ಮೊಬೈಲ್‌ಗಿಫ್ಟ್!
ಯಾವುದೋ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುತ್ತೀರಿ. ಜೀವನಪರ್ಯಾಂತ ಶ್ರಮ ವಹಿಸಿ ದುಡಿದ ಹಣ ಬ್ಯಾಂಕ್ ಅಕೌಂಟ್ ನಲ್ಲಿರುತ್ತೆ. ಬ್ಯಾಂಕ್‌ನಲ್ಲಿರುವ ಹಣ ಸುರಕ್ಷಿತವಾಗಿರುತ್ತೆ. ಆದರೆ ವಂಚಕರೂ ನಿಮ್ಮ ಮೂಲಕವೇ ಹಣ ಲಪಟಾಯಿಸಲು ಹೊಸ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಹೀಗಾಗಿ ಬ್ಯಾಂಕ್ ಗಳ ಸೀನಿಯರ್ ಕಸ್ಟಮರ್ ಗಳೇ ಹುಷಾರ್ ಆಗಿರಿ. ನಿಮ್ಮ ಮನೆಗೆ ಗಿಫ್ಟ್ ಕಳಿಸಿ ಗೋಲ್ ಮಾಲ್ ಮಾಡ್ತಾರೆ. ಪ್ರೀಮಿಯರ್ ಕಸ್ಟಮರ್ ಎಂದು ಮೊದಲು ಕರೆ ಮಾಡೊ ಕಳ್ಳರು. ಬಳಿಕ ನಿಮ್ಮ ಮನೆಗೆ 14 ಸಾವಿರ ಮೌಲ್ಯದ ಮೊಬೈಲ್ ಡೆಲಿವರಿ ಮಾಡುತ್ತಾರೆ! ಇದು ನಿಮ್ಮ ನಂಬಿಕೆ ಗಳಿಸಿಕೊಳ್ಳುವ ಮೊದಲ ಹೆಜ್ಜೆ. ಹೊಸ ಮೊಬೈಲ್ ಕಳಿಸಿದಾಕ್ಷಣ ನೀವು ಖದೀಮರನ್ನು ಬ್ಯಾಂಕ್‌ನವರೇ ಎಂದು ನಂಬುವ ಸಾಧ್ಯತೆ ಇರುತ್ತೆ. ಹೊಸ ಮೊಬೈಲ್ ಬಂದ ಖುಷಿಯಲ್ಲಿ ಮೊಬೈಲ್ ಸಿಮ್ ಹಾಕಿ ಬಳಸಲು ಶುರು ಮಾಡಿದ್ರೋ ಅಕೌಂಟ್ ನಲ್ಲಿರುವ ಲಕ್ಷ ಲಕ್ಷ ಹಣ ಕ್ಷಣ ಮಾತ್ರದಲ್ಲಿ ಮಾಯ!
ಸಿಮ್ ವೆರಿಫಿಕೇಶನ್ ಹೊಸ ನೀತಿ ಜಾರಿ, ಥಂಬ್, ಬಯೋಮೆಟ್ರಿಕ್ KYC ಕಡ್ಡಾಯ!
ರಾಜಸ್ಥಾನ ಮೂಲದ ರಾಜ್ ಪಾಲ್ ಸಿಂಗ್ ಎಂಬ ಉದ್ಯಮಿಯೊಬ್ಬರಿಗೆ ವಂಚನೆ. ಈ ತಂತ್ರ ಬಳಿಸಿ ಲಕ್ಷ ಲಕ್ಷ ವಂಚಿಸಿರುವ ಸೈಬರ್ ಖದೀಮರು. ಸೈಬರ್ ವಂಚಕರ ಮಾತು ನಂಬಿದ ಉದ್ಯಮಿ ಖಾತೆಯ 12 ಲಕ್ಷರೂ. ಮಂಗಮಾಯ! ಜೀವನ್ ಭೀಮಾನಗರ ನಿವಾಸಿಯಾದ ರಾಜ್ ಪಾಲ್ ಸಿಂಗ್. ಇವರಿಗೆ ಕರೆ ಮಾಡಿರುವ ವಂಚಕರು, ರಾಜಸ್ಥಾನದ ನಮ್ಮ ಬ್ಯಾಂಕ್ ಪ್ರೀಮಿಯರ್ ಕಸ್ಟಮರ್ ನಿಮಗಾಗಿ ನಮ್ಮಿಂದ ಗಿಫ್ಟ್ ನೀಡಲಾಗುತ್ತೆ ಎಂದು ಕರೆಮಾಡಿದ್ದಾರೆ.
ಕರೆ ಮಾಡಿದ ವಾರಕ್ಕೆ ರಾಜ್ ಪಾಲ್ ಸಿಂಗ್ ಮನೆಗೆ ಮೊಬೈಲ್ ಗಿಫ್ಟ್ ಬಂದಿದೆ. 14 ಸಾವಿರ ರೂ. ಮೌಲ್ಯದ ಮೊಬೈಲ್ ಡೆಲಿವರಿ ಮಾಡಿ ನಂಬಿಕೆ ಗಳಿಸಿದ ವಂಚಕರು. ಗಿಫ್ಟ್ ರೂಪದಲ್ಲಿ ಬಂದ ಮೊಬೈಲ್ ನಲ್ಲೆ ಬ್ಯಾಂಕ್ ಬಳಸಲು ಸೂಚನೆ ನೀಡಿದ್ದಾರೆ. ಅದರಂತೆ ಉದ್ಯಮಿ ರಾಜ್‌ಪಾಲ್ ತಮ್ಮ ಸಿಮ್ ಹೊಸ ಮೊಬೈಲ್ ಗೆ ಹಾಕಿ ಅಕೌಂಟ್ ತೆರೆದಿದ್ದಾರೆ. ಇದನ್ನೇ ಹೊಂಚುಹಾಕುತ್ತಿದ್ದ ಖದೀಮರು ಮತ್ತೆ ಉದ್ಯಮಿಗೆ ಒಟಿಪಿ ನೀಡುವಂತೆ ಕರೆ ಮಾಡಿದ್ದಾರೆ. ದುಬಾರಿ ಮೊಬೈಲ್ ಗಿಫ್ಟ್ ಕಳಿಸಿರುವ ವಂಚಕರನ್ನು ಬ್ಯಾಂಕ್‌ನವರೇ ಎಂದು ನಂಬಿದ ರಾಜ್‌ಪಾಲ್ ಕೂಡಲೇ ಒಟಿಪಿ ನೀಡಿದ್ದಾರೆ. ಒಟಿಪಿ ಬಂದ ಕೂಡಲೇ ರಾಜ್ ಪಾಲ್ ಸಿಂಗ್ ಖಾತೆಯಿಂದ 12 ಲಕ್ಷ ರೂಪಾಯಿ ಮಾಯ!
ಮಗನ ನಾಮಕರಣ ಆಹ್ವಾನ ಪತ್ರಿಕೆಯಲ್ಲೂ ಸೈಬರ್ ಜಾಗೃತಿ ಮೂಡಿಸಿದ ಕಾನ್‌ಸ್ಟೇಬಲ್!
ಯಾಮಾರಿದ ಉದ್ಯಮಿ ವಂಚಕರ ಮಾತು ನಂಬಿ ಹಣ ಕಳೆದುಕೊಂಡು ಗರಬಡಿದವನಂತೆ ಕುಳಿತುಬಿಟ್ಟ. ಸದ್ಯ ಈ ಪ್ರಕರಣ ಸಂಬಂಧ ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಠಾಣೆ ದೂರು ನೀಡಿರುವ ಉದ್ಯಮಿ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು. ಗಿಫ್ಟ್ ರೂಪದಲ್ಲಿ ಡೋರ್ ಡೆಲಿವರಿಯಾದ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಸೈಬರ್ ವಂಚಕರ ಹೊಸ ತಂತ್ರದ ಬಗ್ಗೆ ಜಾಗೃತರಾಗಿರಲು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.