ನಂದಿ ಬೆಟ್ಟದ ತಪ್ಪಲಿನಿಂದ ಹೊಸ ಜೇಡ ಪ್ರಭೇದ ಪತ್ತೆ
ನಂದಿ ಬೆಟ್ಟದ ತಪ್ಪಲಿನ ದೊಡ್ಡಬಳ್ಳಾಪುರದ ಹೆಗ್ಗಡಿಹಳ್ಳಿ ಗ್ರಾಮದ ಅಂಚಿನಿನಲ್ಲಿ ಹೊಸ ಜೇಡ ಪ್ರಬೇಧವೊಂದನ್ನು ಪರಿಸರಾಸಕ್ತರು ಪತ್ತೆ ಹಚ್ಚಿದ್ದಾರೆ. ಇದು ಜಗತ್ತಿನ 50,000 ಜೇಡ ಪ್ರಬೇಧಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾದಂತಾಗಿದೆ.
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ (ಡಿ.21): ನಂದಿ ಬೆಟ್ಟದ ತಪ್ಪಲಿನ ದೊಡ್ಡಬಳ್ಳಾಪುರದ ಹೆಗ್ಗಡಿಹಳ್ಳಿ ಗ್ರಾಮದ ಅಂಚಿನಿನಲ್ಲಿ ಹೊಸ ಜೇಡ ಪ್ರಬೇಧವೊಂದನ್ನು ಪರಿಸರಾಸಕ್ತರು ಪತ್ತೆ ಹಚ್ಚಿದ್ದಾರೆ. ಇದು ಜಗತ್ತಿನ 50,000 ಜೇಡ ಪ್ರಬೇಧಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾದಂತಾಗಿದೆ. ನದಿಗಳು ಮೂಲ ಸ್ವರೂಪ ಕಳೆದುಕೊಂಡು ಹಾಳಾಗುತ್ತಿರುವ ಮತ್ತು ಜನರ ಮನಸ್ಸಿನಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ, ನಂದಿ ಬೆಟ್ಟದಲ್ಲಿ ಹುಟ್ಟುವ ನದಿಯ ನೆನಪಿಗಾಗಿ ಮತ್ತು ಸಂರಕ್ಷಣೆಗಾಗಿ ಈ ಹೊಸ ಜೇಡ ಪ್ರಬೇಧಕ್ಕೆ ‘ಅರ್ಕಾವತಿ’ ಎಂದು ನದಿಯ ಹೆಸರಿಡಲಾಗಿದೆ. ಸಾಲ್ಟಿಸಿಡೆ ಕುಟುಂಬಕ್ಕೆ ಈ ಜೇಡ ಸೇರಿದ್ದು, ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಎಗರುವ ಜೇಡಗಳ ಕುಟುಂಬಕ್ಕೆ ಸೇರಿದೆ. ಅರ್ಧ ಸೆಂಟಿ ಮೀಟರ್ಗೂ ಸ್ವಲ್ಪ ಕಡಿಮೆ ಅಳತೆಯ ಈ ಜೇಡ ಬಹಳ ಚುರುಕಾಗಿ ಎಗರಿ ಕ್ಷಣಾರ್ಧದಲ್ಲಿ ಮಾಯವಾಗಬಲ್ಲದು.
ರಷ್ಯಾ ಮೂಲದ ಅಂತರಾಷ್ಟ್ರೀಯ ಜರ್ನಲ್ ’ArthopodaSelecta’ ನಲ್ಲಿ ಈ ಜೇಡದ ಕುರಿತಾದ ವೈಜ್ಞಾನಿಕ ಬರಹ ಪ್ರಕಟವಾಗಿದೆ. ಇದನ್ನು ಪರಿಸರಾಸಕ್ತ ಲೋಹಿತ್ ವೈ ಟಿ, ಸಾಲಿಗ ತಂಡದ ಡಾ. ಅಭಿಜಿತ್ ಎಪಿಸಿ, ಚೆನ್ನೆತ್ರೖನ ಎಂಟಮಾಲಜಿ ಇನ್ಸಿ$್ಟಟ್ಯೂಟ್ನ ಡಾ. ಜಾನ್ ಕೆಲಬ್ ಹಾಗೂ ಮರಿಯಾ ಪ್ಯಾಕಿಯಂ ಕೂಡಿ ರಚಿಸಿದ್ದಾರೆ. ಈ ವೈಜ್ಞಾನಿಕ ಲೇಖನದ ಪ್ರಕಾರ ಜೇಡದ ಜಾತಿ (Genus) ’colopsus’/ಕಲಾಪುತ್ರ್ಸಸ್, ಇದು ಕೂಡ ಅಪರೂಪದ್ದಾಗಿದ್ದು ಭಾರತ, ಚೀನಾ, ಶ್ರೀಲಂಕಾ ಮತ್ತು ವಿಯಟ್ನಾಮ್ ಸೇರಿ ಜಗತ್ತಿನ 4 ದೇಶಗಳಲ್ಲಿ ಮಾತ್ರ ನೋಡಬಹುದು. ಈಗ ಸಿಕ್ಕಿರುವ ಈ ಜಾತಿಯ ಈ ಹೊಸ ಪ್ರಬೇಧವು (species) ಇನ್ನೂ ಅಪರೂಪವೆಂದು ಈ ಮೂಲಕ ತಿಳಿದು ಬರುತ್ತದೆ.
ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಮತ್ತೆ ಕರ್ನಾಟಕ ವಿರುದ್ಧ ಕಿಡಿ
ಹೆಚ್ಚು ಪ್ರಭೇದಗಳ ಶೋಧನೆಗೆ ಪುಷ್ಠಿ: ನಮ್ಮ ದೇಶದಲ್ಲಿ 2000 ಜೇಡ ಪ್ರಬೇಧಗಳಿದ್ದು, ಕರ್ನಾಟಕದಲ್ಲಿ 500 ಪ್ರಬೇಧಗಳಿವೆ. ಇನ್ನೂ ಹೆಚ್ಚಿನ ಅಧ್ಯಯನಗಳಾದರೆ, ಜೇಡದ ಬಗ್ಗೆ ವಿಜ್ಞಾನಿಗಳಲ್ಲದ ಸಾಮಾನ್ಯರು ಜೇಡಗಳನ್ನು ಗುರುತಿಸುವಂತಾದರೆ ಇನ್ನೂ ಹೆಚ್ಚು ಪ್ರಬೇಧಗಳನ್ನು ಸಂಶೋಧಿಸಬಹುದು, ಜಗತ್ತಿಗೆ ಪರಿಚಯಿಸಬಹುದು ಮತ್ತು ಅದು ವಿಜ್ಞಾನ ಲೋಕಕ್ಕೆ ಜನ ಸಾಮಾನ್ಯರ ಕೊಡುಗೆಯಾಗುತ್ತದೆ. ಜೇಡ ಪತ್ತೆಯ ಹಾದಿ: ಮೊದಲ ಬಾರಿಗೆ ವೈ.ಟಿ.ಲೋಹಿತ್ ಈ ಜೇಡವನ್ನು ನೈಸರ್ಗಿಕ ಪರಿಸರದಲ್ಲಿ ಕಂಡಿದ್ದು, ನಂತರದ ಜೇಡ ಹುಡುಕಾಟ ಮತ್ತು ಜೇಡದ ಮಾದರಿ ಸಂಗ್ರಹಣೆಯಲಿ ಚಿನ್ಮಯ್ ಸಿ ಮಳಿಯೆ, ಆಶಾ ಎಸ್, ಜನಾರ್ದನ ಆರ್, ಚೇತನ್ ಜೆ, ಎಸ್ ಪಿ ಹರಿಚರನ್, ನವೀನ್ ಐಯ್ಯರ್, ಸಾಕ್ಷಿ ಕೆ ಮತ್ತು ಅಕ್ಷಯ್ ದೇಶಪಾಂಡೆ ತಂಡ ಐದು ತಿಂಗಳ ವಾರಾಂತ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು.
ಸುವರ್ಣಸೌಧ ಬಳಿ ಸಾರಿಗೆ ನೌಕರರ ಅಹೋರಾತ್ರಿ ಧರಣಿ: ನಿರ್ವಾಹಕಿ ಜಯಶ್ರೀ ಅಸ್ವಸ್ಥ
ಗಂಡು ಜೇಡ, ಹೆಣ್ಣು ಜೇಡ ಮತ್ತು ಮರಿ ಜೇಡಗಳನ್ನು ತಂಡ ನೋಡಿದ್ದು, ಈ ಜೇಡವನ್ನು ಸಾಮಾನ್ಯವಾಗಿ ಬೆಟ್ಟದ ತಪ್ಪಲಿನ ಎಲ್ಲಾ ಪ್ರದೇಶದಲ್ಲೂ ನೋಡಲು ಸಾಧ್ಯವಿಲ್ಲ ಮತ್ತು ಸಂಖ್ಯೆಯೂ ಬಹಳ ವಿರಳವಾಗಿದೆ. ತರಗೆಲೆ ಉದುರಿದ ಬಂಡೆಯಿರುವ ನೆಲ ಮತ್ತು ಸುತ್ತ ಸ್ವಲ್ಪ ಕುರುಚಲು ಮತ್ತು ಒಣ ಹುಲ್ಲು ಇರುವ ಪ್ರದೇಶದಲ್ಲಿ ಜೇಡವು ಕಂಡು ಬಂದಿದ್ದು ಜೇಡವು ಗಿಡ ಮರಗಳ ಮೇಲೆ ಕಾಣಿಸಿಲ್ಲ. ಕಾಡು ಮಲ್ಲಿಗೆ ಮತ್ತು ನೀಲಗಿರಿಯ ಸುರಳಿ ಸುತ್ತಿದ ಎಲೆಗಳಲ್ಲಿ ಸಣ್ಣ ಗೂಡು ನಿರ್ಮಿಸಿ ರಾತ್ರಿ ವಿಶ್ರಮಿಸುತ್ತದೆ, ಇದು ಹಗಲು ಚಟುವಟಿಕೆಯಿಂದ ಕೂಡಿರುತ್ತದೆ. ಸುರಳಿ ಸುತ್ತಿರುವ ಒಣ ಎಲೆಗಳಲ್ಲಿ ಹೆಣ್ಣು ಜೇಡ ಬಲೆಯ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು ಮರಿಗಳು ಆಗುವವರೆಗೂ ಕಾಯುತ್ತದೆ. ಮುಂದಿನ ದಿನಗಳಲ್ಲಿ ಈ ಹೊಸ ಜೇಡದ ಕುರಿತಾದ ಇನ್ನೂ ಹೆಚ್ಚು ಸಂಶೋಧನೆಗಳು ಮಾಡುವ ಅವಶ್ಯಕತೆ ಇದೆ ಮತ್ತು ತಂಡ ಅದರಲ್ಲಿ ಉತ್ಸುಕವಾಗಿದೆ.