ಲಿಫ್ಟ್ ಕೇಳಿಕೊಂಡೇ 14 ದೇಶ, 20 ಸಾವಿರ ಕಿಮೀ ಪ್ರಯಾಣಿಸಿದ ಭೂಪ: ಭಾರತವೇ ಬೆಸ್ಟ್ ಅಂತಾನೆ!

ಏರೋಪ್ಲೇನು ಏರಲಿಲ್ಲ, ರೈಲು ಹತ್ತಲಿಲ್ಲ, ಬಸ್‌ಗೆ ಅಂತ ಒಂದು ಪೈಸೆ ಹಣವನ್ನೂ ಖರ್ಚು ಮಾಡ್ಲಿಲ್ಲ. ಆದರೂ ಅವನು ಸುಮಾರು 20 ಸಾವಿರ ಕಿಲೋಮೀಟರ್ ಮೀರಿದ ಪ್ರಯಾಣ ಮಾಡಿದ್ದಾನೆ. 

A france tourist Lucas  is traveling across continents asking for a lift rav

ಮೈಸೂರು (ಆ.13): ನಾವು-ನೀವು ಯಾರನ್ನಾದರೂ ಲಿಫ್ಟ್ ಕೇಳಿದ್ವಿ ಅಂತಿಟ್ಕೊಳ್ಳಿ ಎಷ್ಟು ದೂರ ಕೇಳಬಹುದು?  ಪಕ್ಕದ ಬೀದಿಯೋ, ಒಂದೋ ಎರಡೋ ಕಿಲೋಮೀಟರ್ ಅಂತರದಲ್ಲಿಇರುತ್ತೆ. ಅಬ್ಬಬ್ಬಾ ಅಂದ್ರೆ ಒಂದೂರಿಂದ ಇನ್ನೊಂದೂರಿಗೆ  ಹೋಗೋಕೆ ಲಿಫ್ಟ್ ಕೇಳಿರ್ತಿವಿ. ಹಾಗಂತ ಜಿಲ್ಲೆಯಿಂದ ಜಿಲ್ಲೆಗೆ ಹೋಗೊಕೆ, ನೂರಾರು ಕಿಲೋಮೀಟರ್ ಲಿಫ್ಟ್ ಕೇಳಿದ್ರೆ ಕೊಡ್ತಾರಾ? ಇಲ್ಲ ತಾನೆ. ಆದರೆ ಇಲ್ಲೊಬ್ಬ ಭೂಪ ಊರಲ್ಲ, ಜಿಲ್ಲೆಯಲ್ಲ, ರಾಜ್ಯ-ದೇಶವೂ ಅಲ್ಲ. ಕೇವಲ ಲಿಫ್ಟ್ ಮೂಲಕವೇ ಖಂಡಾಂತರ ಪ್ರವಾಸ ಮಾಡುತ್ತಿದ್ದಾನೆ ಎಂದರೆ ನೀವು ನಂಬುತ್ತೀರಾ? ಹೌದು ನಂಬಲೇಬೇಕು. ಅಂತಹ ಲಿಫ್ಟ್ ಜರ್ನಿಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಏರೋಪ್ಲೇನು ಏರಲಿಲ್ಲ, ರೈಲು ಹತ್ತಲಿಲ್ಲ, ಬಸ್‌ಗೆ ಅಂತ ಒಂದು ಪೈಸೆ ಹಣವನ್ನೂ ಖರ್ಚು ಮಾಡ್ಲಿಲ್ಲ. ಆದರೂ ಅವನು ಸುಮಾರು 20 ಸಾವಿರ ಕಿಲೋಮೀಟರ್ ಮೀರಿದ ಪ್ರಯಾಣ ಮಾಡಿದ್ದಾನೆ. 

ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ: ಸಚಿವ ಎಚ್‌.ಕೆ.ಪಾಟೀಲ್‌

ಅಂತಹ ಸಾಹಸ ಪ್ರಯಾಣಕ್ಕೆ ಇಳಿದ ಭೂಪನ ಹೆಸರು ಲುಕಾಸ್ ವೆನ್ನಾರ್(Lucas Vennar.). ದೂರದ ಫ್ರಾನ್ಸ್ ದೇಶದ ಪ್ರಜೆ. 23 ವರ್ಷದ ಲುಕಾಸ್ ವೆನ್ನಾರ್ ಕಳೆದ 7 ತಿಂಗಳಿನಿಂದ ವಿಶ್ವ ಪರ್ಯಟನೆ ಮಾಡುತ್ತಿದ್ದು ಇದಕ್ಕಾಗಿ ಅವನು ಒಂದೇ ಒಂದು ರೂಪಾಯಿ ಸಂಚಾರಿ ವೆಚ್ಚ ಖರ್ಚು ಮಾಡಿಲ್ಲ.

ಲುಕಾಸ್ ವೆನ್ನಾರ್‌ ಇದೇ ವರ್ಷ ಫೆಬ್ರವರಿ 4 ರಂದು ಫ್ರಾನ್ಸ್ ನಿಂದ ತನ್ನ ವಿಶೇಷ ಪ್ರಯಾಣ ಆರಂಭಿಸಿದ್ದಾರೆ. ಎಲ್ಲಿಯೂ ಟಿಕೇಟ್ ಖರೀದಿಸದೆ ಕೇವಲ ಲಿಫ್ಟ್ ಮೂಲಕ ಪ್ರಯಾಣ ಮಾಡುತ್ತಿರುವ ಇವರು ಹಡಗು, ಕಾರು, ಬೈಕ್, ಟ್ರಕ್‌ ಗಳ ಮೂಲಕ ಸಂಚಾರ ಮಾಡಿಕೊಂಡು ಫ್ರಾನ್ಸ್‌ನಿಂದ ಆರಂಭಿಸಿ ಆಫ್ರಿಕಾ, ಚೈನಾ, ಟಿಬೇಟ್, ಖಜಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿ 14 ಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿದ್ದಾನೆ.

ಭಾರತವೇ ಬೆಸ್ಟ್ ಅಂತಾನೆ ಲುಕಾಸ್:

ಇಷ್ಟೆಲ್ಲ ದೇಶಗಳನ್ನು ಸುತ್ತಾಡಿರುವ ಲುಕಾಸ್ ಸದ್ಯ ಭಾರತದ ಪ್ರವಾಸದಲ್ಲಿ‌ ಇದ್ದಾರೆ. ಉತ್ತರ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚಾರ ಮಾಡುತ್ತಿರುವ ಇವರು ಮೈಸೂರಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮೈಸೂರು ಅರಮನೆ ನೋಡಿ ಸಕತ್ ಖುಷಿಪಟ್ಟರು. ಭಾರತೀಯರ ಆತ್ಮೀಯತೆಗೆ ಮನಸೋತಿರುವ ಈತ ಭಾರತದಲ್ಲಿ ಒಟ್ಟು ಎರಡು ಸಂಚಾರ ಮಾಡಿದ್ದಾರೆ. ಕೆಆರ್‌ಎಸ್ ವೀಕ್ಷಣೆ ಮುಗಿಸಿ ನಿಂತಿದ್ದವರಿಗೆ ಶ್ರೀರಂಗಪಟ್ಟಣದ ಭರತ್ ಎಂಬುವರು ಮೈಸೂರು ವರೆಗೆ ಲಿಫ್ಟ್ ಕೊಟ್ಟಿದ್ದಾರೆ.

ಮೈಸೂರು ಪ್ರವಾಸ ಮುಗಿಸಿ, ಶ್ರೀಲಂಕಾ ಕಡೆಗೆ ಸಂಚಾರ ಆರಂಬಿಸಿರುವ ಈತನಿಗೆ ಸ್ವಿಟ್ಜರ್ಲೆಂಡ್‌‌ ವರೆಗೆ ಲಿಫ್ಟ್ ಮೂಲಕವೇ ಸಂಚಾರ ಮಾಡುವ ಗುರಿ ಇದೆ. ಇವರ ವಿಶೇಷ ಪ್ರವಾಸ ಯಶಸ್ವಿಯಾಗಲಿ ಎನ್ನುವುದು ನಮ್ಮ ಹಾರೈಕೆ.

ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​

- ಕ್ಯಾಮೆರಾಮನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.

Latest Videos
Follow Us:
Download App:
  • android
  • ios