ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆ (ಅ.15): ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ನಿನ್ನೆ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಶೋಭಾಯಾತ್ರೆ ಮೆರವಣಿಗೆ ವೇಳೆ ನೆಡದಿರುವ ಘಟನೆ. ಮೆರವಣಿಗೆ ವೇಳೆ ಯಾವುದೇ ಅನಾಹುತವಾಗಂತೆ ಭದ್ರತೆಗೆ ನಿಯೋಜಿತವಾಗಿದ್ದ ಪೊಲೀಸ್ ಸಿಬ್ಬಂದಿ. ಪಿಬಿ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದಾಗ ಕುಡುಕ ವ್ಯಕ್ತಿಯಿಂದ ಪೊಲೀಸ್ ಪೇದೆಯೊಂದಿಗೆ ಕಿರಿಕ್. ಪೊಲೀಸ್ ಸಿಬ್ಬಂದಿಗೆ ಅವಾಚ್ಯಾವಾಗಿ ನಿಂದನೆ ಮಾಡಿ ಮಾಡಿದ ವ್ಯಕ್ತಿ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಮುಖದ ಮೇಲೆ ಪಂಚ್ ಮಾಡಿರುವ ಕುಡುಕ. 

ನಿನ್ನೆ ನಡೆದಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಪೊಲೀಸರು. ಕುಡಿದ ಮತ್ತಿನಲ್ಲಿ ಹಲ್ಲೆಗೆ ಮುಂದಾಗಿದ್ದ ಆಸಾಮಿ ಪೊಲೀಸರ ಕೈಗೆ ಸಿಗುವುದೊಂದೇ ಬಾಕಿ. ಕಾನೂನು ಕೈಗೆತ್ತಿಕೊಂಡು ಪೊಲೀಸಪ್ಪನ ಮೇಲೆಯೇ ಕೈಮಾಡಿದ ಕುಡುಕನಿಗೆ ಪೊಲೀಸರು ಗಣಪತಿಯ ಕಜ್ಜಾಯ ಕೊಡುವುದು ಗ್ಯಾರಂಟಿ.

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಮಲಗಿದ ಭೂಪ, ಬೈಕ್ ಇಂಡಿಕೇಟರ್‌ನಿಂದ ಉಳಿದ ಪ್ರಾಣ..!