Asianet Suvarna News Asianet Suvarna News

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಮಲಗಿದ ಭೂಪ, ಬೈಕ್ ಇಂಡಿಕೇಟರ್‌ನಿಂದ ಉಳಿದ ಪ್ರಾಣ..!

ಮಹಾಲಯ ಅಮಾವಸ್ಯೆಗೆಂದು ಹಾಸನದಿಂದ ಮೂಡಿಗೆರೆ ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿ, ವಾಪಸ್ ಹೋಗುವಾಗ ಫುಲ್ ಟೈಟ್ ಆಗಿ ಬೈಕ್ ಓಡಿಸಲಾಗದೆ ಬೈಕನ್ನೂ ರಸ್ತೆಯಲ್ಲಿ ಮಲಗಿಸಿ, ತಾನೂ ರಸ್ತೆಯಲ್ಲೇ ಮಲಗಿದ್ದ ವ್ಯಕ್ತಿ. 

Drunken Man Slept on the Main Road in Chikkamgaluru grg
Author
First Published Oct 10, 2023, 11:18 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.10): ಕುಡಿದ ಮತ್ತಿನಲ್ಲಿ ಬೈಕ್ ಸವಾರನೋರ್ವ ಬೈಕ್ ಓಡಿಸಲಾಗದೆ ರಸ್ತೆಯಲ್ಲೇ ಮಲಗಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆದರೆ, ರಸ್ತೆಯಲ್ಲಿ ಮಲಗಿದ್ದ ಬೈಕ್ ಸವಾರನ ಬೈಕಿನ ಇಂಡಿಕೇಟರ್ ಆನ್ ಇದ್ದಿದ್ದರಿಂದ ಆತನ ಜೀವ ಉಳಿದಿದೆ. 

ಮಹಾಲಯ ಅಮಾವಸ್ಯೆಗೆಂದು ಹಾಸನದಿಂದ ಮೂಡಿಗೆರೆ ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೋರ್ವ ವಾಪಸ್ ಹೋಗುವಾಗ ಫುಲ್ ಟೈಟ್ ಆಗಿ ಬೈಕ್ ಓಡಿಸಲಾಗದೆ ಬೈಕನ್ನೂ ರಸ್ತೆಯಲ್ಲಿ ಮಲಗಿಸಿ, ತಾನೂ ರಸ್ತೆಯಲ್ಲೇ ಮಲಗಿದ್ದನು. 
ಸ್ಥಳೀಯರು ಅಪಘಾತವಾಗಿರಬಹುದೆಂದು ಆಂಬುಲೆನ್ಸ್‌ ಫೋನ್ ಮಾಡಿದ್ದರು. ಆಂಬುಲೆನ್ಸ್ ಬಂದು ನಿಂತ ಕೂಡಲೇ ಎಣ್ಣೆ ಏಟಲ್ಲಿದ್ದ ವ್ಯಕ್ತಿ ಎದ್ದು ಕೂತಿದ್ದಾನೆ. ರಾತ್ರಿಯ ಕಗ್ಗತ್ತಲಲ್ಲಿ ರಸ್ತೆಯಲ್ಲಿ ಹತ್ತಾರು ವಾಹನಗಳು ಓಡಾಡುತ್ತಿದ್ದವು. ಆದರೆ, ಅದೃಷ್ಟವಶಾತ್ ಯಾವ ವಾಹನವೂ ಆತನ ಮೇಲೆ ಹತ್ತಿಲ್ಲ. ಬೈಕಿನ ಇಂಡಿಕೇಟರ್ ಆನ್ ಇದ್ದಿದ್ದರಿಂದ ಆತನ ಜೀವ ಉಳಿದಿದೆ. 

ಈ ಗ್ರಾಮದಲ್ಲಿ ಗಣೇಶನಿಗಿಂತ ಗೌರಿಗೇ ಅಗ್ರಸ್ಥಾನ: ಹೆಂಗಳೆಯರ ಇಷ್ಟಾರ್ಥ ಈಡೇರಿಸೋ ಆರಾಧ್ಯ ದೇವತೆ..!

ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಬಣಕಲ್ ಪೊಲೀಸರು ಬೈಕ್ ಸವಾರನ ಬೈಕ್ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆತನನ್ನ ಠಾಣೆಗೆ ಬರ ಹೇಳಿ ಕ್ಲಾಸ್ ತೆಗೆದುಕೊಂಡು ಕಳುಹಿಸಿದ್ದಾರೆ.

Follow Us:
Download App:
  • android
  • ios