Asianet Suvarna News Asianet Suvarna News

ನಾಗಪಂಚಮಿಗೆ ತಿಂಗಳ ಮೊದಲೇ ಮನೆಗೆ ಬಂದ ನಾಗಪ್ಪ!

ಕುಟುಂಬ ಸದಸ್ಯರು ಮನೆಯಲ್ಲಿದ್ದಾಗಲೇ ನಾಗರಹಾವು ಮನೆಯೊಳಗೆ ನುಗ್ಗಿ ಕೆಲವೊತ್ತು ಆತಂಕ ಸೃಷ್ಟಿಸಿದ ಘಟನೆ ಚಿತ್ರದುರ್ಗದ ವಿದ್ಯಾನಗರದ ಮನೆಯೊಂದರಲ್ಲಿ ನಡೆದಿದೆ. 

A cobra was spotted in a house in Chitradurga video viral rav
Author
First Published Jul 1, 2024, 11:10 AM IST

ಚಿತ್ರದುರ್ಗ (ಜು.1): ಕುಟುಂಬ ಸದಸ್ಯರು ಮನೆಯಲ್ಲಿದ್ದಾಗಲೇ ನಾಗರಹಾವು ಮನೆಯೊಳಗೆ ನುಗ್ಗಿ ಕೆಲವೊತ್ತು ಆತಂಕ ಸೃಷ್ಟಿಸಿದ ಘಟನೆ ಚಿತ್ರದುರ್ಗದ ವಿದ್ಯಾನಗರದ ಮನೆಯೊಂದರಲ್ಲಿ ನಡೆದಿದೆ. 

ಸುರೇಶ್ ಎಂಬುವವರ ಮನೆಯಲ್ಲಿ ದಿಢೀರನೇ ಪ್ರತ್ಯಕ್ಷನಾದ ನಾಗಪ್ಪ. ಮನೆಯಲ್ಲಿ ಟಿವಿ ನೋಡುತ್ತಿರುವಾಗಲೇ ಒಳಬಂದು ಹೆಡೆಯೆತ್ತಿ ಬುಸುಗುಟ್ಟಿ ನಾಗಪ್ಪ. ಯಾರ ಮೇಲೆ ದಾಳಿ ಮಾಡುವುದೋ ಎಂಬ ಆತಂಕಕ್ಕೊಳಗಾಗಿದ್ದ ಮನೆಯವರು. ಆದರೆ ಹೆಡೆಯೆತ್ತಿ ಟಿವಿ ನೋಡಿದ ನಾಗರಾಜ. ಈ ವೇಳೆ ಎಲ್ಲೂ ಕದಲದೆ ಇದ್ದ ಸ್ಥಳದಲ್ಲೇ ಭಯದಿಂದ ನಡುಗಿ ಕುಳಿತಿದ್ದ ಮನೆಯವರು. ಅದೃಷ್ಟವಶಾತ್ ಹಗಲಿನ ವೇಳೆ ಪ್ರತ್ಯಕ್ಷವಾಗಿದೆ. ಘಟನೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. 

 

ಚಡ್ಡಿಯೊಳಗೆ ಬುಸ್ ಬುಸ್ ಅಂತಿತ್ತು ನಾಗರಹಾವು; ಎಚ್ಚರವಾದಾಗ ಆತ ಮಾಡಿದ್ದು ತಿಳಿದ್ರೆ ಏನ್ ಹೇಳ್ತೀರಾ..?

ಮನೆಯಲ್ಲಿ ನಾಗರಹಾವು ಪ್ರತ್ಯಕ್ಷವಾದ ಬಳಿಕ ಹಾವು ಸಂರಕ್ಷಣೆ ಮಾಡುವ ಚಿತ್ರದುರ್ಗದ ಸ್ನೇಕ್ ಶಿವುಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಶಿವು ನಾಗರಹಾವನ್ನು ನಾಜೂಕಾಗಿ ಹಿಡಿದು ಚೀಲದಲ್ಲಿ ಹಾಕಿಕೊಂಡು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವು ಹಿಡಿದ ಬಳಿಕವೇ ಮನೆಯವರು ನಿಟ್ಟುಸಿರುವ ಬಿಟ್ಟಿದ್ದಾರೆ.

Latest Videos
Follow Us:
Download App:
  • android
  • ios