ಹೊಲದಲ್ಲಿ ಉಳುಮೆ ಮಾಡುವಾಗ ಕೃಷಿ ಹೊಂಡದಲ್ಲಿ ಮುಳುಗಿ ದುರ್ಮರಣಕ್ಕೀಡಾದ ಘಟನೆ ಶಿವಮೊಗ್ಗ ತಾಲೂಕಿನ ಚೆನ್ನಳ್ಳಿ ಗ್ರಾಮದ ಕೃಷಿ ಹೊಂಡದಲ್ಲಿ ನಡೆದಿದೆ.

ಶಿವಮೊಗ್ಗ (ಮೇ.24): ಹೊಲದಲ್ಲಿ ಉಳುಮೆ ಮಾಡುವಾಗ ಕೃಷಿ ಹೊಂಡದಲ್ಲಿ ಮುಳುಗಿ ದುರ್ಮರಣಕ್ಕೀಡಾದ ಘಟನೆ ಶಿವಮೊಗ್ಗ ತಾಲೂಕಿನ ಚೆನ್ನಳ್ಳಿ ಗ್ರಾಮದ ಕೃಷಿ ಹೊಂಡದಲ್ಲಿ ನಡೆದಿದೆ.

ಚೆನ್ನಳ್ಳಿ ಗ್ರಾಮದ ಮಹೇಶ್ ಎಂಬುವರ ಮಗ ಅಭಯ್ (14), ಇದೇ ಗ್ರಾಮದ ಮಾಲತೇಶ್ (26) ಮೃತ ದುರ್ದೈವಿಗಳು. ಮಹೇಶ್ ಮಾಲೀಕತ್ವದ ಟ್ರ್ಯಾಕ್ಟರ್‌ನಿಂದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಮಾಲತೇಶ್. ಇದೇ ವೇಳೆ ಮಹೇಶ್ ಮಗ ಅಭಯ್ ಟ್ರ್ಯಾಕ್ಟರ್‌ ಮೇಲೆ ಕುಳಿತು ಮಾಲತೇಶ್‌ ಹಿಂದೆ ದುಂಬಾಲು ಬಿದ್ದು ಜಮೀನಿಗೆ ಹೋಗಿದ್ದ. 

ಚಿಂತಾಮಣಿ: ಮಗನಿಗೆ ಈಜು ಕಲಿಸಲು ಹೋಗಿ ತಂದೆ ನೀರುಪಾಲು

ಅಭಯ್‌ನನ್ನ ಕೆಳಗಿಳಿಸಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಕೃಷಿ ಹೊಂಡದ ಪಕ್ಕ ನಿಂತಿದ್ದ ಅಭಯ್ ಅಯಾತಪ್ಪಿ ಹೊಂಡಕ್ಕೆ ಬಿದ್ದಿದ್ದಾನೆ. ಕೃಷಿ ಹೊಂಡದಿಂದ ಮೇಲೆ ಬರಲಾರದೆ ಒದ್ದಾಡುವುದನ್ನು ಕಂಡು ಮಾಲತೇಶ್ ಟ್ರ್ಯಾಕ್ಟರ್ ನಿಲ್ಲಿಸಿ ಬಾಲಕನನ್ನ ಮೇಲೆತ್ತಲು ಧಾವಿಸಿದ್ದಾನೆ. ಆದರೆ ಕೃಷಿ ಹೊಂಡದಿಂದ ಇಬ್ಬರೂ ಮೇಲೆ ಬರಲಾಗದೆ ಮುಳುಗಿದ್ದಾರೆ. ಜೀವಭಯದಿಂದ ಮಾಲತೇಶರನ್ನ ಬಿಗಿದಪ್ಪಿದ್ದ ಬಾಲಕ. ಇತ್ತ ಮಗುವನ್ನು ರಕ್ಷಿಸಲಾಗದೆ, ತಾನೂ ಹೊರಬರಲಾಗದೆ ಕೃಷಿ ಹೊಂಡದಲ್ಲಿ ಸಾವು.

ಕೃಷಿ ಹೊಂಡದಲ್ಲಿ ಅಣ್ಣ ಮುಳುಗುತ್ತಿದ್ದರೂ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ನಿಂತ ತಂಗಿ!

ಗಿರಿದೀಪಂ ಶಾಲೆಯ ವಿದ್ಯಾರ್ಥಿ ಅಭಯ್ ಈ ಬಾರಿ 9ನೇ ತರಗತಿಗೆ ಹೋಗಬೇಕಿತ್ತು. ಇನ್ನು ಮಾಲತೇಶ್ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಪತ್ನಿ ಗರ್ಭಿಣಿಯಾಗಿದ್ದು, ಕೆಲವೇ ದಿನಗಳಲ್ಲಿ ಅಪ್ಪನಾಗುತ್ತಿದ್ದ. ಆದರೆ ವಿಧಿಯಾಟದಿಂದ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. 

ಗ್ರಾಮಸ್ಥರಿಗೆ ವಿಷಯ ತಿಳಿಯುತ್ತಿದ್ದಂತೆ ಜಮೀನಿಗೆ ಬಂದು ಕೃಷಿ ಹೊಂಡದಲ್ಲಿ ಬಲೆ ಬಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.