ಸುಳ್ಯ[ಜ.01]: ಸುಳ್ಯದ ಆಟೋರಿಕ್ಷಾ ಚಾಲಕರೊಬ್ಬರು ಗಡಿನಾಡು ಕಾಸರಗೋಡು ಜಿಲ್ಲೆಗೆ ಹೋಗಿದ್ದ ಸಂದರ್ಭದಲ್ಲಿ ಖರೀದಿಸಿದ್ದ ಕೇರಳ ಲಾಟರಿಗೆ 80 ಲಕ್ಷ ರು. ಬಂಪರ್‌ ಬಹುಮಾನ ಹೊಡೆದಿರುವ ಪ್ರಸಂಗ ನಡೆದಿದೆ.

ತಾಲೂಕಿನ ದುಗಲಡ್ಕದ ಈಶ್ವರಡ್ಕ ಶಿವಕುಮಾರ್‌ ಎಂಬುವರೇ ಈ ಅದೃಷ್ಟಶಾಲಿ. ದುಗಲಡ್ಕದಲ್ಲಿ ಸುಮಾರು 15 ವರ್ಷಗಳಿಂದ ರಿಕ್ಷಾ ಚಾಲಕರಾಗಿರುವ ಅವರು ಸುಳ್ಯ ಪಟ್ಟಣ ಪಂಚಾಯಿತಿ ದುಗ್ಗಲಡ್ಕ ವಾರ್ಡ್‌ನ ಪಂಪ್‌ ಆಪರೇಟರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ.

ಡಿ.29ರಂದು ಅಡೂರು ದೇವಸ್ಥಾನಕ್ಕೆ ಹೋಗಿ, ವಾಪಸ್‌ ಆಗುವ ಸಂದರ್ಭದಲ್ಲಿ ಅವರು ಅಲ್ಲಿ ಕೇರಳ ರಾಜ್ಯದ ಕಾರುಣ್ಯ ಲಾಟರಿ ಖರೀದಿಸಿದ್ದರು. ಅದೇ ದಿನ ಸಂಜೆಯ ವೇಳೆಗೆ ಆನ್‌ಲೈನ್‌ನಲ್ಲಿ ಫಲಿತಾಂಶ ನೋಡಿದಾಗ ಬಹುಮಾನ ಅವರ ನಂಬರ್‌ಗೆ ಬಂದಿತ್ತು. ಶೇ.35ರಷ್ಟುಮನರಂಜನಾ ತೆರಿಗೆಗಳು ಕಡಿತಗೊಂಡು ಸುಮಾರು 52 ಲಕ್ಷದಷ್ಟುಮೊತ್ತ ಸಿಗುವ ಅಂದಾಜಿದೆ.