3 ದಿನದ ಪ್ರಯಾಣದ ಮೊತ್ತ 21 ಕೋಟಿ ರು., ಮೊನ್ನೆ ಒಂದೇ ದಿನ 51 ಲಕ್ಷ ಸ್ತ್ರೀಯರ ಪಯಣ, ಮಂಗಳವಾರದ ಪ್ರಯಾಣ ಮೊತ್ತ 11 ಕೋಟಿ ರು., ಮೊದಲ 2 ದಿನಕ್ಕಿಂತ ಹೆಚ್ಚು ಪ್ರಯಾಣ
ಬೆಂಗಳೂರು(ಜೂ.15): ‘ಶಕ್ತಿ’ ಯೋಜನೆ ಆರಂಭದ ನಂತರ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೂರು ದಿನದಲ್ಲಿ 98.58 ಲಕ್ಷ ಮಹಿಳೆಯರು ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಪ್ರಯಾಣಿಸಿದ ಒಟ್ಟು ಮೊತ್ತ 21.05 ಕೋಟಿ ರು.ಗಳಾಗಿದೆ.
ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಹೆಚ್ಚಿನ ಮಹಿಳೆಯರು ಪ್ರಯಾಣಿಸಿದ್ದಾರೆ. ಯೋಜನೆ ಆರಂಭವಾದ ಭಾನುವಾರ (ಜೂ. 11) ನಾಲ್ಕೂ ನಿಗಮಗಳ ಬಸ್‌ಗಳಲ್ಲಿ 5.71 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದರು.
ಬಸ್ಸಿನಲ್ಲಿ ಶೋಭಾ ಕರಂದ್ಲಾಜೆಗೂ ಫ್ರೀ ಎಂದ ಕಾಂಗ್ರೆಸ್‌ಗೆ ಕೇಂದ್ರ ಸಚಿವೆ ತರಾಟೆ
ಸೋಮವಾರ (12) 41.34 ಲಕ್ಷ ಹಾಗೂ ಮಂಗಳವಾರ 51.52 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 98.58 ಲಕ್ಷ ಮಹಿಳಾ ಪ್ರಯಾಣಿಕರು ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಪ್ರಯಾಣಿಸಿದ ಮೊತ್ತ ಮೊದಲ ದಿನ 1.40 ಕೋಟಿ ರು., ಎರಡನೇ ದಿನ 8.83 ಕೋಟಿ ರು. ಹಾಗೂ ಮೂರನೇ ದಿನ 10.82 ಕೋಟಿ ರು.ಗಳಾಗಿದೆ.
