ಬ್ರಿಟನ್ ವೈರಸ್ ಭೀತಿ ನಡುವೆಯೂ: ಕರ್ನಾಟಕದಲ್ಲಿ ಇಳಿಕೆ ಕಂಡ ಕೊರೋನಾ
ರಾಜ್ಯದಲ್ಲಿ ಕೊರೋನಾ ಇಳಿಕೆ ಕಂಡಿದ್ದು, ಕೊರೋನಾ ಸೊಂಕಿತರ ಸಂಖ್ಯೆ ನಾಲ್ಕರಿಂದ ಮೂರಂಕಿಗೆ ಇಳಿದಿದೆ. ಇದು ಹೊಸ ಆಶಾಭಾವನೆ ಮೂಡಿಸಿದೆ.
ಬೆಂಗಳೂರು, (ಡಿ.23): ರಾಜ್ಯದಲ್ಲಿ ಈಗ ಬ್ರಿಟನ್ ಹೊಸ ರೂಪಾಂತರ ಕೊರೋನಾ ಸೋಂಕು ಭೀತಿ ಶುರುವಾಗಿದ್ದು, ಇದರ ಮಧ್ಯೆ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ.
ಇಂದು (ಬುಧವಾರ) 958 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ.ಇದರೊಂದಿಗೆ ಸೋಂಕಿತರ ಸಂಖ್ಯೆ 9,12,340ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 9 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿನಿಂದ 12,038 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ: ಏನಿರುತ್ತೆ? ಏನಿರಲ್ಲ? ಮಾರ್ಗಸೂಚಿ ಪ್ರಕಟ
ರಾಜ್ಯದಲ್ಲಿ ಇಂದು 1,206 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 8,86,547ಕ್ಕೆ ಏರಿಕೆಯಾಗಿದೆ. ಇನ್ನು 13,736 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 217 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು 550 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 3,84,366ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿಗೆ 2 ಬಲಿಯಾಗಿದ್ದಾರೆ.