ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ: ಏನಿರುತ್ತೆ? ಏನಿರಲ್ಲ? ಮಾರ್ಗಸೂಚಿ ಪ್ರಕಟ
ಹೊಸ ಮಾದರಿಯ ಕೊರೋನಾ ಬ್ರಿಟನ್‌ನಲ್ಲಿ ಪತ್ತೆಯಾದ ಬೆನ್ನಲ್ಲೇ ಇದನ್ನು ಕಟ್ಟಿ ಹಾಕಲು ರಾಜ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರು, (ಡಿ.23): ಬ್ರಿಟನ್ ನಲ್ಲಿ ಹೊಸ ರೂಪದ ಕೊರೋನಾ ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ಈಗಾಗಲೇ ಚೀನಾ ಕೊರೋನಾ ವೈರಸ್‌ನಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ. ಇದೀಗ ಬ್ರಿಟನ್ ವೈರಸ್ ವಕ್ಕರಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈಗಾಗಲೇ ಡಿ.24 ರಿಂದ ಜನವರಿ 2ರ ವರೆಗೆ ನೈಟ್ ಕರ್ಫ್ಯೂ (ರಾತ್ರಿ 11ರಿಂದ ಬೆಳಗ್ಗೆ 5ರ ವರೆಗೆ) ಜಾರಿ ಮಾಡಲಾಗಿದೆ. ಇನ್ನು ಈ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಡೇಟ್, ಟೈಮಿಂಗ್ ಬದಲಾವಣೆ: ಸಿಎಂ ಮಹತ್ವದ ಆದೇಶ
ಮಾರ್ಗಸೂಚಿ
ರಾತ್ರಿ ವೇಳೆ ಬಸ್, ರೈಲು, ವಿಮಾನ ಸಂಚಾರಕ್ಕೆ ಅವಕಾಶ ಇದೆ. ಹೀಗಾಗಿ ಪ್ರಯಾಣಿಕರನ್ನು ಪಿಕಪ್, ಡ್ರಾಪ್ ಮಾಡಲು ಆಟೋ, ಟ್ಯಾಕ್ಸಿಗಳಿಗೆ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರಕು ಸಾಗಣೆಗೆ ಯಾವುದೇ ನಿರ್ಬಂಧವನ್ನು ಸರ್ಕಾರ ಹೇರಿಲ್ಲ.
ಇನ್ನು, 24 ಗಂಟೆ ಕೆಲಸ ನಿರ್ವಹಿಸಬೇಕಾದ ಕೈಗಾರಿಕೆಗಳಿಗೆ ನಿರ್ಬಂಧ ಇಲ್ಲ. ನೈಟ್ ಶಿಫ್ಟ್ನಲ್ಲಿ ಶೇ.50ರಷ್ಟು ಸಿಬ್ಬಂದಿ ಬಳಕೆಗೆ ಅವಕಾಶ ಇದೆ. ರಾತ್ರಿ ಕೆಲಸ ಮುಗಿಸಿ ಸಂಚಾರ ನಡೆಸುವ ಕಾರ್ಮಿಕರಿಗೆ ಕಂಪನಿ ಐಡಿ ಕಾರ್ಡ್ ಕಡ್ಡಾಯ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಪಾರ್ಟಿಗಳಿಗೆ ನಿಷೇಧ:
2021 ಹೊಸವರ್ಷಕ್ಕೆ ಸಾರ್ವಜನಿಕವಾಗಿ ಪಾರ್ಟಿ ಮಾಡುವುದರ ಮೇಲೆ ಸರ್ಕಾರ ನಿರ್ಬಂಧ ವಿಧಿಸಿದೆ. ಕ್ಲಬ್-ಪಬ್-ರೆಸ್ಟೋರೆಂಟ್ ತೆರೆಯಬಹುದು. ಆದರೆ, ಕ್ಲಬ್-ಪಬ್-ರೆಸ್ಟೋರೆಂಟ್‌ನಲ್ಲಿ ನ್ಯೂಇಯರ್ ಪಾರ್ಟಿಗೆ ನಿಷೇಧ ಇರಲಿದೆ. ದೈಹಿಕ ಅಂತರವಿಲ್ಲದೇ ಯಾರೂ ಒಂದೆಡೆ ಸೇರುವಂತಿಲ್ಲ.