ಬೆಂಗಳೂರು, (ಅ.11): ಕರ್ನಾಟಕದಲ್ಲಿ ಇಂದು (ಭಾನುವಾರ) 9523 ಜನರಿಗೆ ಸೋಂಕು ತಗುಲಿದ್ದು,  75 ಮಂದಿ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ 10107 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 580054 ಮಂದಿ ಆಸ್ಪತ್ರೆಯಿಂದ ಗುಣಮುಖರಾದಂತಾಗಿದೆ. 

ಕೊರೋನಾ ಸೋಂಕಿತರೆ ಎಚ್ಚರ.. ಔಷಧಿಗಳು ತರುವ ಸೈಡ್ ಎಫೆಕ್ಟ್ ಭಯಾನಕ! 

ಇನ್ನು  ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,10,309 ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 9966ಕ್ಕೇರಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸದ್ಯ 1,20,270 ಸಕ್ರೀಯಾ ಕೇಸ್‌ಗಳಿದ್ದು, ಈ ಪೈಕಿ 904 ಸೋಂಕಿತರು ಐಸಿಯುನಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ 4623 ಮಂದಿಗೆ ಸೋಂಕು ತಗುಲಿದ್ದು, 24 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3344 ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಕೊರೋನಾ ಕೇಸ್