ಬೆಂಗಳೂರು, (ಸೆ.11) : ರಾಜ್ಯದಲ್ಲಿ ಇಂದು (ಶುಕ್ರವಾರ) ಹೊಸದಾಗಿ 9,464 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 130 ಮಂದಿ ಸಾವನ್ನಪ್ಪಿದ್ದಾರೆ.

 ಈ ಮೂಲಕ ಸೋಂಕಿತರ ಸಂಖ್ಯೆ 4,40,411 ಕ್ಕೆ ಏರಿಕೆಯಾದ್ರೆ, ಸೋಂಕಿಗೆ ಬಲಿಯಾದವ ಸಂಖ್ಯೆ 7,067.  ಇನ್ನು ಸಮಾಧಾನದ ಸಂಗತಿ ಶುಕ್ರವಾರ ಸೋಂಕಿತರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದೆ. 

DCJI ನೋಟಿಸ್‌ ಹಿನ್ನೆಲೆ ಭಾರತದಲ್ಲೂ ಆಕ್ಸ್‌ಫರ್ಡ್‌ ಲಸಿಕೆ ಪರೀಕ್ಷೆಗೆ ಬ್ರೇಕ್‌

ಅಂದ್ರೆ ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 12,545 ಜನರು ಕೊರೋನಾ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ 3,34,99 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾದಂತಾಗಿದ್ದು, ರಾಜ್ಯದಲ್ಲಿ 98,326 ಸಕ್ರೀಯ ಕೇಸ್‌ಗಳಿವೆ. ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೋನಾ ಕೇಸ್
ಬಾಗಲಕೋಟಿ - 188, ಬಳ್ಳಾರಿ - 382, ಬೆಳಗಾವಿ - 244, ಬೆಂಗಳೂರು ಗ್ರಾಮಾಂತರ - 146, ಬೆಂಗಳೂರು ನಗರ - 3426, ಬೀದರ್ - 61, ಚಾಮರಾಜನಗರ - 45, ಚಿಕ್ಕಬಳ್ಳಾಪುರ - 131, ಚಿಕ್ಕಮಗಳೂರು - 89, ಚಿತ್ರದುರ್ಗ - 247, ದಕ್ಷಿಣ ಕನ್ನಡ - 446, ದಾವಣಗೆರೆ - 297, ಧಾರವಾಡಿ - 203, ಗದಗ - 195, ಹಾಸನ - 305, ಹಾವೇರಿ - 240, ಕಲಬುರ್ಗಿ - 261, ಕೊಡಗು - 18, ಕೋಲಾರ - 70, ಕೊಪ್ಪಳ - 171, ಮಂಡ್ಯ - 131, ಮೈಸೂರು - 676, ರಾಯಚೂರು - 200, ರಾಮನಗರ - 76, ಶಿವಮೊಗ್ಗ - 349, ತುಮಕೂರು - 395, ಉಡುಪಿ - 168, ಉತ್ತರ ಕನ್ನಡ - 114, ವಿಜಯಪುರ - 92 ಮತ್ತು ಯಾದಗಿರಿ - 98