ನವದೆಹಲಿ (ಸೆ.11): ಕೊರೋನಾ ನಿಗ್ರಹಕ್ಕೆ ಆಕ್ಸ್‌ಫರ್ಡ್‌ ವಿವಿ ಅಭಿವೃದ್ಧಿಪಡಿಸಿದ ಛಡಾಕ್ಸ್‌-1 ಲಸಿಕೆಯ 3ನೇ ಹಂತದ ಪ್ರಯೋಗ ಬ್ರಿಟನ್‌ನಲ್ಲಿ ಸ್ಥಗಿತಗೊಂಡ ಬೆನ್ನಲ್ಲೇ, ಭಾರತದಲ್ಲಿ ನಡೆಯುತ್ತಿರುವ 2ನೇ ಹಂತದ ಈ ಲಸಿಕೆ ಪ್ರಯೋಗ ಸ್ಥಗಿತಗೊಳಿಸಲಾಗಿದೆ. ಬ್ರಿಟನ್‌ ಘಟನೆ ಬಳಿಕ ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯು, ಭಾರತದಲ್ಲಿ ಈ ಲಸಿಕೆಯ ಪ್ರಯೋಗ ಮತ್ತು ಉತ್ಪಾದನೆ ಹಕ್ಕು ಪಡೆದಿರುವ ಪುಣೆ ಮೂಲದ ಸೆರಂ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿತ್ತು. ಹೀಗಾಗಿ, ಸೆರಂ ಇನ್ಸ್‌ಟಿಟ್ಯೂಟ್‌ ಡಿಸಿಜಿಐನ ಮುಂದಿನ ಆದೇಶದವರೆಗೂ ಪ್ರಯೋಗ ಸ್ಥಗಿತಗೊಳಿಸುವುದಾಗಿ ಹೇಳಿದೆ. ಭಾರತದಲ್ಲಿ 2ನೇ ಹಂತದ ಪ್ರಯೋಗ ನಡೆಯುತ್ತಿತ್ತು.

ಆಕ್ಸ್‌ಫರ್ಡ್‌ ಲಸಿಕೆ 3ನೇ ಹಂತದ ಪರೀಕ್ಷೆ ಹಠಾತ್‌ ಸ್ಥಗಿತ
ಕೊರೋನಾ ವೈರಸ್‌ ತಡೆಯಲು ಶೀಘ್ರದಲ್ಲೇ ಬರಲಿದೆ ಎಂಬ ಬಹುದೊಡ್ಡ ಭರವಸೆ ಮೂಡಿಸಿದ್ದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಛಡಾಕ್ಸ್‌1 ಲಸಿಕೆಯ 3ನೇ ಹಂತದ ಪ್ರಯೋಗ ದಿಢೀರ್‌ ಸ್ಥಗಿತಗೊಂಡಿದೆ. ಪ್ರಯೋಗಕ್ಕೊಳಗಾದ 30,000 ಜನರ ಪೈಕಿ ಬ್ರಿಟನ್ನಿನ ಒಬ್ಬ ವ್ಯಕ್ತಿಯಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯೋಗ ಸ್ಥಗಿತಗೊಳಿಸಲಾಗಿದೆ. ಆತನಿಗೆ ಉಂಟಾದ ಅನಾರೋಗ್ಯ ಯಾವ ರೀತಿಯದು ಎಂಬುದು ಇನ್ನೂ ತಿಳಿದುಬಂದಿಲ್ಲ.

ಬೀಜಿಂಗ್ ವಾಣಿಜ್ಯ ಮೇಳದಲ್ಲಿ ಕೊರೋನಾ ಲಸಿಕೆ ಸ್ಥಗಿತ

ಆಸ್ಟ್ರಾಜೆನೆಕಾ ಎಂಬ ಫಾರ್ಮಾಸ್ಯುಟಿಕಲ್‌ ಕಂಪನಿಯ ಜೊತೆ ಸೇರಿ ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿವಿ ತಜ್ಞರು ಈ ಲಸಿಕೆ ಸಿದ್ಧಪಡಿಸಿದ್ದಾರೆ. ಇದಕ್ಕೆ ‘ಛಡಾಕ್ಸ್‌1 ಎನ್‌ಕೋವ್‌-19’ ಎಂದು ಹೆಸರಿಡಲಾಗಿದೆ. ಇದರ 1 ಮತ್ತು 2ನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಯಶಸ್ವಿಯಾಗಿದೆ. ಈಗ ಭಾರತವೂ ಸೇರಿದಂತೆ ಬ್ರಿಟನ್‌, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಹಾಗೂ ಅಮೆರಿಕದಲ್ಲಿ 2/3ನೇ ಹಂತದ ಪ್ರಯೋಗ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದು ಯಶಸ್ವಿಯಾದರೆ 2021ರ ಜನವರಿಯಲ್ಲಿ ಲಸಿಕೆ ಸಿದ್ಧಪಡಿಸುವ ಯೋಚನೆಯಲ್ಲಿ ಆಸ್ಟ್ರಾಜೆನೆಕಾ ಕಂಪನಿ ಇತ್ತು. ಆದರೆ, ಈಗ ಪ್ರಯೋಗಕ್ಕೊಳಗಾದ ವ್ಯಕ್ತಿಯೊಬ್ಬನಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳಲ್ಲೂ ಪ್ರಯೋಗ ನಿಲ್ಲಿಸಲಾಗಿದೆ.

ಕಂಪನಿ ಹೇಳುವುದೇನು?
ಇದು ಸಾಮಾನ್ಯ ಪ್ರಕ್ರಿಯೆ. ಯಾವುದೇ ಲಸಿಕೆಯ 3ನೇ ಹಂತದ ಪ್ರಯೋಗದಲ್ಲಿ ಈ ರೀತಿಯ ಅನಾರೋಗ್ಯ ಕಾಣಿಸಿಕೊಂಡಾಗ ಅದರ ಕಾರಣ ಪತ್ತೆಹಚ್ಚುವವರೆಗೆ ಪ್ರಯೋಗ ನಿಲ್ಲಿಸಲಾಗುತ್ತದೆ. ನಮ್ಮ ಲಸಿಕೆ ತೆಗೆದುಕೊಂಡ ಒಬ್ಬ ವ್ಯಕ್ತಿಯಲ್ಲಿ ಉಂಟಾಗಿರುವ ಅನಾರೋಗ್ಯದ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಆಸ್ಟ್ರಾಜೆನೆಕಾ ಕಂಪನಿ ತಿಳಿಸಿದೆ.

ರಷ್ಯಾ ಕೊರೋನಾ ಲಸಿಕೆ ಶೀಘ್ರ ಭಾರತದಲ್ಲೂ ಪ್ರಯೋಗ

ಮೈಸೂರಿನಲ್ಲೂ ನಡೆಯುತ್ತಿದೆ ಪ್ರಯೋಗ
ಭಾರತದಲ್ಲಿ ಮೈಸೂರೂ ಸೇರಿದಂತೆ ವಿವಿಧ ನಗರಗಳಲ್ಲಿ ಈ ಲಸಿಕೆಯ 3ನೇ ಹಂತದ ಪ್ರಯೋಗ ನಡೆಯುತ್ತಿದೆ. ಕಳೆದ ವಾರದವರೆಗೆ ಈ ಪ್ರಯೋಗಕ್ಕೆ ಭಾರತದಲ್ಲಿ ಒಟ್ಟಾರೆ 100 ಸ್ವಯಂಸೇವಕರನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ನಂತರ ನೋಂದಣಿ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಪ್ರಯೋಗಕ್ಕೆ ತಡೆ ಇಲ್ಲ
ಭಾರತದಲ್ಲಿ ಲಸಿಕೆ ಉತ್ಪಾದನೆಯ ಪ್ರಯೋಗ ಮತ್ತು ಉತ್ಪಾದನೆಯ ಹಕ್ಕು ಪಡೆದಿರುವ ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್‌, ಬ್ರಿಟನ್‌ನಲ್ಲಿ ಕೈಗೊಂಡ ನಿರ್ಧಾರ ಭಾರತದಲ್ಲಿ ಪರಿಣಾಮ ಬೀರದು. ಭಾರತದಲ್ಲಿ ಎರಡನೇ ಹಂತದ ಪ್ರಯೋಗ ಎಂದಿನಂತೆ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದೆ.