ರಾಜ್ಯದಲ್ಲಿ 90ಸಾವಿರ ನಕಲಿ ಕಾರ್ಮಿಕರ ಕಾರ್ಡ್, ಬೀದರನಲ್ಲೇ ಹೆಚ್ಚು!
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾಗುತ್ತಿರುವ ಕಾರ್ಮಿಕ ಕಾರ್ಡ್‌ಗಳು ಅನರ್ಹರ ಪಾಲಾಗುತ್ತಿವೆ. ರಾಜ್ಯ ಸರ್ಕಾರ ಮೂರು ವರ್ಷದಿಂದ ನೋಂದಣಿ ಮಾಡಿಸಿರುವ 32,77,359 ಕಾರ್ಮಿಕ ಕಾರ್ಡ್‌ಗಳಲ್ಲಿ 90,091 ಕಾರ್ಡ್‌ಗಳನ್ನು ನಕಲಿ ಎಂದು ಪತ್ತೆಹಚ್ಚಿ ರದ್ದುಪಡಿಸಲು ಮುಂದಾಗಿದೆ.
- ಮಂಡ್ಯ ಮಂಜುನಾಥ
ಮಂಡ್ಯ (ಜ.4) : ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾಗುತ್ತಿರುವ ಕಾರ್ಮಿಕ ಕಾರ್ಡ್‌ಗಳು ಅನರ್ಹರ ಪಾಲಾಗುತ್ತಿವೆ. ರಾಜ್ಯ ಸರ್ಕಾರ ಮೂರು ವರ್ಷದಿಂದ ನೋಂದಣಿ ಮಾಡಿಸಿರುವ 32,77,359 ಕಾರ್ಮಿಕ ಕಾರ್ಡ್‌ಗಳಲ್ಲಿ 90,091 ಕಾರ್ಡ್‌ಗಳನ್ನು ನಕಲಿ ಎಂದು ಪತ್ತೆಹಚ್ಚಿ ರದ್ದುಪಡಿಸಲು ಮುಂದಾಗಿದೆ.
2020-21ನೇ ಸಾಲಿನಲ್ಲಿ 4,93,521 ಪುರುಷ, 3,01,093 ಮಹಿಳೆಯರು, 320 ಲಿಂಗ ನಮೂದಿಸದವರು, 2021-22ರಲ್ಲಿ 7,29,515 ಪುರುಷರು, 5,51,809 ಮಹಿಳೆಯರು, 5644 ಲಿಂಗ ನಮೂದಿಸದವರು, 2022-23 ರಲ್ಲಿ 6,66,281 ಪುರುಷರು, 5,26,924 ಮಹಿಳೆಯರು, 2252 ಲಿಂಗ ನಮೂದಿಸದವರು ಕಾರ್ಡ್ ಪಡೆದುಕೊಂಡಿದ್ದರು. ಒಟ್ಟು 32, 77,359 ಕಾರ್ಡ್‌ಗಳಲ್ಲಿ 90,091 ಕಾರ್ಮಿಕರಲ್ಲದವರು ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದೆ.
21ನೇ ಮಹಡಿಯಿಂದ ಜಿಗಿದು ಧಾರವಾಡದ ಟೆಕ್ಕಿ ಸಾವಿಗೆ ಶರಣು! ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ರೂ ಜುಗುಪ್ಸೆ?
ಬೀದರ್ ಜಿಲ್ಲೆಯೊಂದರಲ್ಲೇ 26,555 ಹಾಗೂ ಹುಬ್ಬಳ್ಳಿ ಉಪವಿಭಾಗ 1 ಮತ್ತು 2 ರಲ್ಲಿ 25,714, ಹಾವೇರಿ 5128, ಬಾಗಲಕೋಟೆ 5057, ಚಿತ್ರದುರ್ಗ 1763, ಶಿವಮೊಗ್ಗ 1774, ವಿಜಯಪುರ 1936 ಹೀಗೆ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 300 ರಿಂದ 1000 ಕಾರ್ಡ್‌ಗಳು ಬೋಗಸ್ ಇರುವುದು ಕಂಡುಬಂದಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕರ್ನಾಟಕ ನಿಯಮ 2006ಕ್ಕೆ ತಿದ್ದುಪಡಿ ತರಲಾಗಿದ್ದು, ನಿಯಮ 20 (7) ರನ್ವಯ ಅರ್ಹತಾ ಮಾನದಂಡಗಳನ್ನು ಪೂರೈಸದ ಕಾರ್ಮಿಕರ ನೋಂದಣಿ ರದ್ದಪಡಿಸಲು ನೋಂದಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಅರ್ಜಿದಾರರು ನೋಂದಣಿ ಪೂರ್ವ ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕಟ್ಟಡ ಅಥವಾ ಇತರೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಸ್ವಯಂ ದೃಢೀಕರಣ ಪ್ರಮಾಣಪತ್ರ ಸಲ್ಲಿಸುವುದನ್ನು ತಂತ್ರಾಂಶದಲ್ಲಿ ಕಡ್ಡಾಯಗೊಳಿಸಲಾಗಿದೆ. ನೋಂದಣಿ, ನವೀಕರಣ ಹಾಗೂ ಕ್ಲೇಮ್ ಅರ್ಜಿಗಳ ವಿಲೇವಾರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಮಂಡಳಿಯಿಂದ ಹೊರಡಿಸಲು ಹಾಗೂ ಎಲ್ಲ ಅರ್ಜಿಗಳನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವುದು, ಅಗತ್ಯವಿದ್ದರೆ ಸ್ಥಳ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಾರ್ಮಿಕ ನಿರೀಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು ವಿಲೇವಾರಿ ಮಾಡುವ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಕಾರ್ಮಿಕ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು, ಉಪ ಕಾರ್ಮಿಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಕಾರ್ಮಿಕರ ನೈಜತೆಯನ್ನು ಪರಿಶೀಲಿಸದೆ ಕಾರ್ಮಿಕ ಕಾರ್ಡ್ ವಿತರಿಸಿದ್ದರೆ ಅವುಗಳನ್ನು ಪತ್ತೆ ಹಚ್ಚಿ ರದ್ದುಪಡಿಸಲು ಕ್ರಮವಹಿಸಲಾಗಿದೆ. ಸವಲತ್ತು ಪಡೆಯಲು ಯತ್ನಿಸಿದ ಅನರ್ಹರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕಾರ್ಮಿಕ ಇಲಾಖೆ ಎಚ್ಚರಿಸಿದೆ.
ಐಟಿ ಸಿಟಿ ಬೆಂಗಳೂರು ಈಗ ಕ್ರೈಂ ಸಿಟಿ! ಒಂದೇ ವರ್ಷದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾರೀ ಹೆಚ್ಚಳ!
ನಕಲಿ ಕಾರ್ಡ್, ಎಲ್ಲಿ ಎಷ್ಟು?
- ಬೀದರ್- 26545
- ಹುಬ್ಬಳ್ಳಿ ಉಪವಿಭಾಗ-1 - 17119
- ಹುಬ್ಬಳ್ಳಿ ಉಪವಿಭಾಗ-2 - 8595
- ಹಾವೇರಿ 5128
- ಬಾಗಲಕೋಟೆ - 5057
- ಚಿತ್ರದುರ್ಗ - 1793
- ಶಿವಮೊಗ್ಗ - 1774
- ಬಳ್ಳಾರಿ - 1542
- ಕಲಬುರಗಿ - 1936
- ವಿಜಯಪುರ - 1505
- ಗದಗ - 1345
- ಕೊಪ್ಪಳ - 1285
- ಚಿಕ್ಕಮಗಳೂರು - 1262
- ಯಾದಗಿರಿ - 1238
- ರಾಮನಗರ - 1074
- ದಾವಣಗೆರೆ - 1072
- ಯಲ್ಲಾಪುರ - 951
- ವಿಜಯನಗರ - 887
- ಹಾಸನ - 741
- ಚಾಮರಾಜನಗರ 717
- ಕಾರವಾರ - 663
- ಮೈಸೂರು - 657
- ಬೆಂಗಳೂರು-1 - 656
- ಬೆಂಗಳೂರು-2- 96
- ಬೆಂಗಳೂರು -3 - 632
- ಬೆಂಗಳೂರು ನಗರ-5 - 420
- ಬೆಂಗಳೂರು ನಗರ -6 - 565
- ಬೆಂಗಳೂರು ನಗರ-7 - ೧೦೫ - 105
- ತುಮಕೂರು - 540
- ಮಂಗಳೂರು -1 -499
- ಮಂಗಳೂರು-2 - 352
- ಬೆಂಗಳೂರು ಗ್ರಾಮಾಂತರ 497
- ರಾಯಚೂರು - 482
- ಮಂಡ್ಯ - 388
- ಬೆಳಗಾವಿ ಉಪವಿಭಾಗ-1 - 340
- ಬೆಳಗಾವಿ ಉಪವಿಭಾಗ -2 - 342
- ಮಧುಗಿರಿ - 292
- ಚಿಕ್ಕಬಳ್ಳಾಪುರ - 279
- ಕೋಲಾರ - 274
- ಉಡುಪಿ - 185
- ಕೊಡಗು - 147
ಒಟ್ಟು - 90091