Asianet Suvarna News Asianet Suvarna News

ದೇಶದ 9.2 ಲಕ್ಷ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ!

* ಆತಂಕ ಹುಟ್ಟಿಸಿದೆ ಅಂಕಿ ಅಂಶ, ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ!

* ಉತ್ತರ ಪ್ರದೇಶ ನಂ.1, ಬಿಹಾರ ನಂ.2

* ಕರ್ನಾಟಕದಲ್ಲೂ 6,899 ಮಕ್ಕಳು ಪತ್ತೆ

9 27 lakh severely acute malnourished children identified till November last year RTI pod
Author
Bangalore, First Published Jun 7, 2021, 7:39 AM IST

ನವದೆಹಲಿ(ಜೂ.07):  ಕೊರೋನಾ ಸೋಂಕಿನ ಮಧ್ಯೆ ಭಾರತದಲ್ಲಿ ಸುಮಾರು 9.2 ಲಕ್ಷ ಮಕ್ಕಳು ತೀವ್ರ ಸ್ವರೂಪದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಕೋವಿಡ್‌ ಸಾಂಕ್ರಾಮಿಕ ಬಡವರಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಿಕ್ಕಟ್ಟನ್ನು ಉಲ್ಬಣಗೊಳಿಸಿರಬಹುದು ಎಂಬ ಕಳವಳ ವ್ಯಕ್ತವಾಗಿದೆ.

ಆರ್‌ಟಿಐ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ, ಕಳೆದ ವರ್ಷ ನವೆಂಬರ್‌ ವರೆಗೆ 6 ತಿಂಗಳಿಂದ 6 ವರ್ಷದ ವರೆಗಿನ ಸುಮಾರು 9.27 ಲಕ್ಷ ಮಕ್ಕಳು ‘ತೀವ್ರ ಸ್ವರೂಪದ ಅಪೌಷ್ಟಿಕತೆ’ಯಿಂದ ನರಳುತ್ತಿದ್ದಾರೆ ಎಂದು ತಿಳಿಸಿದೆ.

15 ವರ್ಷದಲ್ಲಿ 6 ಕೋಟಿ ಭಾರತೀಯರು ಅಪೌಷ್ಠಿಕತೆಯಿಂದ ಮುಕ್ತ!

ಈ ಪೈಕಿ ಉತ್ತರ ಪ್ರದೇಶ ಅಗ್ರ ಸ್ಥಾನ ಪಡೆದಿದ್ದು ಅಲ್ಲಿ 3.98 ಲಕ್ಷ, ಬಿಹಾರದಲ್ಲಿ 2.79 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 70,665, ಕರ್ನಾಟಕದಲ್ಲಿ 6,899, ಕೇರಳದಲ್ಲಿ 6,188, ರಾಜಸ್ಥಾನದಲ್ಲಿ 5,732, ಒಡಿಶಾದಲ್ಲಿ 15,595, ತಮಿಳುನಾಡಿನಲ್ಲಿ 12,489, ಜಾರ್ಖಂಡ್‌ನಲ್ಲಿ 12,059, ಆಂಧ್ರಪ್ರದೇಶದಲ್ಲಿ 11,201 ಮತ್ತು ತೆಲಂಗಾಣದಲ್ಲಿ 9,045 ಮಕ್ಕಳನ್ನು ‘ತೀವ್ರ ಸ್ವರೂಪದ ಅಪೌಷ್ಟಿಕತೆ ಹೊಂದಿರುವ ಮಕ್ಕಳೆಂದು ಗುರುತಿಸಲಾಗಿದೆ.

ಹಾಗೆಯೇ ಲಡಾಖ್‌, ಲಕ್ಷದ್ವೀಪ, ನಾಗಾಲ್ಯಾಂಡ್‌, ಮಣಿಪುರ ಮತ್ತು ಮಧ್ಯಪ್ರದೇಶದ ಮಕ್ಕಳಲ್ಲಿ ತೀವ್ರ ಸ್ವರೂಪ ಅಪೌಷ್ಠಿಕತೆ ಕಂಡುಬಂದಿಲ್ಲ ಎಂದು ತಿಳಿಸಿದೆ.

ಕೋವಿಡ್‌ 3ನೇ ಅಲೆ ಕಾಣಿಸಿಕೊಂಡರೆ ಆಗ ಮಕ್ಕಳ ಪೌಷ್ಟಿಕತೆ ಮೇಲೆ ಹೆಚ್ಚು ಪರಿಣಾಮ ಉಂಟಾಗುವುದು. ನಿರುದ್ಯೋಗ ಹೆಚ್ಚಾಗುವುದು. ಕುಟುಂಬಗಳ ಆರ್ಥಿಕ ಶಕ್ತಿಯೂ ಕುಸಿಯುವುದರಿಂದ ಅದರ ನೇರ ಪರಿಣಾಮ ಹಸಿವಿನ ಮೇಲಾಗುತ್ತದೆ. ಹಸಿವು ತಣಿಯದಿದ್ದರೆ ಅದು ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವಲ್ಲಿ ಅಂಗನವಾಡಿಗಳು ಹೆಚ್ಚು ಕ್ರಿಯಾಶೀಲವಾಗಬೇಕು. ಲಾಕ್‌ಡೌನ್‌ನಿಂದ ಮಕ್ಕಳು ಅಂಗನವಾಡಿಗೆ ಹೋಗಲು ಸಾಧ್ಯವಾಗದಿದ್ದರೆ ಮಕ್ಕಳ ಮನೆಗೇ ಆಹಾರ ತಲುಪಿಸಬೇಕು ಎಂದು ಎಚ್‌ಎಕ್ಯೂ ಸೆಂಟರ್‌ ಫಾರ್‌ ಚೈಲ್ಡ್‌ ರೈಟ್ಸ್‌ ಅಹ ಸಂಸ್ಥಾಪಕಿ ಈನಾಕ್ಷಿ ಗಂಗೂಲಿ ತಿಳಿಸಿದ್ದಾರೆ.

ನಗರ ಜಿಲ್ಲೆಯ ಅಂಗನವಾಡಿಯಲ್ಲಿ ನೂರಾರು ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ

ಮಾನದಂಡ ಏನು?:

ವಿಶ್ವ ಆರೋಗ್ಯ ಸಂಸ್ಥೆಯು ಮಗುವಿನ ಎತ್ತರಕ್ಕೆ ಸರಿಸಮವಾದ ತೂಕ ಇಲ್ಲದಿರುವುದು, ಮಧ್ಯದ ಮೇಲ್ಭಾಗದ ತೋಳಿನ ಸುತ್ತಳತೆ 15ಎಂ.ಎಂಗಿಂತ ಕಡಿಮೆ ಇರುವುದನ್ನು ತೀವ್ರ ಸ್ವರೂಪದ ಅಪೌಷ್ಟಿಕತೆಗೆ ಮಾನದಂಡ ಎಂದು ನಿಗದಿಪಡಿಸಿದೆ.

Follow Us:
Download App:
  • android
  • ios