ವಿಶ್ವಸಂಸ್ಥೆ(ಜು.15): 2004-06 ರಿಂದ 2017-19ರ ವರೆಗೆ ಬರೋಬ್ಬರಿ 6 ಕೋಟಿ ಭಾರತೀಯರು ಅಪೌಷ್ಠಿಕತೆಯಿಂದ ಮುಕ್ತರಾಗಿದ್ದಾರೆ ಎಂದು ವಿಶ್ವ ಸಂಸ್ಥೆಯ ವರದಿ ತಿಳಿಸಿದೆ.

ಸೋಮವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆ, ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ, ವಿಶ್ವಸಂಸ್ಥೆಯ ಆಹಾರ ಯೋಜನೆ, ವಿಶ್ವಸಂಸ್ಥೆ ಮಕ್ಕಳ ನಿಧಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ತಯಾರಿಸಿರುವ ‘ಆಹಾರ ಭದ್ರತೆ ಹಾಗೂ ಪೌಷ್ಠಿಕತೆಯ ವಿಶ್ವ ವರದಿ’ಯಲ್ಲಿ ಈ ಉಲ್ಲೇಖ ಇದೆ.

ಬಜೆಟ್ ಮಂಡನೆಗೆ ಯಡಿಯೂರಪ್ಪ ಸಜ್ಜು: ಉದ್ಯೋಗ ಸೃಷ್ಟಿ, ಎಣ್ಣೆ ಪ್ರಿಯರಿಗೆ ಶಾಕ್?

2004-06ರಲ್ಲಿ ಶೇ.21.7 ರಷ್ಟಿದ್ದ ಅಪೌಷ್ಠಿಕತೆಯ ಮಟ್ಟ2017-19ರ ವೇಳೆಗೆ ಶೇ.14ಕ್ಕೆ ಇಳಿದಿದೆ. ಅಪೌಷ್ಠಿಕತೆಯಿಂದ 24.9 ಕೋಟಿ ಭಾರತೀಯರು ಬಳಲುತ್ತಿದ್ದರೆ, ಈಗ ಅದು 18.92 ಕೋಟಿಗೆ ಇಳಿದಿದೆ ಎಂದಿದೆ. ಇದೇ ವೇಳೆ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಇಳಿಕೆಯಾಗಿದ್ದು, ಯುವ ಜನರಲ್ಲಿ ಬೊಜ್ಜಿನ ಪ್ರಮಾಣ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.