ಬೆಂಗಳೂರು, (ಆ.30):  ರಾಜ್ಯದಲ್ಲಿ ಇಂದು (ಭಾನುವಾರ) 8,852 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿಕೆಯಾಗಿದೆ. 

ಇನ್ನು ಚೇತರಿಕೆ ಪ್ರಮಾಣದಲ್ಲೂ ಏರಿಕೆ ಕಂಡಿದ್ದು ಭಾನುವಾರ 7,101 ಕೊರೋನಾ ಸೋಂಕತರು ಗುಣಮುಖರಾಗಿದ್ದು, ಇದುವರೆಗೆ ಒಟ್ಟು 2,42,229 ಸೋಂಕಿತರು ಗುಣಮುಖರಾದಂತಾಗಿದೆ. ಇದರೊಂದಿಗೆ ಪ್ರಸ್ತುತ ರಾಜ್ಯದಲ್ಲಿ 88,091 ಸಕ್ರೀಯ ಕೇಸ್‌ಗಳಿವೆ.

ಪವಿತ್ರ ಕ್ಷೇತ್ರದಲ್ಲಿ ಬೆತ್ತಲೆ ಫೋಟೋ ಶೂಟ್, ಮದ್ಯಪ್ರಿಯರಿಗೆ ಮತ್ತಷ್ಟು ಕಿಕ್; ಆ.30ರ ಟಾಪ್ 10 ಸುದ್ದಿ!

ಕಳೆದ 24 ಗಂಟೆಗಳಲ್ಲಿ ಕಿಲ್ಲರ್ ಕೊರೋನಾಗೆ 106 ಜನರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,589ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಜಿಲ್ಲಾವಾರು ಕೊರೋನಾ ಕೇಸ್
 ಬಾಗಲಕೋಟೆ,132, ಬಳ್ಳಾರಿ 428, ಬೆಳಗಾವಿ 357, ಬೆಂಗಳೂರು ಗ್ರಾಮಾಂತರ 55, ಬೆಂಗಳೂರು ನಗರ 2,821, ಬೀದರ್ 73, ಚಾಮರಾಜನಗರ 54, ಚಿಕ್ಕಬಳ್ಳಾಪುರ 127, ಚಿಕ್ಕಮಗಳೂರು 207, ಚಿತ್ರದುರ್ಗ 95, ದಕ್ಷಿಣ ಕನ್ನಡ 334, ದಾವಣಗೆರೆ 373, ಧಾರವಾಡ 300, ಗದಗ 196, ಹಾಸನ 268, ಹಾವೇರಿ 105, ಕಲಬುರಗಿ 199, ಕೊಡಗು 65, ಕೋಲಾರ 82, ಕೊಪ್ಪಳ 240, ಮಂಡ್ಯ 179, ಮೈಸೂರು 734, ರಾಯಚೂರು 147, ರಾಮನಗರ 114, ಶಿವಮೊಗ್ಗ  292, ತುಮಕೂರು 314, ಉಡುಪಿ 254, ಉತ್ತರ ಕನ್ನಡ 113, ವಿಜಯಪುರ 127  ಯಾದಗಿರಿ  67 ಕೊರೋನಾ ಕೇಸ್ ಪತ್ತೆಯಾಗಿವೆ.