ವಾಲ್ಮೀಕಿ ನಿಗಮದ ಹಗರಣ: 15 ಕಂಪನಿಗಳಿಗೆ 87 ಕೋಟಿ ವರ್ಗಾವಣೆ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಯೂನಿಯನ್ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ 15ಕ್ಕೂ ಹೆಚ್ಚು ಖಾತೆಗಳಿಗೆ 87 ಕೋಟಿ ರು. ಹಣ ವರ್ಗಾವಣೆ ಆಗಿದೆ.
ಬೆಂಗಳೂರು(ಜೂ.01): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಯೂನಿಯನ್ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ 15ಕ್ಕೂ ಹೆಚ್ಚು ಖಾತೆಗಳಿಗೆ 87 ಕೋಟಿ ರು. ಹಣ ವರ್ಗಾವಣೆ ಆಗಿದೆ.
ಯಾರಿಗೆ ಹಣ ವರ್ಗಾವಣೆ?:
ಸಿಸ್ಟಮ್ ಅಂಡ್ ಸರ್ವಿಸಸ್ ಕಂಪನಿ 4.55 ಕೋಟಿ ರು., ರಾಮ್ ಎಂಟರ್‌ಪ್ರೈಸಸಸ್ 5.07 ಕೋಟಿ ರು., ಸ್ಕಿಲ್ ಮ್ಯಾಪ್ ಟ್ರೈನಿಂಗ್ ಅಂಡ್ ಸರ್ವಿಸಸ್ 4.84 ಕೋಟಿ ರು., ಸ್‌ವ್ಯಾಪ್ ಡಿಸೈನ್ ಪ್ರೈವೇಟ್ ಲಿಮಿಟೆಡ್ 5.15 ಕೋಟಿ ರು., ಜಿ.ಎನ್. ಇಂಡಸ್ಟ್ರಿಸ್ 4.42 ಕೋಟಿ ರು., ನೊವೆಲ್ ಸೆಕ್ಯುರಿಟಿ ಸರ್ವಿಸಸ್ 4.56 ಕೋಟಿ ರು., ಸುಜಲ್ ಎಂಟರ್ ಪ್ರೈಸಸ್ 5.63 ಕೋಟಿ ರು. , ಗ್ಯಾಬ್ ಎ ಗ್ರಬ್ ಪರಿಶಿಷ್ಟ ಪಂಗಡಗಳ ಅಕ್ರಮ ಹಣ ವರ್ಗ ಪ್ರಕರಣ ಸರ್ವಿಸಸ್ ಲಿಮಿಟೆಡ್ 5.88 ಕೋಟಿ ರು. ಸೇರಿ 40.10 ಕೋಟಿ ರು. ಒಂದು ಬಾರಿ ವರ್ಗಾವಣೆ ಮಾಡಲಾಗಿದೆ.
ವಾಲ್ಮೀಕಿ ನಿಗಮದ ಹಗರಣ: ಸಿಬಿಐನಿಂದಲೂ ತನಿಖೆ ನಿಶ್ಚಿತ?
ಉಳಿದಂತೆ ಅಕಾರ್ಡ್ ಬ್ಯುಸಿನೆಸ್ 5.46 ಕೋಟಿ ರು., ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜಿಸ್ 4.53 ಕೋಟಿ ರು., ಮನ್ಸು ಎಂಟರ್ ಪ್ರೈಸಸ್ 5.10 ಕೋಟಿ ರು., ವೈಎಂ ಎಂಟರ್‌ಪ್ರೈಸಸ್ 4.98 ಕೋಟಿ ರು. ಸೇರಿ 20 ಕೋಟಿ ರು. ಹಣವನ್ನು ಮತ್ತೊಮ್ಮೆ ವರ್ಗಾವಣೆ ಮಾಡಲಾಗಿದೆ. ಇನ್ನು ನಿತ್ಯ ಸೆಕ್ಯುರಿಟಿ ಸರ್ವಿಸಸ್ 4.47 ಕೋಟಿ ರು., ವೋಲ್ಟಾ ಟೆಕ್ನಾಲಜಿ ಸಲ್ಯೂಷನ್ಸ್ 5.12 ಕೋಟಿ ರು., ವಿ.ಬಿ. ಬ್ಯುಸಿನೆಸ್ ಸಲ್ಯೂಷನ್ಸ್ 4.50 ಕೋಟಿ ರು. ಸೇರಿ ಒಟ್ಟು 87 ಕೋಟಿ ರು. ಅಕ್ರಮ ವರ್ಗಾವಣೆ ಆಗಿದೆ ಎಂದು ತಿಳಿದುಬಂದಿದೆ.