ಬೆಂಗಳೂರು, (ಆ.26): ರಾಜ್ಯದಲ್ಲಿ  ಇಂದು (ಬುಧವಾರ) 8580 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 300406ಕ್ಕೇರಿದೆ.

ಬುಧವಾರ  ಒಂದೇ ದಿನ 133 ಮಂದಿ ಸಾವನ್ನಪ್ಪಿದ್ದು, 7249 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 211688 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 5091 ಮಂದಿ ಸಾವನ್ನಪ್ಪಿದ್ದಾರೆ.

ಹತೋಟಿಗೆ ಬಾರದ ಕೊರೋನಾ: ಹಿರಿಯ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ

83608 ಸಕ್ರಿಯ ಪ್ರಕರಣಗಳಿವೆ ಇದ್ದು, ಅವರೆಲ್ಲರಿಗೂ ಚಿಕಿತ್ಸೆ ಮುಂದುವರೆದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಜಿಲ್ಲಾವಾರು ಕೇಸ್

ಬೆಂಗಳೂರು ನಗರ 3284, ಬೆಳಗಾವಿ 289, ಬಾಗಲಕೋಟೆ 154, ಬಳ್ಳಾರಿ 510, , ಬೆಂಗಳೂರು ಗ್ರಾಮಾಂತರ 136, ಬೀದರ್ 42, ಚಾಮರಾಜನಗರ 51, ಚಿಕ್ಕಬಳ್ಳಾಪುರ 87, ಚಿಕ್ಕಮಗಳೂರು 97, ಚಿತ್ರದುರ್ಗ 78, ದಕ್ಷಿಣಕನ್ನಡ 314, ದಾವಣಗೆರೆ 233, ಧಾರವಾಡ 255, ಗದಗ 124, ಹಾಸನ 154, ಹಾವೇರಿ 164, ಕಲಬುರಗಿ 180,  ಕೊಡಗು 26, ಕೋಲಾರ 88, ಕೊಪ್ಪಳ 158, ಮಂಡ್ಯ 155, ಮೈಸೂರು 951, ರಾಯಚೂರು 136, ರಾಮನಗರ 47, ಶಿವಮೊಗ್ಗ 166, ತುಮಕೂರು 88, ಉಡುಪಿ 251, ಉತ್ತರಕನ್ನಡ 129, ವಿಜಯಪುರ 131, ಯಾದಗಿರಿ 102.

ಬೆಂಗಳೂರು: ಹುಟ್ಟಿದ ನಾಲ್ಕು ಗಂಟೆಯಲ್ಲಿ ಕೊರೋನಾಗೆ ಬಲಿಯಾದ ಹಸುಗೂಸು!

"