ಬೆಂಗಳೂರು, (ಸೆ.14): ರಾಜ್ಯದಲ್ಲಿ ಇಂದು (ಸೋಮವಾರ) 8244 ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ರೆ, 119 ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು 8865 ಸೋಂಕಿತರು ಗುಣಮುಖರಾಗಿದ್ದಾರೆ. 

ಒಟ್ಟ ಸೋಂಕಿತರ ಸಂಖ್ಯೆ 467689 ಕ್ಕೆ ಏರಿಕೆಯಾಗಿದೆ.  ಇವರಲ್ಲಿ ಇದುವರೆಗೆ 361823 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ರಾಜ್ಯದಲ್ಲಿ 98463 ಸಕ್ರೀಯ ಪ್ರಕರಣಗಳಿವೆ.  

ಕೊರೋನಾ ಸಕ್ರಿಯ ಸೋಂಕಿತರು: ದೇಶದಲ್ಲೇ ಬೆಂಗಳೂರಿಗೆ 2ನೇ ಸ್ಥಾನ!

 ಕೊರೋನಾ ಸೊಂಕು ಸಂಬಂಧಿ ಒಟ್ಟು 7384 ಸಾವಿನ ಪ್ರಕರಣಗಳು ದಾಖಲಾಗಿವೆ. ಹಾಗೂ 19 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 800 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.