Mekedatu padayatra ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಷಡ್ಯಂತ್ರ, ಸ್ವಗ್ರಾಮದಲ್ಲಿ ಡಿಕೆಶಿ ಭಾವನಾತ್ಮಕ ಭಾಷಣ
* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ
* ಸ್ವಗ್ರಾಮ ದೊಡ್ಡಆಲಹಳ್ಳಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದ ಡಿ.ಕೆ. ಶಿವಕುಮಾರ್
* ಮೊಯ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಂದೂಡಿಕೆ
* ಕಾಂಗ್ರೆಸ್ ನಾಯಕನ ಹೇಳಿಕೆಯಿಂದಲೇ ಡಿಕೆಶಿಗೆ ಟಾಂಗ್ ಕೊಟ್ಟ ಬಿಜೆಪಿ
ರಾಮನಗರ, (ಜ.09): ನನ್ನನ್ನು ಮತ್ತೆ ಜೈಲಿಗೆ ಹಾಕಿಸಬೇಕೆಂದು ಷಡ್ಯಂತ್ರ ಮಾಡ್ತಿದ್ದಾರೆ. ಆದ್ರೆ ನಾನು ಷಡ್ಯಂತ್ರಕ್ಕೆ ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ಗುಡುಗಿದ್ದಾರೆ.
ಸ್ವಗ್ರಾಮ ದೊಡ್ಡಆಲಹಳ್ಳಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದ ಡಿ.ಕೆ. ಶಿವಕುಮಾರ್ ಇಡೀ ಊರಿನಲ್ಲಿ ಇಂಥ ಸಂಭ್ರಮ ನಾನು ನೋಡಿರಲಿಲ್ಲ. ನಿಮ್ಮಲ್ಲೆರಿಗೂ ನನ್ನ ಧನ್ಯವಾದಗಳು. ನಾನು ಜೈಲಿಗೆ ಹೋದಾಗ ನಿಮ್ಮ ಅಭಿಮಾನ ಬೆಂಬಲ ಮರೆಯೋಕೆ ಆಗಲ್ಲ. ಡಿ.ಕೆ. ಶಿವಕುಮಾರ್ ದೊಡ್ಡಆಲಹಳ್ಳಿಯ ಕನಕಪುರದವನು ಅಂತಾರೆ ಎಂದರು..
Mekedatu padayatra ಪಾದಯಾತ್ರೆ ಮಾಡದಂತೆ ಸಿದ್ದರಾಮಯ್ಯಗೆ ಹೇಳಿದ್ಯಾಕೆ? ಸ್ಪಷ್ಟನೆ ಕೊಟ್ಟ ಡಿಕೆಶಿ
ತಿಹಾರ ಜೈಲಿಗೆ ಹೋಗಿದ್ದಕ್ಕೆ ಈ ಗಡ್ಡ ಬಿಟ್ಟಿದ್ದೇನೆ. ನೀವೆ ಇದಕ್ಕೆ ಮುಕ್ತಿ ಕೊಡಬೇಕು. ನಾನು ನಿಮ್ಮ ಮಗ. ನೀವೇ ಡಿ.ಕೆ. ಶಿವಕುಮಾರ್. ಕೇಂದ್ರ ಸರ್ಕಾರ ಮತ್ತೊಮ್ಮೆ ದಬ್ಬಾಳಿಕೆ ಮಾಡ್ತಿದ್ದಾರೆ. ಮತ್ತೊಮ್ಮೆ ಜೈಲಿಗೆ ಹಾಕಿಸಬೇಕು ಅಂತಾ ಷಡ್ಯಂತ್ರ ಮಾಡ್ತಿದ್ದಾರೆ. ಆದ್ರೆ ನಾನು ಈ ಷಡ್ಯಂತ್ರಕ್ಕೆ ಹೆದರೋದಿಲ್ಲ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿಯವರೇ ಎಲ್ಲರ ಲಿಸ್ಟ್ ಕಳುಹಿಸ್ತೀನಿ ಜೈಲಿಗೆ ಕಳುಹಿಸಿ. ನಿಮಗೆ ಹಾಲು ಕುಡಿದಷ್ಟು ಸಂತೋಷವಾಗುತ್ತೆ. ತಮಿಳುನಾಡಿನವರದ್ದು ರಾಜಕೀಯ ದ್ವೇಷ. ನನ್ನ ಹೋರಾಟಕ್ಕೆ ಎರಡು ಪಕ್ಷದವರು ಷಡ್ಯಂತ್ರ ಮಾಡ್ತಿದ್ದಾರೆ. ಜೆಡಿಎಸ್, ಬಿಜೆಪಿಯವರು ನಾಡಿನದ್ರೋಹಿಗಳೋ ಅನ್ನೋದನ್ನ ನೀವೆ ತೀರ್ಮಾನ ಮಾಡಿ. ನಾನು ನಾಡಿನ ಬದುಕಿಗೋಸ್ಕರ, ನೀರಿಗೋಸ್ಕರ ಹೋರಾಟ ಮಾಡ್ತಿದ್ದೇನೆ ಎಂದರು.
ಮೊಯ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಂದೂಡಿಕೆ
ಕೋವಿಡ್ ಹೆಚ್ಚಾಗ್ತಿದೆ ಪಾದಯಾತ್ರೆ ಮುಂದೂಡಿ ಅಂದ್ರೆ ರಾಜ್ಯ ಕಾಂಗ್ರೆಸ್ ಪಾದಯಾತ್ರೆ ಮುಂದೂಡದೆ ಪಾದಯಾತ್ರೆ ಮಾಡುತ್ತಿದೆ. ಆದ್ರೆ, ಅದೇ ಕಾಂಗ್ರೆಸ್ ನಾಯಕ ಕೋವಿಡ್ ಹೆಚ್ಚಳ ಕಾರಣದಿಂದ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನ ಮುಂದೂಡಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಂದೂಡಿದ್ದಾರೆ...
ನನ್ನ ಬೊಗಸೆಯ ಅಕಾಶ ಎಂಬ ಅತ್ಮಕಥನವನ್ನ ಬಿಡುಗಡೆ ಮಾಡಲು ಸಜ್ಜಾಗಿದ್ದರು.
ಇದೇ 12 ರಂದು ಪುಸ್ತಕ ಬಿಡುಗಡೆ ಮಾಡಬೇಕಿತ್ತು. ಅಲ್ಲದೇ ನಾಳೆ(ಜ.10) ಕ್ಯಾಪಿಟಲ್ ಹೋಟೆಲ್ ನಲ್ಲಿ ಸುದ್ದಿಗೊಷ್ಢಿ ಸಹ ಇಟ್ಟುಕೊಂಡಿದ್ದರು..ಆದ್ರೆ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಸುದ್ದಿಗೊಷ್ಢಿ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನ ಮುಂದೂಡಿದ್ದಾರೆ.
ಡಿಕೆಶಿಗೆ ಟಾಂಗ್ ಕೊಟ್ಟ ಬಿಜೆಪಿ
ಕೊರೋನಾ ಇಲ್ಲ..ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ ಸುಳ್ಳು ಅಂಕಿ-ಸಂಖ್ಯೆಗಳನ್ನ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು. ಇದೀಗ ಅದಕ್ಕೆ ಬಿಜೆಪಿ, ಕಾಂಗ್ರೆಸ್ ನಾಯಕನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಂದೂಡಿದ್ದನ್ನು ಕೋಟ್ ಮಾಡಿ ಟಾಂಗ್ ಕೊಟ್ಟಿದೆ.
ಕೋವಿಡ್ ಎಲ್ಲಿದೆ ಎಲ್ಲಿದೆ ಎಂದು ಕೇಳುತ್ತಿದ್ದ ಡಿಕೆಶಿ ಅವರೇ, ನಿಮ್ಮದೇ ಪಕ್ಷದ ಹಿರಿಯ ನಾಯಕರ ಪತ್ರಿಕಾ ಪ್ರಕಟಣೆ ನೋಡಿ.
ಕೋವಿಡ್ ಇದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಂದೂಡಿದ್ದಾರೆ. ನೀವು ಮಾತ್ರ ಹಠಹಿಡಿದು ಕೊರೋನಾ ಹಬ್ಬಿಸುತ್ತಿದ್ದೀರಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.