8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ ಲವ್ಲಿಬಾಯ್ ಹೆಸರಿನ ಟಗರು ಸಾವು

* 8 ಲಕ್ಷ ಡಿಮ್ಯಾಂಡ್ ಹೊಂದಿದ್ದ ಪ್ರೀತಿಯ ಟಗರು ಸಾವು
* ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಟಗರು
* ಬೈಕ್,ಹೋರಿ,ಚಿನ್ನ ,ಬೆಳ್ಳಿ ನಗದು ಸೇರಿ ಹತ್ತು ಲಕ್ಷ ಮೌಲ್ಯದ ಬಹುಮಾನ ಗೆದ್ದು ತಂದಿದ್ದ ಲವ್ಲಿಬಾಯ್ ಟಗರು

8 lakhs demand lovely boy sheep dies from heart attack at Bagalkote rbj

ಬಾಗಲಕೋಟೆ, (ಮಾ.01): ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಟಗರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಗ್ರಾಮದಲ್ಲಿ ನಡೆದಿದೆ.

8 ಲಕ್ಷ ರೂ. ಡಿಮ್ಯಾಂಡ್ ಹೊಂದಿದ್ದ “ಲವ್ಲಿಬಾಯ್” ಟಗರು ಹೃದಯಾಘಾತದಿಂದ ಸಾವನ್ನಪ್ಪಿದೆ. ಮೂಲತಃ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ, ಕಲಾವಿದ ಹೆಚ್.ಎನ್. ಸೇಬಣ್ಣವರರಿಗೆ ಸೇರಿದ ಟಗರು ಇದ್ದಾಗಿದ್ದು, ಕಾಳಗಕ್ಕೆ ಹೆಸರುವಾಸಿಯಾಗಿತ್ತು

Turuvekere: 26 ಲಕ್ಷ ನೀಡಿ ಹಳ್ಳಿಕಾರ್‌ ಹೋರಿ ಖರೀದಿಸಿದ ಶಾಸಕ ಜಯರಾಮ್‌!

ಕಾಳಗದಲ್ಲಿ ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಲವ್ಲಿಬಾಯ್ ಟಗರು, ಬೈಕ್, ಹೋರಿ, ಚಿನ್ನ, ಬೆಳ್ಳಿ, ನಗದು ಸೇರಿ ಸುಮಾರು ಹತ್ತು ಲಕ್ಷ ರೂ. ವರೆಗೆ ಬಹುಮಾನ ಗೆದ್ದು ಬೀಗಿತ್ತು. ಹಿಂದೆ ಈ ಟಗರನ್ನು ಯಾರೋ ಒಬ್ಬರು 8 ಲಕ್ಷ ರೂ.ಗೆ ಕೇಳಿದ್ದರು. ಟಗರಿನ ಮಾಲೀಕ ಶೇಬಣ್ಣವರ ಮಾತ್ರ ಟಗರು ಮಾರಾಟ ಮಾಡಿರಲಿಲ್ಲ. ಸದ್ಯ ಲವ್ಲಿಬಾಯ್ ಟಗರು ಜೀವಬಿಟ್ಟಿದೆ.

6 ವರ್ಷದ ಲವ್ಲಿಬಾಯ್ ದೇಹಕ್ಕೆ ಮಾಲೆ , ಹಣೆಗೆ ಬೆಳ್ಳಿ ಖಡ್ಗ, ದೇಹಕ್ಕೆ ಭಂಡಾರ ಬಳಿದು, ಪ್ರಶಸ್ತಿಗಳನ್ನು ಪಾರ್ಥೀವ ಶರೀರದ ಮುಂದೆ ಇಟ್ಟು ಗ್ರಾಮದಲ್ಲಿ ಶ್ರದ್ದಾಂಜಲಿಗೆ ವ್ಯವಸ್ಥೆ ಮಾಡಲಾಗಿದೆ. ಟಗರು ಅಭಿಮಾನಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಪಡೆಯಲು ಜನರು ಬರುತ್ತಿದ್ದಾರೆ.

26 ಲಕ್ಷ ನೀಡಿ ಹಳ್ಳಿಕಾರ್‌ ಹೋರಿ ಖರೀದಿಸಿದ ಶಾಸಕ ಜಯರಾಮ್‌!
ಶಾಸಕ ಮಸಾಲ ಜಯರಾಮ್‌ (Masala Jayaram) ಅವರು 26 ಲಕ್ಷ ರೂ.ಗೆ ಏಕಲವ್ಯ ಎಂಬ ಹೆಸರಿನ ಹಳ್ಳಿಕಾರ್‌ ಹೋರಿಯನ್ನು ಖರೀದಿ ಮಾಡಿದ್ದಾರೆ. ಅಳಿವಿನಂಚಿನಲ್ಲಿರುವ ಹಳ್ಳಿಕಾರ್ ತಳಿಯ ಎರಡು ಎತ್ತುಗಳನ್ನು ಜಯರಾಮ್ ಖರೀದಿಸಿದ್ದಾರೆ. 

ಟಿ.ನರಸೀಪುರ ತಾಲೂಕು ಬನ್ನೂರಿನ ಕೃಷ್ಣೇಗೌಡ (Krishnegowda) ಎಂಬುವವರು ಸಾಕಿದ್ದ ಮೂರು ವರ್ಷದ ಹೋರಿ ಏಳು ಅಡಿ ಎತ್ತರವಿದ್ದು, ಸಾಕಷ್ಟು ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಸಹ ಪಡೆದಿದೆ. ಈ ಹೋರಿಗೆ ಫೆ.20ರಂದು ಮಂಡ್ಯದ (Mandya) ಬನ್ನೂರು ಗ್ರಾಮದಲ್ಲಿ ಅದ್ಧೂರಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 6.5 ಲಕ್ಷ ರೂ. ಬೆಲೆಯ ಅಮೃತ್ ಮಹಲ್ ತಳಿ ಜೋಡಿ ಎತ್ತುಗಳನ್ನು ಶಾಸಕ ಜಯರಾಮ್ ಖರೀದಿಸಿದ್ದಾರೆ. ಅಂಕಲಕೊಪ್ಪ ಗ್ರಾಮ ಶಾಸಕರ ತೋಟದಲ್ಲಿ ಜಾನುವಾರುಗಳು ಇವೆ.

1 ಕೋಟಿಯ ಹಳ್ಳಿಕಾರ್‌ ಹೋರಿ ನೋಡಿ ನಿಬ್ಬೆರಗಾದ ಜನ: ಜಿಕೆವಿಕೆಯಲ್ಲಿ(GKVK) ಆಯೋಜಿಸಿರುವ ಕೃಷಿ ಮೇಳಕ್ಕೆ(Krishimela) ಆಗಮಿಸಿದ್ದ 1 ಕೋಟಿ ಮೌಲ್ಯದ ಹಳ್ಳಿಕಾರ್‌ ಹೋರಿ(Hallikar Hori) ‘ಕೃಷ್ಣ’ನೇ ಚರ್ಚಾ ವಿಷಯವೂ ಆಗಿದ್ದು ವಿಶೇಷವಾಗಿತ್ತು. ಹೋರಿ ಎಲ್ಲಿದೆ ಎಂದು ಬಹುತೇಕರು ಹುಡುಕುತ್ತಿದ್ದುದು ಕಂಡುಬಂತು. ವಿದ್ಯಾರ್ಥಿಗಳು(Students), ರೈತರು(Farmers), ಮಾಧ್ಯಮದವರ ಕೇಂದ್ರ ಬಿಂದುವೂ ಆಗಿದ್ದ. 

ಒಂದು ಕೋಟಿ ರು. ಬೆಲೆಯ ಹೋರಿಯ ಮಾಲಿಕ ಮಂಡ್ಯ ಜಿಲ್ಲೆ ಮಳವಳ್ಳಿಯ ಬೋರೇಗೌಡ ಹೋರಿಯ ವೀರ್ಯ(Sperm) ಮಾರಾಟದ ಅಂಕಿ ಅಂಶ ನೀಡುತ್ತಿದ್ದಂತೆ ಅಬ್ಬಬ್ಬಾ ಎಂದು ಹುಬ್ಬೇರಿಸಿದರು. ‘ವಾರಕ್ಕೆ ಎರಡು ಬಾರಿ ಕೃಷ್ಣನಿಂದ ವೀರ್ಯ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಕಡಿಮೆ ಎಂದರೂ ಒಂದು ಸಲಕ್ಕೆ 300 ಸ್ಟಿಕ್‌ ವೀರ್ಯ ಸಂಗ್ರಹಿಸಿ ಕೆಡದಂತೆ ನೈಟ್ರೋಜನ್‌ ಕಂಟೈನರ್‌ನಲ್ಲಿ ಸಂಗ್ರಹಿಸಲಾಗುವುದು.  ಇದಕ್ಕಾಗಿಯೇ ವೀರ್ಯ ಸಂವರ್ಧನ ಕೇಂದ್ರವನ್ನು ಸ್ಥಾಪಿಸಲಾಗಿದೆ. 

ವೀರ್ಯ ಮಾರಾಟಕ್ಕೆ ಏಜೆನ್ಸಿ: ಇಂತಹ ದಷ್ಟಪುಷ್ಟವಾದ ಹಳ್ಳಿಕಾರ್‌ ತಳಿ ಎಲ್ಲೂ ಇಲ್ಲ. ಈ ಸಂತತಿ ನಶಿಸಿ ಹೋಗಬಾರದು ಎಂಬ ಉದ್ದೇಶದಿಂದ ಮೊದಲು ನೈಸರ್ಗಿಕವಾಗಿ ಹಸುಗಳಿಗೆ ವೀರ್ಯ ನೀಡುತ್ತಿದ್ದೆ. ಹೋರಿಯ ಮೌಲ್ಯ ಗೊತ್ತಾದ ನಂತರ ವೀರ್ಯ ಸಂಗ್ರಹಿಸಿ ಏಕೆ ಮಾರಾಟ ಮಾಡಬಾರದು ಎಂಬ ಯೋಚನೆ ಬಂತು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಇಲ್ಲಿಯವರೆಗೂ ಒಂದು ಸಾವಿರಕ್ಕೂ ಅಧಿಕ ವೀರ್ಯದ ಸ್ಟಿಕ್‌ಗಳನ್ನು ಮಾರಾಟ ಮಾಡಿದ್ದು ಶೇ.95 ರಷ್ಟುಫಲಿತಾಂಶ ಕಂಡುಬರುತ್ತಿದೆ. 170 ಹಸುಗಳಿಗೆ(Cow) ನೇರವಾಗಿ ಕ್ರಾಸಿಂಗ್‌ ಮಾಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ವೀರ್ಯ ಸ್ಟಿಕ್‌ ಮಾರಾಟ ಮಾಡಲು ಏಜೆನ್ಸಿ ನೀಡಿದ್ದು ಇದನ್ನು ಇನ್ನಷ್ಟುವಿಸ್ತರಿಸಲಾಗುವುದು ಎನ್ನುತ್ತಾರೆ ಬೋರೇಗೌಡ.

Latest Videos
Follow Us:
Download App:
  • android
  • ios