Asianet Suvarna News Asianet Suvarna News

ರಾಜ್ಯದಲ್ಲಿ 7ಲಕ್ಷ ಟನ್‌ ಅಕ್ಕಿ ಇದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ : ಖಂಡ್ರೆ ಕಿಡಿ

ಕರ್ನಾಟಕ ರಾಜ್ಯದಲ್ಲಿ 7ಲಕ್ಷ ಟನ್‌ ಅಕ್ಕಿ ಇದ್ದರೂ ಅದನ್ನು ಕೇಂದ್ರ ಸರ್ಕಾರ ಮುಚ್ಚಿಸಿಟ್ಟಿದೆ. ಇರುವ ಅಕ್ಕಿಯನ್ನು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಅಡತಡೆ ಮಾಡುತ್ತಿರುವ ಬಿಜೆಪಿ ವರ್ತನೆಯನ್ನು ಜನ ನೋಡುತ್ತಿದ್ದಾರೆ ಎಂದು ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.

7 lakh tonnes of rice in the state, the central government is not providing it says minister eshwar khandre rav
Author
First Published Jul 2, 2023, 4:53 AM IST

ಬೀದರ್‌ (ಜು.2) : ಕರ್ನಾಟಕ ರಾಜ್ಯದಲ್ಲಿ 7ಲಕ್ಷ ಟನ್‌ ಅಕ್ಕಿ ಇದ್ದರೂ ಅದನ್ನು ಕೇಂದ್ರ ಸರ್ಕಾರ ಮುಚ್ಚಿಸಿಟ್ಟಿದೆ. ಇರುವ ಅಕ್ಕಿಯನ್ನು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಅಡತಡೆ ಮಾಡುತ್ತಿರುವ ಬಿಜೆಪಿ ವರ್ತನೆಯನ್ನು ಜನ ನೋಡುತ್ತಿದ್ದಾರೆ ಎಂದು ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.

ಅವರು ನಗರದಲ್ಲಿ ಭೇಟಿಯಾದ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಕರ್ನಾಟಕ ಸರ್ಕಾರಕ್ಕೆ ಎಫ್‌ಸಿಐ ಅವರು ಅಕ್ಕಿ ಒದಗಿಸುವ ಭರವಸೆ ಕೊಟ್ಟನಂತರವೂ ಬಹಿರಂಗ ಹರಾಜಿನಲ್ಲಿ ರಾಜ್ಯ ಸರ್ಕಾರದವರಿಗೆ ಪರವಾನಿಗೆ ಕೊಡೋದಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ಹೇಳುತ್ತಿದೆ ಎಂದರು.

ಕಲ್ಯಾಣ ಕರ್ನಾಟಕದ ಹಸಿರುಗೆ ರಾಜ್ಯ ಸರ್ಕಾರದಿಂದಲೇ ಕೊಡಲಿ ಏಟು!

ರಾಜ್ಯದಲ್ಲಿ ಎಲ್ಲಿಯವರೆಗೆ ಅಕ್ಕಿ ವ್ಯವಸ್ಥೆ ಆಗುವದಿಲ್ಲವೋ, ಅಲ್ಲಿಯವರೆಗೆ ಬಡ ಜನರಿಗೆ ಧನಸಹಾಯ ಮಾಡುತ್ತೇವೆ. ಮೂರು ತಿಂಗಳಲ್ಲಿ ಅಕ್ಕಿ ಪೂರೈಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಇನ್ನು ಬಿಜೆಪಿಯವರಿಗೆ ಕೆಲಸ ಇಲ್ಲದ್ದಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಕೊಟ್ಟಿರುವ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. 15 ಲಕ್ಷ ರು. ಕೊಟ್ಟರಾ? 2ಕೋಟಿ ಉದ್ಯೋಗ? ಸೂರಿಲ್ಲದವರಿಗೆ ಸೂರು ಕೊಟ್ಟರಾ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಸೋತಿದ್ದಾರೆ, ಹತಾಶ ಭಾವನೆಯಿಂದ ಏನೇನೋ ಹೇಳ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಕೇಳಿ ಕಮಲ ಪಾಳಯಕ್ಕೆ ಈಶ್ವರ ಖಂಡ್ರೆ ಟಾಂಗ್‌ ನೀಡಿದರು.

Follow Us:
Download App:
  • android
  • ios