Asianet Suvarna News Asianet Suvarna News

67th Karnataka Rajyotsava: 67 ಸಾಧಕರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ರಾಜ್ಯ ಸರ್ಕಾರ 67 ಅರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ಇನ್ನು, ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ 10 ಸಂಘ ಸಂಸ್ಥೆಗಳಿಗೂ ಪ್ರಶಸ್ತಿ ಘೋಷಿಸಿದೆ. 

67th karnataka rajyotsava prize announced to 67 achievers by state government ash
Author
First Published Oct 30, 2022, 7:54 PM IST

ನವೆಂಬರ್‌ 1 ರಂದು ರಾಜ್ಯ ಸರ್ಕಾರ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಹಿನ್ನೆಲೆ 67 ಅರ್ಹ ಸಾಧಕರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ಇನ್ನು, ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ 10 ಸಂಘ ಸಂಸ್ಥೆಗಳಿಗೂ ಸರ್ಕಾರ ಪ್ರಶಸ್ತಿ ಘೋಷಿಸಿದೆ. 

ಇಸ್ರೋ ವಿಜ್ಞಾನಿ ಚಂದ್ರಯಾನ ಖ್ಯಾತಿಯ ಕೆ. ಶಿವನ್‌, ಸಾಹಿತಿಗಳಾದ ಅ.ರಾ. ಮಿತ್ರ, ಪ್ರೊಫೆಸರ್ ಕೃಷ್ಣೇಗೌಡರು, ಚಿತ್ರ ನಟರಾದ ದತ್ತಣ್ಣ, ಅವಿನಾಶ್‌, ಕಿರುತೆರೆ ನಟ ಸಿಹಿ ಕಹಿ ಚಂದ್ರು, ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌ ಅವರಿಗೆ ಪ್ರಶಸ್ತಿ ಪ್ರಕಟ ಮಾಡಲಾಗಿದೆ. 

ಇದನ್ನು ಓದಿ: Kannada Rajyotsava Award: 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಅರ್ಹ ಸಾಧಕರಿಗೆ ರಾಜ್ಯೋತ್ಸವ 

ಅಲ್ಲದೆ, ಅತ್ಯಂತ ತಳಮಟ್ಟದ ಸಾಧಕರಾದ ವಿಜಯನಗರ ಜಿಲ್ಲೆಯ ಪೌರ ಸೇನಾನಿ ಶ್ರೀಮತಿ ಮಲ್ಲಮ್ಮ, ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣರ, ಚಾಮರಾಜನಗರ ಜಿಲ್ಲೆಯ ಸೋಲಿಗರ ಮಾದಮ್ಮ, ಇಂಗ್ಲೀಷ್‌ ಕಡಲ್ಗಾಲುವೆ ಈಜಿದ ಅಂಗವಿಕಲ ಈಜುಗಾರ ರಾಘವೇಂದ್ರ ಅನ್ವೇಕರ, ರಾಮನಗರ ಜಿಲ್ಲೆಯ ಸಾಲುಮರದ ನಿಂಗಣ್ಣ, ರಾಯಚೂರು ಜಿಲ್ಲೆಯ ಸೂಲಗಿತ್ತಿ ಕಮಲಮ್ಮ ಹಾವೇರಿಯ ವೀರಗಾಸೆ ಕಲಾವಿದ ಮಹೇಶ್ವರ ಗೌಡ ಲಿಂಗದಹಳ್ಳಿಗೆ ಸಹ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದೆ. 

ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ / ಸಂಘ ಸಂಸ್ಥೆಗಳಿಗೆ 67ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರವು ಹರ್ಷಿಸುತ್ತದೆ ಎಂದು ತಿಳಿಸಿದೆ.

ಅಲ್ಲದೆ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಅಮೃತ ಮಹೋತ್ಸವ ಆಚರಣೆಯ ಸಂಬಂಧ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ - 2022 ಅನ್ನು ನೀಡಿ ಗೌರವಿಸಲು ಸರ್ಕಾರವು ಹರ್ಷಿಸುತ್ತದೆ ಎಂದೂ ತಿಳಿಸಿದೆ.

ಇನ್ನು, ರಾಜ್ಯೋತ್ಸವ ಪ್ರಶಸ್ತಿ ಪಡೆಯುತ್ತಿರುವ ಇತರ ಕೆಲ ಸಾಧಕರ ವಿವರ ಹೀಗಿದೆ..

ಸಂಕೀರ್ಣ ಕ್ಷೇತ್ರ: ಸುಬ್ಬರಾಮ ಶೆಟ್ಡಿ - ಬೆಂಗಳೂರು, ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ - ಬೆಂಗಳೂರು, ಶ್ರೀಮತಿ ಸೋಲಿಗರ ಮಾದಮ್ಮ - ಚಾಮರಾಜನಗರ.
ಕೃಷಿ‌ ಕ್ಷೇತ್ರ: ಗಣೇಶ್ ತಿಮ್ಮಯ್ಯ - ಕೊಡಗು, ಚಂದ್ರಶೇಖರ್ ನಾರಯಣಪುರ - ಚಿಕ್ಕಮಗಳೂರು.
ವಿಜ್ಞಾನ ತಂತ್ರಜ್ಞಾನ: ಕೆ.ಶಿವನ್ - ಬೆಂಗಳೂರು, ಡಾ.ಡಿ.ಆರ್.ಬಳೂರಗಿ - ರಾಯಚೂರು.
ಪತ್ರಿಕೋದ್ಯಮ: ಎಚ್ ಆರ್ ಶ್ರೀಶಾ - ಬೆಂಗಳೂರು, ಜಿ.ಎಂ.ಶಿರಹಟ್ಟಿ ‌- ಗದಗ. 
ಸೈನಿಕ ಕ್ಷೇತ್ರ: ಸು‌ಬೇದಾರ್ ಬಿ.ಕೆ ಕುಮಾರಸ್ವಾಮಿ - ಬೆಂಗಳೂರು.
ಯಕ್ಷಗಾನ ಕ್ಷೇತ್ರ: ಸುಬ್ರಹ್ಮಣ್ಯ ಧಾರೇಶ್ವರ - ಉತ್ತರ ಕನ್ನಡ.

Follow Us:
Download App:
  • android
  • ios