ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ
* ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ
* ಪಾಸಿಟಿವಿಟಿ ದರ 0.60 % ಹಾಗೂ ಡೆತ್ ರೇಟ್ 3.54 % ಇದೆ.
* ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
ಬೆಂಗಳೂರು, (ಸೆ.20): ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇಂದು (ಸೆ.20) ಹೊಸದಾಗಿ 677 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 24 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 1678 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್ 3ನೇ ಅಲೆ ಭೀತಿ: 'ವೈದ್ಯರು, ನರ್ಸ್‌ಗಳಿಗೆ ಬೂಸ್ಟರ್ ಡೋಸ್ ನೀಡಿ'
ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 29,68,543ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 29.16,530 ಸೋಂಕಿತರು ಗುಣಮುಖರಾಗಿದ್ದಾರೆ.14358 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 0.60 % ಹಾಗೂ ಡೆತ್ ರೇಟ್ 3.54 % ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-3, ಬೆಳಗಾವಿ-28, ಬೆಂಗಳೂರು ಗ್ರಾಮಾಂತರ-5, ಬೆಂಗಳೂರು ನಗರ-213, ಬೀದರ್-1, ಚಾಮರಾಜನಗರ-5, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-35, ಚಿತ್ರದುರ್ಗ-4, ದಕ್ಷಿಣ ಕನ್ನಡ-102, ದಾವಣಗೆರೆ-3, ಧಾರವಾಡ-5, ಗದಗ-2, ಹಾಸನ-37, ಹಾವೇರಿ-0, ಕಲಬುರಗಿ-3, ಕೊಡಗು-29, ಕೋಲಾರ-23, ಕೊಪ್ಪಳ-0, ಮಂಡ್ಯ-5, ಮೈಸೂರು-37, ರಾಯಚೂರು-0, ರಾಮನಗರ-0, ಶಿವಮೊಗ್ಗ-7, ತುಮಕೂರು-26, ಉಡುಪಿ-63, ಉತ್ತರ ಕನ್ನಡ-41, ವಿಜಯಪುರ-0, ಯಾದಗಿರಿ-0.