Asianet Suvarna News Asianet Suvarna News

ರಾಜ್ಯದಲ್ಲಿ 6400 ಅಕ್ರಮ ಪೂಜಾ ಕೇಂದ್ರಗಳು!

  • ಸರ್ಕಾರದ ಉನ್ನತ ಮೂಲಗಳ ಪ್ರಕಾರ, ರಾಜ್ಯದಲ್ಲಿ ಈವರೆಗೆ 6,395 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು (ದೇವಾಲಯ, ಮಸೀದಿ ಹಾಗೂ ಚಚ್‌ರ್‍) ಗುರುತು
  • ಪೈಕಿ 2,989 ಕಟ್ಟಡ (ಜುಲೈವರೆಗೆ) ತೆರವು ಬಾಕಿ ಇರುವುದಾಗಿ ತಿಳಿದುಬಂದಿದೆ.
6400 illegal religious centres in Karnataka snr
Author
Bengaluru, First Published Sep 15, 2021, 7:26 AM IST

 ಬೆಂಗಳೂರು (ಸೆ.15):  ಸರ್ಕಾರದ ಉನ್ನತ ಮೂಲಗಳ ಪ್ರಕಾರ, ರಾಜ್ಯದಲ್ಲಿ ಈವರೆಗೆ 6,395 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು (ದೇವಾಲಯ, ಮಸೀದಿ ಹಾಗೂ ಚಚ್‌ರ್‍) ಗುರುತಿಸಲಾಗಿದ್ದು, ಈ ಪೈಕಿ 2,989 ಕಟ್ಟಡ (ಜುಲೈವರೆಗೆ) ತೆರವು ಬಾಕಿ ಇರುವುದಾಗಿ ತಿಳಿದುಬಂದಿದೆ.

2009ರಲ್ಲಿ ಸುಪ್ರೀಂಕೋರ್ಟ್‌ ಆದೇಶ ನೀಡಿದಾಗ ರಾಜ್ಯದಲ್ಲಿ 5,668 ಅನಧಿಕೃತ ಧಾರ್ಮಿಕ ಕಟ್ಟಡಗಳಿದ್ದವು. 2009ರಲ್ಲಿ ಸುಪ್ರೀಂ ಕೋರ್ಟ್‌ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ (ಸಕ್ರಮ, ತೆರವು, ಸ್ಥಳಾಂತರ) ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈವರೆಗೆ 12 ವರ್ಷದಲ್ಲಿ 2,887 ದೇವಾಲಯ, ಮಸೀದಿ ಹಾಗೂ ಚಚ್‌ರ್‍ಗಳನ್ನು ತೆರವುಗೊಳಿಸಲಾಗಿದೆ. ಆದರೆ, ಇದೇ ಅವಧಿಯಲ್ಲಿ (2009 ಬಳಿಕ) 1,242 ಅನಧಿಕೃತ ಕಟ್ಟಡಗಳು ಮತ್ತೆ ತಲೆ ಎತ್ತಿವೆ. ಈ ಪೈಕಿ 1,054 ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಒಟ್ಟಾರೆ 2,898 ಅನಧಿಕೃತ ಕಟ್ಟಡಗಳು ತೆರವಿಗೆ ಬಾಕಿ ಇವೆ.

ತುಮಕೂರು : ಜಿಲ್ಲೆಯಲ್ಲಿ 46 ಅನಧಿಕೃತ ಧಾರ್ಮಿಕ ಕೇಂದ್ರಗಳು

ದಕ್ಷಿಣ ಕನ್ನಡದಲ್ಲೇ ಹೆಚ್ಚು:  ದಾಖಲೆಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,579 ಅನಧಿಕೃತ ಧಾರ್ಮಿಕ ಕಟ್ಟಡಗಳಿವೆ. ಬಳಿಕ ಶಿವಮೊಗ್ಗ 740, ಬೆಳಗಾವಿ 612, ಕೋಲಾರ 397, ಬಾಗಲಕೋಟೆ 352, ಧಾರವಾಡ 324, ಮೈಸೂರು 315, ಕೊಪ್ಪಳ 306 ಇದೆ. 2009 ಸೆಪ್ಟೆಂಬರ್‌ 29ರವರೆಗೆ ಒಂದೂ ಅನಧಿಕೃತ ಕಟ್ಟಡ ಹೊಂದಿರದ ಬಳ್ಳಾರಿಯಲ್ಲಿ ಕಳೆದ 12 ವರ್ಷದಲ್ಲಿ 410 ದೇವಾಲಯಗಳು ಸಾರ್ವಜನಿಕ ಸ್ಥಳಗಳಲ್ಲಿ ತಲೆ ಎತ್ತಿವೆ. ಜಿಲ್ಲಾಡಳಿತ ಈಗಾಗಲೇ ಎಲ್ಲಾ ದೇವಾಲಯಗಳನ್ನೂ ತೆರವುಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 459 ಧಾರ್ಮಿಕ ಕೇಂದ್ರಗಳನ್ನು ಅಕ್ರಮ ಎಂದು ಗುರುತಿಸಲಾಗಿದ್ದು, ಯಾವುದೇ ತೆರವು ಕಾರಾರ‍ಯಚರಣೆ ನಡೆಸಲಾಗಿಲ್ಲ.

ಶಿವಮೊಗ್ಗದಲ್ಲಿ 740 ಧಾರ್ಮಿಕ ಶ್ರದ್ಧಾಕೇಂದ್ರಗಳಿದ್ದು, ಇವುಗಳಲ್ಲಿ ಈಗಾಗಲೇ 147 ಅನ್ನು ತೆರವುಗೊಳಿಸಲಾಗಿದೆ. ರಾಯಚೂರಲ್ಲಿ 236ರಲ್ಲಿ ಇಲ್ಲಿಯತನಕ 141 ಕಟ್ಟಡಗಳನ್ನು ಧ್ವಂಸ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 46 ಧಾರ್ಮಿಕ ಕೇಂದ್ರಗಳಿದ್ದು, ಈ ಪೈಕಿ 41 ದೇವಾಲಯಗಳು, 5 ದರ್ಗಾಗಳು ಹಾಗೂ ಘೋರಿಗಳು ಸೇರಿವೆ. ಈವರೆಗೆ ಯಾವುದೇ ತೆರವು ಕಾರ‍್ಯ ನಡೆಸಿಲ್ಲ. ಆದರೆ, ಕೋಲಾರದಲ್ಲಿ 24 ಶ್ರದ್ಧಾ ಕೇಂದ್ರಗಳನ್ನು ಅಕ್ರಮ ಎಂದು ಗುರುತಿಸಲಾಗಿದ್ದು, ಎಲ್ಲವನ್ನೂ ತೆರೆವುಗೊಳಿಸಲಾಗಿದೆ. ಇವುಗಳಲ್ಲಿ 19 ದೇವಾಲಯಗಳು, 3 ಚಚ್‌ರ್‍, ಒಂದು ದರ್ಗಾ ಹಾಗೂ ಒಂದು ಗುರುದ್ವಾರ ಆಗಿದೆ.

ಮೈಸೂರು ಜಿಲ್ಲೆಯಲ್ಲಿ 92 ದೇವಸ್ಥಾನಗಳು, 5 ಮಸೀದಿ/ಗೋರಿ, 1 ಚಚ್‌ರ್‍ಗಳನ್ನು ತೆರುವುಗೊಳಿಸಲು ಗುರುತಿಸಿ ಜಿಲ್ಲಾಡಳಿತ ಪಟ್ಟಿಮಾಡಿದೆ. ಇದರಲ್ಲಿ 2 ದೇವಸ್ಥಾನಗಳು ಮಾತ್ರ ತೆರವಾಗಿವೆ.

"

ಅದೇ ರೀತಿ ದಾವಣಗೆರೆಯಲ್ಲಿ 24ರ ಪೈಕಿ, ಈಗಾಗಲೇ 13 ಕಟ್ಟಡ ತೆರವಾಗಿದೆ. ಚಿತ್ರ​ದುರ್ಗದಲ್ಲಿ 130 ಧಾರ್ಮಿಕ ಕೇಂದ್ರಗಳು ಅಕ್ರಮ ಎಂದು ಗುರುತಿಸಲಾಗಿದ್ದು, 98 ತೆರವಾಗಿದೆ. ಇವುಗಳಲ್ಲಿ ಒಂದು ದರ್ಗಾ ಆಗಿದ್ದರೆ ಉಳಿದವು ದೇಗುಲಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,579 ಅಕ್ರಮ ಧಾರ್ಮಿಕ

ಕಟ್ಟಡಗಳಿದ್ದು, 920 ಅನ್ನು ನೆಲಸಮಗೊಳಿಸಲಾಗಿದೆ. ಇವುಗಳ ಪೈಕಿ 667 ದೇವಸ್ಥಾನಗಳು, 186 ಮಸೀದಿಗಳು, 56 ಚಚ್‌ರ್‍ಗಳಾಗಿವೆ. ಉಡುಪಿಯಲ್ಲಿ 21 ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಾರ್ವಜನಿಕ ಸ್ಥಳಗಳಲ್ಲಿದ್ದು ಬಹುತೇಕವನ್ನು ಸ್ಥಳಾಂತರಿಸಲಾಗಿದೆ.

ಮೈಸೂರು ಘಟನೆ ಬಳಿಕ ಸ್ಥಗಿತ-ಧಾರವಾಡದಲ್ಲಿ 305 ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದ್ದು, ಈ ಪೈಕಿ 43 ತೆರವಾಗಿದೆ. ಇವುಗಳಲ್ಲಿ 31 ದೇವಸ್ಥಾನಗಳಾಗಿವೆ. ಹಾವೇರಿ (41ರಲ್ಲಿ) 12 ಕೇಂದ್ರಗಳನ್ನು ತೆರವು ಮಾಡಲಾಗಿದೆ. ಮೈಸೂರು ಘಟನೆ ಬಳಿಕ ಉಳಿದ ಅಕ್ರಮ ಕಟ್ಟಡಗಳ ತೆರವು ಕಾರಾರ‍ಯಚರಣೆಗೆ ತಾತ್ಕಾಲಿಕ ಬ್ರೇಕ್‌ ಹಾಕಲಾಗಿದೆ.

ವಿಶೇಷವೆಂದರೆ ಚಿಕ್ಕಮಗಳೂರಲ್ಲಿ ಇಂಥ ಯಾವುದೇ ಶ್ರದ್ಧಾಕೇಂದ್ರಗಳನ್ನು ಅಕ್ರಮ ಎಂದು ಗುರುತಿಸಿಲ್ಲ. ಹೀಗಾಗಿ ಅಲ್ಲಿ ತೆರವು ಕಾರಾರ‍ಯಚರಣೆ ನಡೆದಿಲ್ಲ. ಆದರೆ, ಕೊಡಗಿನಲ್ಲಿ ಒಂದೇ ಕೇಂದ್ರ ಗುರುತಿಸಲಾಗಿದ್ದು, ಅದರ ಕುರಿತು ಜಿಲ್ಲಾಡಳಿತ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಂತಿಲ್ಲ.

ಬೆಂಗಳೂರಲ್ಲಿ 456 ಅನಧಿಕೃತ ಪೂಜಾ ಕೇಂದ್ರಗಳು

ರಾಜ್ಯದಲ್ಲಿ ಅನಧಿಕೃತ ದೇವಸ್ಥಾನಗಳ ಕಾರ್ಯಾಚರಣೆ ಬೆನ್ನಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲೂ ಅನಧಿಕೃತ ದೇಗುಲಗಳು, ಪೂಜಾ ಕೇಂದ್ರಗಳ ಸರ್ವೇ ಆರಂಭಗೊಂಡಿದ್ದು ವಾರದೊಳಗೆ ಪಟ್ಟಿಅಂತಿಮಗೊಳ್ಳಲಿದೆ. ಪ್ರಸ್ತುತ ಪಾಲಿಕೆ ಈಗಾಗಲೇ 456 ಅನಧಿಕೃತ ದೇವಸ್ಥಾನ, ಪೂಜಾ ಕೇಂದ್ರಗಳನ್ನು ಗುರುತಿಸಿದ್ದು ತೆರವಿಗೆ ಸಿದ್ಧತೆ ನಡೆಸಿದೆ.

Follow Us:
Download App:
  • android
  • ios