ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ; ಚಿಕಿತ್ಸೆ ಸಿಗದೆ ಚೇಳು ಕಡಿತಕ್ಕೊಳಗಾದ ಮಗು ದಾರುಣ ಸಾವು!
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಪೋಷಕರೊಂದಿಗೆ ಜಮೀನಿಗೆ ತೆರಳಿದ್ದಾಗ 6 ವರ್ಷದ ಮಗುವಿಗೆ ಚೇಳು ಕುಟುಕಿ ಮೃತಪಟ್ಟಿದೆ. ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಯಾದಗಿರಿ (ಡಿ.19): ಪೋಷಕರೊಂದಿಗೆ ಜಮೀನಿಗೆ ತೆರಳಿದ್ದಾಗ 6 ವರ್ಷದ ಮಗುವಿಗೆ ಚೇಳು ಕುಟುಕಿದ ನೋವಿನಿಂದ ನರಳಾಡಿ ಮೃತಪಟ್ಟ ದಾರುಣ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.
ಜಗದೀಶ್ (6) ಮೃತ ಮಗು.ಬಸವರಾಜ-ಮಾಳಮ್ಮನ ದಂಪತಿಗಳ ಮಗನಾಗಿರುವ ಜಗದೀಶ, ಮನೆಯಲ್ಲಿರದೆ ಪೋಷಕರೊಂದಿಗೆ ಜಮೀನಿಗೆ ತೆರಳಿದ್ದಾನೆ. ಜಮೀನಿನಲ್ಲಿ ಆಟವಾಡುವಾಗ ಚೇಳು ಕಡಿದಿದೆ. ಮಗುವಿನ ಚೀರಾಟ ಗಮನಿಸಿ ಪೋಷಕರು ತಕ್ಷಣ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ನಗರದ ಎಸ್.ಎಮ್.ಬಿರಾದಾರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗಲೂ ಮಗು ಆರೋಗ್ಯವಾಗಿದೆ. ಅಲ್ಲಿಂದ ರಾಯಚೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಪೋಷಕರು ನಿರ್ಧರಿಸಿದ್ದಾರೆ. ಆದರೆ ಈ ವೇಳೆ ಎಲ್ಲಿಗೆ ಹೋಗುವುದು ಬೇಡ, ಚೇಳು ಕಡಿತಕ್ಕೆ ಎಲ್ಲ ಔಷಧಿಗಳು ಇಲ್ಲಿವೆ. ಇಲ್ಲಿಯೇ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದ ಎಸ್.ಎಮ್.ಬಿರಾದಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು.ಆದರೆ ಆರೋಗ್ಯವಾಗಿದ್ದ ಮಗು ಏಕಾಏಕಿ ಗಂಭೀರವಾಗಿ ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಗಳು ಎರಡೆರಡು ಬಾರಿ ಓಡಿ ಹೋಗಿದ್ದರೂ ಅಂತರ್ಜಾತಿ ಪ್ರೀತಿಗೆ ವಿರೋಧ; ಯುವಕನ ಮೇಲೆ ಹಲ್ಲೆ!
ಮಗು ಆರೋಗ್ಯವಾಗಿದ್ದಾಗಲೇ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ಕರೆದೊಯ್ಯುತ್ತೇವೆಂದರು ಮಗು ಡಿಸ್ಚಾರ್ಜ್ ಮಾಡದ ಖಾಸಗಿ ಆಸ್ಪತ್ರೆ ವೈದ್ಯರು. ಆದರೆ ಎಲ್ಲ ಚಿಕಿತ್ಸೆ ಇದೆ ಎಂದು ತಿಳಿಸಿ ಮಗುವನ್ನು ಅದೇ ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದಾರೆ. ಚಿಕಿತ್ಸೆ ಸರಿಯಾಗಿ ನೀಡದೇ ಮಗು ಮೃತಪಟ್ಟಿದೆ. ಮಗುವಿನ ಸಾವಿಗೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಗು ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾದಗಿರಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.