ಬೆಂಗಳೂರು (ಅ.14):  ಇತ್ತೀಚಿನ ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮಂಗಳವಾರದ ಮಟ್ಟಿಗೆ ಕೊರೋನಾ ಸೋಂಕಿನ ಅಬ್ಬರ ತುಸು ಕಡಿಮೆಯಿದ್ದು, 8,191 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ 10,421 ಮಂದಿ ಸೋಂಕು ಮುಕ್ತರಾಗಿದ್ದು, ಕೊರೋನಾ ಮಣಿಸಿದವರ ಒಟ್ಟು ಸಂಖ್ಯೆ ಆರು ಲಕ್ಷದ ಗಡಿ ದಾಟಿದೆ. 87 ಮಂದಿ ಮಂಗಳವಾರ ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಸತತ ಮೂರನೇ ದಿನ ಹೊಸ ಪ್ರಕರಣಗಳ ಸಂಖ್ಯೆಯು ಗುಣಮುಖರಾದವರಿಗಿಂತ ಕಡಿಮೆಯಿದ್ದು, ಸಕ್ರಿಯ ಸೋಂಕಿತರ ಪ್ರಮಾಣ 1.13 ಲಕ್ಷಕ್ಕೆ ಇಳಿದಿದೆ. ಇವರಲ್ಲಿ 919 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಶೇ.9.66 ರಷ್ಟಿದ್ದ ಪಾಸಿಟಿವಿಟಿ ದರ ಮಂಗಳವಾರ ಶೇ.7.7ಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆ. ಈವರೆಗೆ ಒಟ್ಟು 7.26 ಲಕ್ಷ ಮಂದಿಯಲ್ಲಿ ಕೊರೋನಾ ವೈರಸ್‌ ಇರುವುದು ಪತ್ತೆಯಾಗಿದೆ.

ಕೊರೋನಾ ಮಾರಿಗೆ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 10,123 ತಲುಪಿದೆ. ಸೋಮವಾರ 0.92 ರಷ್ಟಿದ್ದ ಮರಣ ಪ್ರಮಾಣ ಮಂಗಳವಾರ ಶೇ. 1.06ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 6.02 ಲಕ್ಷ ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ರಾಜ್ಯದ ಕೊರೋನಾ ಪೀಡಿತರ ಗುಣಮುಖರಾಗುವ ದರ ಶೇ. 82.47ಕ್ಕೆ ಏರಿಕೆಯಾಗಿದೆ. 1,06,241 ಸೋಂಕು ಪತ್ತೆ ಹಚ್ಚುವ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದ ಒಟ್ಟು ಪರೀಕ್ಷೆ 61.37 ಲಕ್ಷಕ್ಕೆ ತಲುಪಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 28 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹಾಸನ 10, ತುಮಕೂರು 7, ಬೆಂಗಳೂರು ಗ್ರಾಮಾಂತರ 5, ರಾಮನಗರ, ಮೈಸೂರು, ಕೊಪ್ಪಳ, ಕೋಲಾರ, ಕೊಡಗು, ದಕ್ಷಿಣ ಕನ್ನಡ, ಬಳ್ಳಾರಿಯಲ್ಲಿ ತಲಾ 3, ಚಾಮರಾಜನಗರ, ಧಾರವಾಡ, ಮಂಡ್ಯ, ಶಿವಮೊಗ್ಗದಲ್ಲಿ ತಲಾ 2, ಯಾದಗಿರಿ, ವಿಜಯಪುರ, ಉತ್ತರ ಕನ್ನಡ, ಉಡುಪಿ, ಕಲಬುರಗಿ, ಹಾವೇರಿ, ಬೆಳಗಾವಿ, ಬಾಗಲಕೋಟೆಯಲ್ಲಿ ತಲಾ ಒಬ್ಬರು ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಹೊರ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಬೆಂಗಳೂರಲ್ಲಿ ಚಿಕಿತ್ಸೆ ..

ಬೆಂಗಳೂರು ನಗರದಲ್ಲಿ 3,776 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಉಳಿದಂತೆ ಮೈಸೂರು 416, ತುಮಕೂರು 391, ಬೆಳಗಾವಿ 358, ದಕ್ಷಿಣ ಕನ್ನಡ 314, ಚಿತ್ರದುರ್ಗ 242, ಹಾಸನ 238, ಚಿಕ್ಕಮಗಳೂರು 231, ಮಂಡ್ಯ 215, ಬೆಂಗಳೂರು ಗ್ರಾಮಾಂತರ 208, ಶಿವಮೊಗ್ಗ 170, ಉಡುಪಿ 168, ಧಾರವಾಡ 154, ಕೊಡಗು 151, ಚಿಕ್ಕಬಳ್ಳಾಪುರ 136, ಉತ್ತರ ಕನ್ನಡ 115, ಕಲಬುರಗಿ 114, ದಾವಣಗೆರೆ 106, ಕೋಲಾರ 101, ಬಾಗಲಕೋಟೆ 88, ವಿಜಯಪುರ 87, ಗದಗ 66, ಚಾಮರಾಜನಗರ 61, ರಾಮನಗರ 59, ಯಾದಗಿರಿ 53, ಹಾವೇರಿ 39, ಬಳ್ಳಾರಿ 38, ಕೊಪ್ಪಳ 37, ರಾಯಚೂರು 36, ಬೀದರ್‌ ಜಿಲ್ಲೆಯಲ್ಲಿ 23 ಹೊಸ ಪ್ರಕರಣಗಳು ದಾಖಲಾಗಿವೆ.