ಒಬ್ಬ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಕು, 10 ಕೆಜಿ ಕೊಟ್ರೆ ಸರ್ಕಾರದ ಬೊಕ್ಕಸಕ್ಕೆ ಹೊರೆ: ಕತ್ತಿ ಮಾತು
* ಸಚಿವ ಉಮೇಶ್ ಕತ್ತಿ ಮತ್ತೆ ವಿವದಾತ್ಮ ಹೇಳಿಕೆ
* ಓರ್ವ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಕು ಸಾಕು ಎಂದು ಸಚಿವ ಉಮೇಶ್ ಕತ್ತಿ
* ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಹೇಳಿಕೆ
ಚಾಮರಾಜನಗರ, (ಆ.26): ಓರ್ವ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಕು, 10 ಕೆಜಿ ಕೊಟ್ಟರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಇಂದು (ಆ.26) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಹಾರ ಇಲಾಖೆಯಲ್ಲಿ 4 ಕೋಟಿ 1 ಲಕ್ಷ ಫಲಾನುಭವಿಗಳಿದ್ದು, ಹೆಚ್ಚುವರಿ ಆಹಾರ ಧಾನ್ಯದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ನನ್ನ ಪ್ರಕಾರ ಒಬ್ಬ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಲುತ್ತದೆ ಎಂದಿದ್ದಾರೆ.
ಅಕ್ಕಿ ಕೇಳಿದ ರೈತನಿಗೆ 'ಸಾಯುವುದು ಒಳ್ಳೇದು' ಎಂದ ಸಚಿವ: ಸಮರ್ಥನೆ ವೇಳೆ ಕತ್ತಿ ಉದ್ಧಟತನ
ನಾವು ಈಗ ಆಹಾರ ಭದ್ರತೆ ಯೋಜನೆಯಲ್ಲಿ 5 ಕೆಜಿ ಅಕ್ಕಿ ಕೊಡುತ್ತೇವೆ. ಸಿದ್ದರಾಮಯ್ಯ ಪದೇಪದೆ 10 ಕೆಜಿ ಅಕ್ಕಿ ಕೊಡುತ್ತೇವೆ. ನನ್ನ ಪ್ರಕಾರ ಒಬ್ಬ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಕು. ಹೆಚ್ಚುವರಿ ಆಹಾರ ಧಾನ್ಯ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಹೇಳಿದರು.
ಈ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದ್ದು, ಉಮೇಶ್ ಕತ್ತಿಗೆ ತೆರಕಣಾಂಬಿಯಲ್ಲಿ ರೈತ ಸಂಘದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.
ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಾವು ಸಾಯಬೇಕಾ ಬದುಕಬೇಕಾ? ಎಂದು ಈ ಹಿಂದೆ ವ್ಯಕ್ತಿಯೋರ್ವ ಪ್ರಶ್ನಿಸಿದ್ದ. ಅದಕ್ಕೆ ದರ್ಪದಿಂದಲೇ ಉತ್ತರಿಸಿದ್ದ ಸಚಿವ ಉಮೇಶ್ ಕತ್ತಿ "ಸಾಯಿ" ಎಂದು ಹೇಳಿದ್ದರು. ಇದು ಸಹ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಕ್ಷಮೆಯಾಚಿಸಿದ್ದರು. ಇದೀಗ ಮತ್ತೊಂದು ಹೇಳಿಕೆ ಕೊಟ್ಟ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.