Asianet Suvarna News Asianet Suvarna News

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಅ.1ರ ಅಂಕಿ ಸಂಖ್ಯೆ

* ಕರ್ನಾಟಕದಲ್ಲಿ ಕೊರೋನಾ ಅಂಕಿ ಸಂಖ್ಯೆ
* ಹೊಸದಾಗಿ 589 ಜನರಿಗೆ ಕೊರೋನಾ ಪಾಸಿಟಿವ್ 
* ಪಾಸಿಟಿವಿಟಿ ದರ 0.46 % ಹಾಗೂ ಡೆತ್ ರೇಟ್ 2.20 %
* ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ 
 

589 new Coronavirus Cases and 13 deaths in Karnataka On Oct 1st rbj
Author
Bengaluru, First Published Oct 1, 2021, 7:48 PM IST
  • Facebook
  • Twitter
  • Whatsapp

ಬೆಂಗಳೂರು, (ಅ.1): ರಾಜ್ಯದಲ್ಲಿ ಇಂದು (ಅ.01) ಹೊಸದಾಗಿ 589 ಜನರಿಗೆ ಕೊರೋನಾ(Coronavirus) ಪಾಸಿಟಿವ್ ದೃಢಪಟ್ಟಿದ್ದು, 13 ಸೋಂಕಿತರು ಸಾವನ್ನಪ್ಪಿದ್ದಾರೆ. 

887 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.  ಈ ಮೂಲಕ ರಾಜ್ಯದಲ್ಲಿ ಇದುವರೆಗೆ 2926284 ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ ಪ್ರಸ್ತುತ 12469 ಸಕ್ರಿಯ ಪ್ರಕರಣಗಳಿವೆ. 

13 ದಿನದ ಬಳಿಕ ರಾಜ್ಯದಲ್ಲಿ ಮತ್ತೆ ಕೊರೋನಾ ಹೆಚ್ಚಳ..!

ಸಾವಿನ ಸಂಖ್ಯೆ 37,807ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ 0.46 % ಹಾಗೂ ಡೆತ್ ರೇಟ್ 2.20 % ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ 221 ಜನರಿಗೆ ಸೋಂಕು ತಗುಲಿದ್ದು, 5 ಜನ ಸಾವನ್ನಪ್ಪಿದ್ದಾರೆ. 212 ಜನ ಗುಣಮುಖರಾಗಿದ್ದಾರೆ. 7,627 ಸಕ್ರಿಯ ಪ್ರಕರಣಗಳಿವೆ. 

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-2, ಬೆಳಗಾವಿ-8, ಬೆಂಗಳೂರು ಗ್ರಾಮಾಂತರ-20, ಬೆಂಗಳೂರು ನಗರ-221, ಬೀದರ್-0, ಚಾಮರಾಜನಗರ-5, ಚಿಕ್ಕಬಳ್ಳಾಪುರ-4, ಚಿಕ್ಕಮಗಳೂರು-25, ಚಿತ್ರದುರ್ಗ-3, ದಕ್ಷಿಣ ಕನ್ನಡ-86, ದಾವಣಗೆರೆ-7, ಧಾರವಾಡ-4, ಗದಗ-0, ಹಾಸನ-39, ಹಾವೇರಿ-3, ಕಲಬುರಗಿ-0, ಕೊಡಗು-34, ಕೋಲಾರ-8, ಕೊಪ್ಪಳ-1, ಮಂಡ್ಯ-6, ಮೈಸೂರು-37, ರಾಯಚೂರು-0, ರಾಮನಗರ-2, ಶಿವಮೊಗ್ಗ-15, ತುಮಕೂರು-21, ಉಡುಪಿ-23, ಉತ್ತರ ಕನ್ನಡ-15, ವಿಜಯಪುರ-0, ಯಾದಗಿರಿ-0.

Follow Us:
Download App:
  • android
  • ios