*   ಸೆ.17ರಂದು 1003 ಪ್ರಕರಣಗಳು ಪತ್ತೆ*   1.14 ಲಕ್ಷ ಪರೀಕ್ಷೆ ನಡೆದಿದ್ದು, ಶೇ.0.81ರ ಪಾಸಿಟಿವಿಟಿ ದರ ವರದಿ*   ರಾಯಚೂರು, ಬೀದರ್‌ ಮತ್ತು ಬಾಗಲಕೋಟೆಯಲ್ಲಿ ಶೂನ್ಯ ಪ್ರಕರಣ 

ಬೆಂಗಳೂರು(ಅ.01): ರಾಜ್ಯದಲ್ಲಿ ಗುರುವಾರ 933 ಮಂದಿಯಲ್ಲಿ ಕೋವಿಡ್‌(Covid19) ಸೋಂಕು ಪತ್ತೆಯಾಗಿದ್ದು, 14 ಮಂದಿ ಮರಣವನ್ನಪ್ಪಿದ್ದಾರೆ. ಸೆ.17ರಂದು 1003 ಪ್ರಕರಣ ವರದಿಯಾದ ಬಳಿಕ ಮೊದಲ ಬಾರಿಗೆ 900ಕ್ಕಿಂತ ಹೆಚ್ಚು ದೈನಂದಿನ ಪ್ರಕರಣ ದಾಖಲಾಗಿವೆ. 

1.14 ಲಕ್ಷ ಪರೀಕ್ಷೆ ನಡೆದಿದ್ದು, ಶೇ.0.81ರ ಪಾಸಿಟಿವಿಟಿ ದರ ವರದಿಯಾಗಿದೆ. ಇದು ಸೆಪ್ಟೆಂಬರ್‌ನ ಗರಿಷ್ಠ ಪಾಸಿಟಿವಿಟಿ ದರ. ಬೆಂಗಳೂರು ನಗರದಲ್ಲಿ 291, ದಕ್ಷಿಣ ಕನ್ನಡ 94, ಉಡುಪಿ 77, ಮೈಸೂರು 76, ಚಿಕ್ಕಮಗಳೂರು 63, ಹಾಸನ 57, ತುಮಕೂರು 54, ಕೊಡಗು 48, ಮಂಡ್ಯ 42, ಮಂಡ್ಯ 40, ಶಿವಮೊಗ್ಗ 25 ಮತ್ತು ಬೆಳಗಾವಿಯಲ್ಲಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಯಚೂರು, ಬೀದರ್‌ ಮತ್ತು ಬಾಗಲಕೋಟೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಹತ್ತರೊಳಗೆ ಹೊಸ ಪ್ರಕರಣ ಬೆಳಕಿಗೆ ಬಂದಿದೆ.

ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಬೆಂಗಳೂರು ನಗರದಲ್ಲಿ 5, ದಕ್ಷಿಣ ಕನ್ನಡ 3, ಹಾಸನ 2, ಬೆಳಗಾವಿ, ಮೈಸೂರು, ತುಮಕೂರು ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 29.76 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 29.25 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 12,780 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ಚೇತರಿಕೆ ದರ ಶೇ.98 ಇದೆ. 37,794 ಮಂದಿ ಮರಣವನ್ನಪ್ಪಿದ್ದಾರೆ. 4.76 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ. ರಾಜ್ಯದಲ್ಲಿ ಗುರುವಾರ 1.47 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ಕೊರೋನಾ ಬಗ್ಗೆ ಮತ್ತಷ್ಟು ನಿಗಾವಹಿಸಲು ಸೂಚನೆ

ಕೆಲವು ದಿನಗಳ ಹಿಂದಷ್ಟೆ ಕೊರೋನಾ ಬಗ್ಗೆ ಮತ್ತಷ್ಟು ನಿಗಾವಹಿಸುವಂತೆ ಕೇಂದ್ರ ಗೃಹ ಇಲಾಖೆ ಕರ್ನಾಟಕ (Karnataka) ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದೆ. ಪತ್ರದ ಮೂಲಕ ಸೂಚಿಸಿರುವ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲ, ಹಬ್ಬದ ದಿನಗಳಲ್ಲಿ ಕೊರೋನಾ ನಿಯಮಗಳ ಪಾಲನೆ ಕುರಿತು ಎಚ್ಚರ ವಹಿಸುವಂತೆ ಹೇಳಿದ್ದಾರೆ. ಅಲ್ಲದೇ ಟೆಸ್ಟ್, ಟ್ರ್ಯಾಕ್, ಟ್ರಿಟ್, ವ್ಯಾಕ್ಸಿನ್ ತಂತ್ರಗಾರಿಕೆ ಮುಂದುವರೆಸಲು ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ಗೆ ಸೂಚನೆ ಕೊಟ್ಟಿದ್ದರು.