ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮಾಲಿಕತ್ವದ ಸೌಭಾಗ್ಯ ಲಕ್ಷ್ಮೀ ಶುಗರ್ಸ್‌ ಕಾರ್ಖಾನೆಯು 9 ಸಹಕಾರಿ ಬ್ಯಾಂಕ್‌ಗಳಲ್ಲಿ 578 ಕೋಟಿ ರು. ಸಾಲ ಪಡೆದಿದ್ದು, ಉದ್ದೇಶಪೂರ್ವಕವಾಗಿ ದಿವಾಳಿ ಎಂದು ತೋರಿಸಿ ಸಾಲ ಮರುಪಾವತಿ ಮಾಡದೆ ಬಹುಕೋಟಿ ಹಗರಣ ನಡೆಸಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಆರೋಪಿಸಿದ್ದಾರೆ.

ಬೆಂಗಳೂರು (ಅ.21): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮಾಲಿಕತ್ವದ ಸೌಭಾಗ್ಯ ಲಕ್ಷ್ಮೀ ಶುಗರ್ಸ್‌ ಕಾರ್ಖಾನೆಯು 9 ಸಹಕಾರಿ ಬ್ಯಾಂಕ್‌ಗಳಲ್ಲಿ 578 ಕೋಟಿ ರು. ಸಾಲ ಪಡೆದಿದ್ದು, ಉದ್ದೇಶ ಪೂರ್ವಕವಾಗಿ ದಿವಾಳಿ ಎಂದು ತೋರಿಸಿ ಸಾಲ ಮರುಪಾವತಿ ಮಾಡದೆ ಬಹುಕೋಟಿ ಹಗರಣ ನಡೆಸಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಆರೋಪಿಸಿದ್ದಾರೆ.

ಕಾರ್ಖಾನೆಯು ಕಳೆದ ಎರಡು ವರ್ಷಗಳಿಂದ ಕ್ರಮವಾಗಿ 60 ಕೋಟಿ ರು. ಹಾಗೂ 72 ಕೋಟಿ ರು. ಲಾಭ ಗಳಿಸಿದೆ. ಹೀಗಿದ್ದರೂ ಅಪೆಕ್ಸ್‌ ಬ್ಯಾಂಕ್‌ ಕಂಪನಿಯನ್ನು ದಿವಾಳಿ (ಎನ್‌ಪಿಎ) ಎಂದು ಘೋಷಿಸಿದ್ದು, ತನ್ಮೂಲಕ ಉದ್ದೇಶಪೂರ್ವಕವಾಗಿ ಸುಸ್ತಿದಾರರಾಗಿರುವವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು 860 ಕೋಟಿ ರು.ಗಳ ಬೃಹತ್‌ ಹಗರಣವಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಅಮಿತ್‌ಶಾ ಹಾಗೂ ರಾಜ್ಯ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸೇರಿ ಎಲ್ಲರೂ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ರಮೇಶ್‌ ಜಾರಕಿಹೊಳಿ ಕೇಸ್‌ ಸಾರಾಂಶ ಸಲ್ಲಿಸದಕ್ಕೆ ಹೈಕೋರ್ಟ್‌ ಅತೃಪ್ತಿ

ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಮಾತೆತ್ತಿದರೆ ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಬಸವರಾಜ ಬೊಮ್ಮಾಯಿ ಅವರೇ, ನಿಮಗೆ ತಾಕತ್ತಿದ್ದರೆ ರಮೇಶ್‌ ಜಾರಕಿಹೊಳಿ ಸೇರಿದಂತೆ ಒಂಬತ್ತು ಮಂದಿ ನಿರ್ದೇಶಕರ ಆಸ್ತಿ ಮುಟ್ಟುಗೋಲು ಹಾಕಿ ಬಂಧಿಸಿ. ನಿಮ್ಮ ಆಡಳಿತದಲ್ಲಿ ಶ್ರೀಮಂತರಿಗೊಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಯಾಕೆ?’ ಎಂದು ಪ್ರಶ್ನಿಸಿದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್‌ ಕಾರ್ಖಾನೆಯು 578 ಕೋಟಿ ರು. ಸಾಲವನ್ನು ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿದೆ. ಜತೆಗೆ ಆದಾಯ ತೆರಿಗೆ ಇಲಾಖೆಗೆ 150 ಕೋಟಿ ರು. ಬಾಕಿ, ರೈತರಿಗೆ 50 ಕೋಟಿ ರು. ಹಾಗೂ ಗುತ್ತಿಗೆದಾರರಿಗೆ 50 ಕೋಟಿ ರು., ಇತರರಿಗೆ 60 ಕೋಟಿ ರು. ಸಾಲ ಬಾಕಿ ಉಳಿಸಿಕೊಂಡಿದೆ. 

ಗೋಕಾಕನಲ್ಲಿ ಶೀಘ್ರದಲ್ಲೇ ಕೈಗಾರಿಕಾ ಪ್ರದೇಶ, ಸಾವಿರಾರು ಜನರಿಗೆ ಉದ್ಯೋಗ

ಇದೀಗ ದಿವಾಳಿ ಎಂದು ತೋರಿಸಿ ವಂಚಿಸಲು ಮುಂದಾಗಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ಇಷ್ಟೆಲ್ಲಾ ಆದರೂ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್‌ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಈ ಬಗ್ಗೆ ಬಸವರಾಜ ಬೊಮ್ಮಾಯಿ, ಅಮಿತ್‌ ಶಾ ಹಾಗೂ ಎಸ್‌.ಟಿ. ಸೋಮಶೇಖರ್‌ ಅವರಿಗೆ ದೂರು ನೀಡಿದ್ದರೂ ಕ್ರಮವಾಗಿಲ್ಲ. ಅಮಿತ್‌ ಶಾ ಕೃಪಾಕಟಾಕ್ಷ ಇದೆ ಎಂದು ರಮೇಶ್‌ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹೀಗಾಗಿ ಇದರಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ ಎಂದರು.