ಬೆಂಗಳೂರು (ಮೇ.12): ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಸೆಮಿ ಲಾಕ್‌ಡೌನ್‌ ನಿಯಮಾವಳಿ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗೆ ಇಳಿದವರ ವಿರುದ್ಧ ಮಂಗಳವಾರವೂ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ.

 ಬೇಕಾಬಿಟ್ಟಿಓಡಾಡುತ್ತಿದ್ದ ಸುಮಾರು 5693ಕ್ಕೂ ಅಧಿಕ ವಾಹನಗಳನ್ನು ರಾಜ್ಯದ ವಿವಿಧೆಡೆ ಜಪ್ತಿ ಮಾಡಲಾಗಿದೆ. 

6 ರಿಂದ 10ರವರೆಗೆ ವಾಹನಗಳಿಗೆ ಅವಕಾಶ : ಕಂಡೀಷನ್ಸ್ ಅಪ್ಲೆ ...

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು 2255 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 720 ವಾಹನಗಳನ್ನು ವಶಕ್ಕೆ ಪಡೆದಿದ್ದರೆ, ತುಮಕೂರಲ್ಲಿ 610 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 

ಇನ್ನುಳಿದಂತೆ ರಾಯಚೂರಲ್ಲಿ 400, ಮೈಸೂರು 388, ಧಾರವಾಡ 300, ಶಿವಮೊಗ್ಗ 350, ಕೊಪ್ಪಳ 174, ಮಂಗಳೂರು 89, ಹಾವೇರಿ 81, ಕೊಡಗು 79, ಉತ್ತರ ಕನ್ನಡ 70, ಬೆಳಗಾವಿ 60, ಗದಗ 53, ಉಡುಪಿ 45 ಮತ್ತು ರಾಮನಗರದಲ್ಲಿ 19 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona