Asianet Suvarna News Asianet Suvarna News

ರಾಜ್ಯದ 50% ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಆಗಿಲ್ಲ: ನವೀಕರಣಕ್ಕೆ ಗಡುವು ಕೊಟ್ಟ ಸರ್ಕಾರ

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2024-25) ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಎರಡು ತಿಂಗಳು ಕಾಲಾವಕಾಶ ನೀಡಿದರೂ, ಶೇ.50ರಷ್ಟು ಖಾಸಗಿ ಶಾಲೆಗಳು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತೊಮ್ಮೆ ಗಡುವು ವಿಸ್ತರಿಸಿದ್ದು, ನ.4ರವರೆಗೆ ಕಾಲಾವಕಾಶ ನೀಡಿದೆ. 

50 percent of private schools in the state are not renewed gvd
Author
First Published Oct 6, 2024, 1:02 PM IST | Last Updated Oct 6, 2024, 1:03 PM IST

ಬೆಂಗಳೂರು (ಅ.06): ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2024-25) ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಎರಡು ತಿಂಗಳು ಕಾಲಾವಕಾಶ ನೀಡಿದರೂ, ಶೇ.50ರಷ್ಟು ಖಾಸಗಿ ಶಾಲೆಗಳು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತೊಮ್ಮೆ ಗಡುವು ವಿಸ್ತರಿಸಿದ್ದು, ನ.4ರವರೆಗೆ ಕಾಲಾವಕಾಶ ನೀಡಿದೆ. ಈ ಹಿಂದೆ ಜು.25ರಿಂದ ಸೆ.30ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಈ ಅವಧಿಯಲ್ಲಿ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಅ.5ರಿಂದ ನ.4ರವರೆಗೆ ಅವಧಿ ವಿಸ್ತರಿಸಲಾಗಿದೆ. ಶಾಲೆಗಳು ಅಧಿಕೃತ ಎಂದು ಪರಿಗಣಿಸಲು ಮಾನ್ಯತೆ ನವೀಕರಿಸಲೇಬೇಕು. 

ಇಲ್ಲದಿದ್ದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿ ನೋಂದಣಿ, ಆರ್‌ಟಿಇ ಶುಲ್ಕ ಮರುಪಾವತಿ, ಅನುದಾನಿತ ಶಾಲಾ ಶಿಕ್ಷಕರ ವೇತನ ಪಾವತಿಸಲು ಅವಕಾಶ ಇರುವುದಿಲ್ಲ. ಮಾನ್ಯತೆ ಪೂರೈಸುವ ಶಾಲೆಗಳಿಗೆ ಪ್ರಥಮ ಮಾನ್ಯತೆಯನ್ನು ಹತ್ತು ವರ್ಷಗಳ ಅವಧಿಗೆ ನೀಡಲಾಗುತ್ತದೆ. ಒಂದು ವೇಳೆ ಅರ್ಜಿ ತಿರಸ್ಕೃತಗೊಂಡಿದ್ದರೆ ಆಡಳಿತ ಮಂಡಳಿಯವರು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕೂಡ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ವಿಳಂಬ ಮಾಡದೇ ಇತ್ಯರ್ಥಪಡಿಸಬೇಕು.ಅರ್ಜಿ ಸ್ವೀಕಾರದಿಂದ ಹಿಡಿದು ಮಾನ್ಯತೆ ನೀಡಿಕೆ, ನವೀಕರಣ ಪ್ರಕ್ರಿಯೆ ಡಿ.9ರ ಒಳಗೆ ಪೂರ್ಣಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಬಿ.ಬಿ. ಕಾವೇರಿ ತಿಳಿಸಿದ್ದಾರೆ.

ರಾಜ್ಯ ಪಠ್ಯಕ್ರಮ ಪಾಲಿಸದಿದ್ದರೆ ಕ್ರಮ, ಸರ್ಕಾರದಿಂದ ಎಚ್ಚರಿಕೆ: ರಾಜ್ಯ ಪಠ್ಯಕ್ರಮದ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳನ್ನು ಕಡ್ಡಾ ಯವಾಗಿ ಅನುಸರಿಸಬೇಕು. ಷರತ್ತುಗಳನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ನಿಯಮಾ ನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಎಚ್ಚರಿಸಿದ್ದಾರೆ. 

ರಾಜ್ಯದಲ್ಲಿ ಕನ್ನಡ ವ್ಯಾವಹಾರಿಕ ಭಾಷೆಯಾಗಲಿ: ಸಿಎಂ ಸಿದ್ದರಾಮಯ್ಯ

ರಾಜ್ಯ ಪಠ್ಯಕ್ರಮದ ಅನುಮತಿ ಪಡೆದಿರುವ ಕೆಲವು ಶಾಲೆಗಳಲ್ಲಿ 'ಹೆಚ್ಚುವರಿ'ಯಾಗಿ ಇತರೆ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಅನುಸರಿಸುತ್ತಿರುವ ಕುರಿತು ಶಾಲಾ ಶಿಕ್ಷಣ ಇಲಾಖೆಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ಶಾಲೆಗಳಿಗೆ ಮಾನ್ಯತೆ ನೀಡುವಾಗ ಮತ್ತು ಮಾನ್ಯತೆ ನವೀಕರಿಸುವಾಗ ರಾಜ್ಯ ಪಠ್ಯಕ್ರಮ ವನ್ನು ಕಡ್ಡಾಯವಾಗಿ ಪಾಲಿಸಬೇಕು ಷರತ್ತುಗಳನ್ನು ವಿಧಿಸಲಾಗಿರುತ್ತದೆ. ಅದರಂತೆ ವಿದ್ಯಾರ್ಥಿ ದಾಖಲಾತಿ ವ್ಯವಸ್ಥೆ (ಸ್ಯಾಟ್ಸ್) ತಂತ್ರಾಂಶ ಮೂಲಕ ಪಠ್ಯ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

Latest Videos
Follow Us:
Download App:
  • android
  • ios