ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕೊಳಗೇರಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುವ ಬಹುಮಹಡಿ ಕಟ್ಟಡದಲ್ಲಿ ಒಂದು ಬಿಎಚ್‌ಕೆ ಪ್ಲಾಟ್ ಖರೀದಿಸುವ ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ .5 ಲಕ್ಷ ಸಹಾಯಧನ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ಬೆಂಗಳೂರು (ಸೆ.5) : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕೊಳಗೇರಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುವ ಬಹುಮಹಡಿ ಕಟ್ಟಡದಲ್ಲಿ ಒಂದು ಬಿಎಚ್‌ಕೆ ಪ್ಲಾಟ್ ಖರೀದಿಸುವ ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ .5 ಲಕ್ಷ ಸಹಾಯಧನ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಕುರಿತು ವಿವರಣೆ ನೀಡಿರುವ ಪಾಲಿಕೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಡಾ. ರಾಮ್ ಪ್ರಸಾತ್ ಮನೋಹರ್, ಸಹಾಯಧನ ನೀಡುವ ಬಗ್ಗೆ ಸಲ್ಲಿಸಿರುವ ಪ್ರಸ್ತಾವನೆಗೆ ಮುಖ್ಯ ಆಯುಕ್ತರು ಒಪ್ಪಿಗೆ ನೀಡಿದ್ದು, ಆಡಳಿತಾಧಿಕಾರಿಗಳ ಸಮ್ಮತಿ ಬಾಕಿ ಇದೆ ಎಂದು ತಿಳಿಸಿದ್ದಾರೆ.
Bengaluru: 100 ಸ್ಕೈವಾಕ್ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ
ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಒಂಟಿ ಮನೆ ಯೋಜನೆಯಡಿ ಮನೆ ನಿರ್ಮಾಣಕ್ಕೆ ನೀಡಲಾಗುವ .5 ಲಕ್ಷ ಸಹಾಯಧನ ನೀಡುವ ಯೋಜನೆ ಇದೆ. ನಗರದಲ್ಲಿ 20*30 ಅಥವಾ ಕಡಿಮೆ ಅಳತೆಯ ಸ್ವಂತ ನಿವೇಶನ ಹೊಂದಿದ ಆರ್ಥಿಕ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಆದರೆ, ನಿವೇಶನ ಖರೀದಿಸಲು ಆಗದ ಬಡವರು ಸ್ವಂತ ಮನೆ ಕಟ್ಟಲು ಆಗುತ್ತಿಲ್ಲ. ಹೀಗಾಗಿ, ಈ ಒಂಟಿಮನೆ ಯೋಜನೆಯಡಿ ನೀಡುವ ಸ್ವಲ್ಪ ಅನುದಾನವನ್ನು ಸರ್ಕಾರದ ವಿವಿಧ ಯೋಜನೆಗಳಡಿ ನಿರ್ಮಿಸಲಾದ ಮನೆಗಳ ಖರೀದಿಗೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದರು.
ಈ ಯೋಜನೆಗೆ ‘ಬೆಂಗಳೂರು ಅಮೃತೋತ್ಸವ ಮನೆ’(Bengaluru Amrit Mahotsav Mane) ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಪಾಲಿಕೆಯಿಂದ 2022-23ನೇ ಸಾಲಿನಲ್ಲಿ ಒಂಟಿ ಮನೆ ಯೋಜನೆ ಜಾರಿಗಾಗಿ .100 ಕೋಟಿ ಮೀಸಲಿಡಲಾಗಿದೆ. ಇದರಡಿ ಒಟ್ಟು ಎರಡು ಸಾವಿರ ಫಲಾನುಭವಿಗಳಿಗೆ ಅನುಕೂಲ ಆಗಲಿದೆ. ಈ ಪೈಕಿ ಕಳೆದ 2-3 ವರ್ಷದ ಹಿಂದೆ ಅರ್ಜಿ ಸಲ್ಲಿಸಿ ಅನುದಾನ ನಿರೀಕ್ಷೆಯಲ್ಲಿದ್ದ 72 ಫಲಾನುಭವಿಗಳಿಗೆ ತಲಾ .5 ಲಕ್ಷ ಗಳಂತೆ ಅನುದಾನ ನೀಡಲು (3.6 ಕೋಟಿ ರು.) ತೀರ್ಮಾನಿಸಲಾಗಿದೆ. ಉಳಿದ ಅನುದಾನದಲ್ಲಿ ಹೊಸದಾಗಿ ಸರ್ಕಾರಿ ಪ್ರಾಧಿಕಾರಗಳಿಂದ ನಿರ್ಮಿಸಲಾಗುತ್ತಿರುವ ಅಪಾರ್ಚ್‌ಮೆಂಟ್‌ಗಳಲ್ಲಿ ಮನೆ ಖರೀದಿಸುವವರಿಗೆ ನೀಡಲು .20 ಕೋಟಿ ಮೀಸಲಿಡಲಾಗಿದೆ. ಇದರಿಂದ 400 ಮಂದಿಗೆ ಅನುಕೂಲವಾಗಲಿದೆ ಎಂದರು.
ಬಿಬಿಎಂಪಿ ವ್ಯಾಜ್ಯ ನಿರ್ವಹಣೆಗೆ ಅಧಿಕಾರಿ ನೇಮಕ, ಒಂಟಿ ಮನೆ ಯೋಜನೆ ಮತ್ತೆ ಜಾರಿ
ನಿವೇಶನ ರಹಿತ ಬಡವರು ಸರ್ಕಾರಿ ಯೋಜನೆಯಡಿ ಮನೆ ಖರೀದಿಸಿದರೆ ಅವರಿಗೆ ಸಹಾಯ ಧನ ನೀಡಲು ಚಿಂತನೆ ನಡೆಸಲಾಗಿದೆ. ಅದರೊಂದಿಗೆ ಜಂಟಿ ಮನೆ ಯೋಜನೆಯೂ ಮುಂದುವರೆಯಲಿದೆ.
- ಡಾ.ರಾಮ್‌ಪ್ರಸಾತ್ ಮನೋಹರ್, ವಿಶೇಷ ಆಯುಕ್ತರು, ಪಾಲಿಕೆ ಕಲ್ಯಾಣ ವಿಭಾಗ
.1 ಲಕ್ಷ ಇದ್ದರೆ ಮನೆ ಖರೀದಿಸಬಹುದು
ಮುಖ್ಯಮಂತ್ರಿಗಳ .1 ಲಕ್ಷ ಬಹುಮಹಡಿ ಯೋಜನೆಯಡಿ ಈಗಾಗಲೇ 46 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಒಂದು ಮನೆಗೆ .8 ಲಕ್ಷ ನಿಗದಿ ಮಾಡಲಾಗಿದೆ. ಸರ್ಕಾರ ನಿಗಮದ ಮನೆ ಖರೀದಿಗೆ .2 ರಿಂದ .2.5 ಲಕ್ಷ ರಿಯಾಯಿತಿ ನೀಡಲಿದೆ. ಈಗ ಪಾಲಿಕೆಯಿಂದ .5 ಲಕ್ಷ ಕೊಟ್ಟರೆ .7 ಲಕ್ಷ ನೆರವು ನೀಡಿದಂತಾಗುತ್ತದೆ. ಉಳಿದ ಹಣವನ್ನು ಫಲಾನುಭವಿಗಳು ಕೊಟ್ಟು ಸ್ವಂತ ಮನೆ ಹೊಂದಬಹುದಾಗಿದೆ.
