ಬಿಬಿಎಂಪಿ ವ್ಯಾಜ್ಯ ನಿರ್ವಹಣೆಗೆ ಅಧಿಕಾರಿ ನೇಮಕ, ಒಂಟಿ ಮನೆ ಯೋಜನೆ ಮತ್ತೆ ಜಾರಿ
ಬಿಬಿಎಂಪಿ ಒಂಟಿ ಮನೆ ಯೋಜನೆ ಮತ್ತೆ ಜಾರಿಯಾಗುತ್ತಿದೆ. ಪಾಲಿಕೆಗೆ ಈಗಲೇ ಅರ್ಜಿ ಸಲ್ಲಿಸಿ. ಇನ್ನೊಂದೆಡೆ ಪ್ರತಿ ವರ್ಷ ಪಾಲಿಕೆ ಸಂಬಂಧಿಸಿದಂತೆ 2500 ಕೇಸ್ ದಾಖಲಾಗುತ್ತಿದ್ದು, ಪಾಲಿಕೆಗೆ ಸಂಬಂಧಿಸಿದ ವ್ಯಾಜ್ಯ ನಿರ್ವಹಣೆಗೆ ಅಧಿಕಾರಿ ನೇಮಕ ಮಾಡಲಾಗುತ್ತಿದೆ.
ಬೆಂಗಳೂರು (ಆ.15): ನ್ಯಾಯಾಲಯದಲ್ಲಿನ ಬಿಬಿಎಂಪಿ ಪ್ರಕರಣಗಳಿಗೆ ಸಂಬಂಧಪಟ್ಟ ದಾಖಲೆ ಒದಗಿಸುವುದು ಸೇರಿ ಇನ್ನಿತರ ಕಾರ್ಯಕ್ಕಾಗಿ ವ್ಯಾಜ್ಯ ನಿರ್ವಹಣಾ ಅಧಿಕಾರಿಗಳನ್ನು ನೇಮಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ. ಪ್ರತಿ ವರ್ಷ ಬಿಬಿಎಂಪಿಗೆ ಸಂಬಂಧಿಸಿದಂತೆ ಸುಮಾರು 2,500 ಪ್ರಕರಣಗಳು ದಾಖಲಾಗುತ್ತವೆ. ಜತೆಗೆ ಬಿಬಿಎಂಪಿ ಕಾನೂನು ಕೋಶದಲ್ಲಿ 6000-7,500 ಪ್ರಕರಣಗಳು ಬಾಕಿಯಿವೆ. ಇದರಿಂದಾಗಿ ಕಾನೂನು ಕೋಶದ ವಕೀಲರಿಗೆ ಪ್ರಕರಣಗಳ ಮಾಹಿತಿ ಮತ್ತು ಸೂಕ್ತ ದಾಖಲೆಗಳು ದೊರೆಯುತ್ತಿಲ್ಲ. ಹೀಗಾಗಿ ಬಿಬಿಎಂಪಿಗೆ ಸಂಬಂಧಿಸಿದ ಪ್ರಕರಣಗಳಿಗೆ ವಕೀಲರಿಗೆ ಸೂಕ್ತ ದಾಖಲೆ, ಮಾಹಿತಿ ಮತ್ತು ಕಂಡಿಕೆವಾರು ಉತ್ತರ ಒದಗಿಸುವ ಸಲುವಾಗಿ ವ್ಯಾಜ್ಯ ನಿರ್ವಹಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಬಿಎಂಪಿಯ 8 ವಲಯಗಳಲ್ಲಿಯೂ ಪ್ರತ್ಯೇಕವಾಗಿ 9 ಅಧಿಕಾರಿಗಳನ್ನು ನೇಮಿಸಲಾಗಿದೆ. ಅದರ ಜತೆಗೆ ಘನತ್ಯಾಜ್ಯ, ರಸ್ತೆ ಮೂಲಸೌಕರ್ಯ, ಆಡಳಿತ, ಕೆರೆಗಳು, ಚುನಾವಣೆ, ಮಾರುಕಟ್ಟೆಸೇರಿ 26 ವಿಭಾಗಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ವಕೀಲರರಿಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಹಕಾರವನ್ನು ಅಧಿಕಾರಿಗಳು ನೀಡುವಂತೆ ಸೂಚಿಸಲಾಗಿದೆ. ನ್ಯಾಯಾಲಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡುವಂತೆ ವ್ಯಾಜ್ಯ ನಿರ್ವಹಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪ್ರತಿ 15 ದಿನಕ್ಕೊಮ್ಮೆ ತಮ್ಮ ವ್ಯಾಪ್ತಿಯ ಪ್ರಕರಣಗಳ ಹಾಗೂ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿ ಅದು ಕಾರ್ಯಗತಗೊಂಡಿವೆಯೇ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಸಿದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಮುಖ್ಯ ಆಯುಕ್ತರು ಅದೇಶದಲ್ಲಿ ತಿಳಿಸಿದ್ದಾರೆ.
ಧ್ವಜ ಅವರೋಹಣ ಬಳಿಕ ಏನು ಮಾಡಬೇಕು, ಜಮಖಂಡಿ ನಗರಸಭೆ ವಿಡಿಯೋ ಸಂದೇಶ
ಬಿಬಿಎಂಪಿಯ ಒಂಟಿ ಮನೆ ಯೋಜನೆ ಮತ್ತೆ, 20/30 ನಿವೇಶನ ಹೊಂದಿರುವವರು ಯೋಜನೆಗೆ ಅರ್ಹರು
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಒಂಟಿ ಮನೆ ಯೋಜನೆ ಮತ್ತೆ ಆರಂಭಿಸಲಾಗುತ್ತಿದ್ದು, ಶೀಘ್ರದಲ್ಲಿ ಅರ್ಜಿ ಆಹ್ವಾನಿಸಿ ನಗರದ ಎರಡು ಸಾವಿರ ಮಂದಿಗೆ ತಲಾ .5 ಲಕ್ಷದಂತೆ ಧನಸಹಾಯ ನೀಡಲಾಗುವುದು ಎಂದು ವಿಶೇಷ ಆಯುಕ್ತ ಡಾ. ರಾಮ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒಂಟಿ ಮನೆ ಯೋಜನೆಗೆ ಮತ್ತೆ ಚಾಲನೆ ನೀಡುವಂತೆ ಸೂಚಿಸಿದ್ದಾರೆ. ಯೋಜನೆಗೆ ಒಟ್ಟು .100 ಕೋಟಿ ಮೀಸಲಿಡಲಾಗಿದ್ದು, ಎರಡು ಸಾವಿರ ಫಲಾನುಭವಿಗಳಿಗೆ ತಲಾ .5 ಲಕ್ಷದಂತೆ ಧನಸಹಾಯ ನೀಡಲಾಗುತ್ತದೆ. ಶೀಘ್ರದಲ್ಲಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
BBMP Recruitment; ನಮ್ಮ ಕ್ಲಿನಿಕ್ ವಿವಿಧ ಹುದ್ದೆಗೆ ಒಟ್ಟು 1,499 ಅರ್ಜಿ ಸಲ್ಲಿಕೆ
20/30 ನಿವೇಶನ ಹೊಂದಿರುವವರು ಸಹಾಯಧನಕ್ಕೆ ಅರ್ಜಿ ಸಲ್ಲಿಸಿದರೆ ಅರ್ಜಿ ಹಾಗೂ ನಿವೇಶನವನ್ನು ಪರಿಶೀಲಿಸಿ ಸಹಾಯಧನ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಅರ್ಜಿ ವಿಲೇವಾರಿಯಾದ ಕೂಡಲೆ ಸಹಾಯಧನದ ಚೆಕನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಎಂದರು.
ಒಂಟಿ ಮನೆ ಯೋಜನೆ ಅಡಿಯಲ್ಲಿ ಕಳೆದ ಎರಡ್ಮೂರು ವರ್ಷಗಳ ಹಿಂದೆ ಸಲ್ಲಿಸಿದ ಅರ್ಜಿಗಳೇ ಇನ್ನೂ ವಿಲೇವಾರಿಯಾಗಿಲ್ಲ. ಅಂತಹ ಅರ್ಜಿಗಳ ಪೈಕಿ ಪರಿಹಾರ ನೀಡಬಹುದಾದ 72 ಅರ್ಜಿಗಳಿದ್ದು, ಅವುಗಳನ್ನು ಬಿಬಿಎಂಪಿ ಅಧಿಕಾರಿಗಳು ಇದೀಗ ಪರಿಶೀಲಿಸುತ್ತಿದ್ದಾರೆ. ಪರಿಹಾರ ನೀಡಬೇಕಿರುವ 72 ಅರ್ಜಿಗಳಿಗಾಗಿ .36 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.