ಮೆಕ್ಕೆಜೋಳ ಘಟಕ ದುರಂತ ಸಂತ್ರಸ್ತರಿಗೆ 5 ಲಕ್ಷ ರು. ಪರಿಹಾರ: ಸಚಿವ ಸಂತೋಷ್ ಲಾಡ್
ವಿಜಯಪುರದ ರಾಜಗುರು ಫುಡ್ ಕಾರ್ಖಾನೆಯಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಯವರ ಗಳ ಜತೆ ಚರ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ವಿಧಾನಪರಿಷತ್ತು (ಡಿ.08): ವಿಜಯಪುರದ ರಾಜಗುರು ಫುಡ್ ಕಾರ್ಖಾನೆಯಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಯವರ ಗಳ ಜತೆ ಚರ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು. ಬಿಜೆಪಿಯ ಎನ್. ರವಿಕುಮಾರ್ ಅವರು ಶೂನ್ಯ ವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಂತೋಷ್ ಲಾಡ್, ವಿಜಯಪುರದಲ್ಲಿ ಖಾಸಗಿ ಸಂಸ್ಥೆಯ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 160ಕ್ಕಿಂತ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರೆಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಘಟಕದಲ್ಲಿ ಸಂಭವಿಸಿದ ದುರ್ಘಟನೆಯಿಂದ 7 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಅವರುಗಳಿಗೆ ಸದ್ಯ 2 ಲಕ್ಷ ರು. ಪರಿಹಾರ ಘೋಷಿಸಲಾಗಿದೆ.
ಅದನ್ನು 5 ಲಕ್ಷ ರು.ಗೆ ಹೆಚ್ಚಿಸುವ ಕುರಿತಂತೆ ಸಿಎಂ ಜತೆ ಚರ್ಚಿಸಲಾಗುವುದು ಎಂದು ಹೇಳಿದರು. ಅದಕ್ಕೂ ಮುನ್ನ ಮಾತನಾಡಿದ ಎನ್. ರವಿಕುಮಾರ್, ವಿಜಯಪುರದಲ್ಲಿ ನಡೆದ ದುರ್ಘಟನೆಗೆ ಸಂಸ್ಥೆ ಮಾಲೀಕರು ಹಾಗೂ ಕಾರ್ಮಿಕ ಇಲಾಖೆ, ಕೈಗಾರಿಕಾ ಇಲಾಖೆ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ರಾಜ್ಯದಲ್ಲಿ ಕಾರ್ಖಾನೆಗಳಿಗೆ ಅನುಮತಿ ನೀಡಿದ ನಂತರ ಅದನ್ನು ಪರಿಶೀಲಿಸುವುದಿಲ್ಲ. ಈ ಕಾರಣದಿಂದಾಗಿ ಕಾರ್ಖಾನೆಯ ಗೋದಾಮು ಸದೃಢವಾಗಿರದೆ ಕುಸಿದು ಕಾರ್ಮಿಕರ ಪ್ರಾಣಕ್ಕೆ ಎರವಾಗುವಂತಾಗಿದೆ. ಮೃತ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರು. ಪರಿಹಾರ ಘೋಷಿಸಲಾಗಿದ್ದು, ಅದನ್ನು 5 ಲಕ್ಷ ರು.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ: ಶ್ರಮ ಜೀವಿಗಳಾದ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಹೊಸ ಯೋಜನೆ ರೂಪಿಸಿ, ಅಪಘಾತದಲ್ಲಿ ಮೃತಪಟ್ಟಲ್ಲಿ ₹2 ಲಕ್ಷ, ಗಾಯಗೊಂಡಲ್ಲಿ ವೈದ್ಯಕೀಯ ನೆರವಿಗೆ ₹1 ಲಕ್ಷ ನೆರವಿನ ಯೋಜನೆ ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾಣಿಗಳು ಹೆಚ್ಚಿದಾಗ ಬೇಟೆಗೆ ಅವಕಾಶ ನೀಡಿ: ಶಾಸಕ ಆರಗ ಜ್ಞಾನೇಂದ್ರ
ಅಸಂಘಟಿತ ವಲಯದ ಎಲ್ಲರಿಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಮೊದಲ ಹಂತವಾಗಿ ಪತ್ರಿಕಾ ವಿತರಕರಿಗೆ ಯೋಜನೆ ಜಾರಿಗೆ ತರಲಾಗಿದೆ. ನಿಜವಾದ ಪತ್ರಿಕಾ ವಿತರಕರಿಗೆ ನೆರವಾಗಲು ಸರ್ಕಾರ ನೀತಿ ನಿಯಮಾವಳಿ ರೂಪಿಸಲಿದ್ದು, ಅದಕ್ಕಾಗಿ ಎಲ್ಲರ ಸಹಕಾರವೂ ಮುಖ್ಯ ಎಂದರು. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ, ಪ್ರಧಾನ ಕಾರ್ಯದರ್ಶಿ ಸಂಗಮ್ ಸುರೇಶ್, ಪದಾಧಿಕಾರಿಗಳಾದ ಎಂ.ಟಿ.ಗೋಪಾಲ್, ಎಂ.ಆರ್.ಶ್ರೀನಿವಾಸ್, ಎನ್.ದೇವರಾಜ್, ಶಿವಶಾಂತ್, ನಾರಾಯಣಸ್ವಾಮಿ, ಬಿಯುಡಬ್ಲೂಜೆ ಉಪಾಧ್ಯಕ್ಷ ಜುಕ್ರಿಯಾ ಇದ್ದರು.