Bangalore Rural: ಕೊನೆ ದಿನದಂದು ನಾಮಪತ್ರ ಹಿಂಪಡೆದ 5 ಅಭ್ಯರ್ಥಿಗಳು!
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 5 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದು, ಚುನಾವಣೆಯ ಅಂತಿಮ ಕಣದಲ್ಲಿ ಒಟ್ಟು 56 ಅಭ್ಯರ್ಥಿಗಳಿದ್ದಾರೆ.
ದೊಡ್ಡಬಳ್ಳಾಪುರ (ಏ.24) : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 5 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದು, ಚುನಾವಣೆಯ ಅಂತಿಮ ಕಣದಲ್ಲಿ ಒಟ್ಟು 56 ಅಭ್ಯರ್ಥಿಗಳಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರ(Hoskote assemly constituency)ದ ಚುನಾವಣೆಯ ಅಂತಿಮ ಕಣದಲ್ಲಿ 23 ಅಭ್ಯರ್ಥಿಗಳು ಉಳಿದಿದ್ದು, ಒಬ್ಬ ಅಭ್ಯರ್ಥಿಯು ನಾಮಪತ್ರ ಹಿಂಪಡೆದಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳು ಉಳಿದಿದ್ದು, ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
Karnataka election 2023: ಬೈಲಹೊಂಗಲದಲ್ಲಿ ಕಮಲಕ್ಕೆ, ಅರಬಾವಿ, ರಾಯಬಾಗದಲ್ಲಿ ಕೈಗೆ ಬಂಡಾಯ
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ(Doddaballapur constituency)ದ ಚುನಾವಣೆಯ ಅಂತಿಮ ಕಣದಲ್ಲಿ 12 ಅಭ್ಯರ್ಥಿಗಳು ಉಳಿದಿದ್ದು, ಒಬ್ಬ ಅಭ್ಯರ್ಥಿಯು ನಾಮಪತ್ರ ಹಿಂಪಡೆದಿದ್ದಾರೆ. ಅದೇ ರೀತಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು ಉಳಿದಿದ್ದು, ಒಬ್ಬ ಅಭ್ಯರ್ಥಿಯು ನಾಮಪತ್ರ ಹಿಂಪಡೆದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ವಿವರ:
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನವೀನ.ಕೆ (ಸ್ವತಂತ್ರ ಅಭ್ಯರ್ಥಿ), ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಎಂ.ವೆಂಕಟಸ್ವಾಮಿ(ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುನಿಯಪ್ಪ.ಕೆ (ಸ್ವತಂತ್ರ ಅಭ್ಯರ್ಥಿ), ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇಬ್ರಾಹಿಂ ಷರೀಫ್ ತೂಬಗೆರೆ ಷರೀಫ್(ಸ್ವತಂತ್ರ ಅಭ್ಯರ್ಥಿ), ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಅರುಣ್ ಕುಮಾರ್.ಬಿ.ಎನ್(ಸ್ವತಂತ್ರ ಅಭ್ಯರ್ಥಿ)...........
ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ:
ಹೊಸಕೋಟೆ ವಿಧಾನಸಭಾ ಕ್ಷೇತ್ರ:
1.ಎಂಟಿಬಿ ನಾಗರಾಜು (ಬಿ.ಜೆ.ಪಿ), 2.ಪ್ರಶಾಂತ್ ಸುಬ್ರಮಣಿ (ಎಎಪಿ), 3.ಲಕ್ಷ್ಮೀ ನಾರಾಯಣ.ಡಿ.ಎಂ (ಬಿಎಸ್‌ಪಿ), 4.ಶರತ್ ಬಚ್ಚೇಗೌಡ (ಕಾಂಗ್ರೆಸ್), 5. ರಮೇಶ್ ಚಕ್ರವರ್ತಿ (ಬಹುಜನ್ ಭಾರತ ಪಾರ್ಟಿ), 6.ಶರತ್ ಬಚ್ಚೇಗೌಡ (ರಾಷ್ಟ್ರೀಯ ಜನಹಿತ ಪಾರ್ಟಿ), 7. ಎಂ.ಶ್ರೀಮತಿ (ಇಂಡಿಯನ್ ಮೂವ್ಮೆಂಟ್ ಪಾರ್ಟಿ), 8. ಬೆಟ್ಟಳ್ಳಿ ಸೊಣ್ಣಪ್ಪಗೌಡ (ಕರ್ನಾಟಕ ರಾಷ್ಟ್ರ ಸಮಿತಿ), 9.ಅಜಯ್ ಕುಮಾರ್ ರೆಡ್ಡಿ ಅಡಾಲ (ಸ್ವತಂತ್ರ ಅಭ್ಯರ್ಥಿ), 10. ಪಿ.ಆರ್ ಅನುಷಾ (ಸ್ವತಂತ್ರ ಅಭ್ಯರ್ಥಿ), 11. ಜೆ.ಅಶೋಕ (ಸ್ವತಂತ್ರ ಅಭ್ಯರ್ಥಿ), 12.ಅಂಬುಜ(ಸ್ವತಂತ್ರ ಅಭ್ಯರ್ಥಿ), 13.ಈರೇಗೌಡ (ಸ್ವತಂತ್ರ ಅಭ್ಯರ್ಥಿ), 14. ನವೀನ್ ಕುಮಾರ್(ಸ್ವತಂತ್ರ ಅಭ್ಯರ್ಥಿ), 15. ಎನ್ ನಾಗರಾಜ್(ಸ್ವತಂತ್ರ ಅಭ್ಯರ್ಥಿ), 16. ಟಿ. ನಾಗರಾಜ್ (ಸ್ವತಂತ್ರ ಅಭ್ಯರ್ಥಿ), 17. ಕಪಾಲಿ ನಾರಾಯಣ ಸ್ವಾಮಿ (ಸ್ವತಂತ್ರ ಅಭ್ಯರ್ಥಿ), 18. ನಿತೀಶ್.ಟಿ.ಡಿ ಪುರುಷೋತ್ತಮ್ (ಸ್ವತಂತ್ರ ಅಭ್ಯರ್ಥಿ), 19. ವಿ.ನಿತೀಶ್ ಕುಮಾರ್ (ಸ್ವತಂತ್ರ ಅಭ್ಯರ್ಥಿ), 20. ಎಸ್.ಆರ್.ರಘುನಾಥ್ (ಸ್ವತಂತ್ರ ಅಭ್ಯರ್ಥಿ), 21. ಶರತ್ ಕುಮಾರ್.ಕೆ (ಸ್ವತಂತ್ರ ಅಭ್ಯರ್ಥಿ), 22. ಎಚ್.ಟಿ.ಶಶಿಕುಮಾರ್ (ಸ್ವತಂತ್ರ ಅಭ್ಯರ್ಥಿ), 23. ಸುರೇಶ್.ಕೆ (ಸ್ವತಂತ್ರ ಅಭ್ಯರ್ಥಿ).
ದೇವನಹಳ್ಳಿ ವಿಧಾನಸಭಾ ಕ್ಷೇತ್ರ:
1.ನಿಸರ್ಗ ನಾರಾಯಾಣ ಸ್ವಾಮಿ.ಎನ್ (ಜೆಡಿಎಸ್), 2.ಪಿಳ್ಳ ಮುನಿಶಾಮಪ್ಪ (ಬಿಜೆಪಿ), 3.ಕೆ.ಎಚ್.ಮುನಿಯಪ್ಪ (ಕಾಂಗ್ರೆಸ್), 4.ಬಿ.ಕೆ.ಶಿವಪ್ಪ (ಎಎಪಿ), 5.ನಿಖಿಲ್.ಎಂ ವಕೀಲರು (ಕರ್ನಾಟಕ ರಾಷ್ಟ್ರ ಸಮಿತಿ), 6.ದೇವರಾಜ್ (ಸ್ವತಂತ್ರ ಅಭ್ಯರ್ಥಿ), 7. ನಾರಾಯಣಸ್ವಾಮಿ.ಎಂ (ಸ್ವತಂತ್ರ ಅಭ್ಯರ್ಥಿ), 8. ನಿಸರ್ಗ ವೆಂಕಟೇಶ್ (ಸ್ವತಂತ್ರ ಅಭ್ಯರ್ಥಿ), 9. ಬಿ.ರಾಮಚಂದ್ರ ಪ್ರೆಸ್ (ಸ್ವತಂತ್ರ ಅಭ್ಯರ್ಥಿ), 10. ವಿ.ಪೂಜಪ್ಪ (ಸ್ವತಂತ್ರ ಅಭ್ಯರ್ಥಿ), 11. ವೆಲ್ಫೇರ್ ಮಂಜುನಾಥ(ಸ್ವತಂತ್ರ ಅಭ್ಯರ್ಥಿ)
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ:
1.ಟಿ.ವೆಂಕಟರಮಣಯ್ಯ (ಕಾಂಗ್ರೆಸ್), 2.ಪುರುಷೋತ್ತಮ (ಎಎಪಿ), 3. ಬಿ.ಮುನೇಗೌಡ (ಜೆಡಿಎಸ್), 4.ಧೀರಜ್ ಮುನಿರಾಜ್(ಬಿಜೆಪಿ), 5.ಬಿ.ಎಲ್ ಪಿಳ್ಳಪ್ಪ (ಬಿಎಸ್‌ಪಿ), 6. ಬಿ ಶಿವಶಂಕರ್ ಕೆಆರ್‌ಎಸ್ (ಕರ್ನಾಟಕ ರಾಷ್ಟ್ರ ಸಮಿತಿ), 7. ರವಿಕುಮಾರ್.ಎಂ (ಉತ್ತಮ ಪ್ರಜಾಕೀಯ ಪಕ್ಷ), 8. ಎ.ವಿ.ನಾರಾಯಣ (ಸಮಾಜವಾದಿ ಪಾರ್ಟಿ), 9. ವೆಂಕಟರಾಜು.ಜಿ.ಎಚ್ (ರಾಣಿ ಚೆನ್ನಮ್ಮ ಪಾರ್ಟಿ), 10. ಗಂಗಮ್ಮ.ಎಮ್ (ಜೈಮಹಾ ಭಾರತ ಪಾರ್ಟಿ), 11. ಆನಂದ ಮೂರ್ತಿ.ಜೆ ಗೌಡ್ರು(ಸ್ವತಂತ್ರ ಅಭ್ಯರ್ಥಿ), 12. ಕುಮಾರ್ ರಾವ್ (ಸ್ವತಂತ್ರ ಅಭ್ಯರ್ಥಿ).
ಕುಂದಾನಗರಿಯಲ್ಲಿ ರಾಹುಲ್ ಕ್ಯಾಂಪೇನ್: ಲಿಂಗಾಯತ ನಾಯಕರಿಗೆ ಹೆಚ್ಚಿನ ಜವಬ್ದಾರಿ!
ನೆಲಮಂಗಲ ವಿಧಾನಸಭಾ ಕ್ಷೇತ್ರ:
1. ಬಿ.ಎಂ.ಗಂಗಬೈಲಪ್ಪ (ಎಎಪಿ), 2. ಮಹದೇವ್.ಪಿ (ಬಿಎಸ್‌ಪಿ), 3. ಎನ್.ಶ್ರೀನಿವಾಸ್(ಕಾಂಗ್ರೆಸ್), 4. ಸಪ್ತಗಿರಿ ಶಂಕರ್ ನಾಯಕ್ (ಬಿಜೆಪಿ), 5. ಡಾ.ಕೆ.ಶ್ರೀನಿವಾಸ ಮೂರ್ತಿ(ಜೆಡಿಎಸ್), 6. ಅರುಣ್ ಕುಮಾರ್ (ಕರ್ನಾಟಕ ರಾಷ್ಟ್ರ ಸಮಿತಿ), 7. ನರಸಿಂಹಮೂರ್ತಿ.ಜಿ (ಉತ್ತಮ ಪ್ರಜಾಕೀಯ ಪಾರ್ಟಿ), 8. ಸಿ.ಹನುಮಂತರಾಯ (ವಿಜಯ ಜನತಾ ಪಾರ್ಟಿ), 9. ಉಮಾದೇವಿ (ಸ್ವತಂತ್ರ ಅಭ್ಯರ್ಥಿ), 10. ಶ್ರೀನಿವಾಸ ವಿ(ಸ್ವತಂತ್ರ ಅಭ್ಯರ್ಥಿ).