ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ 5.85 ಕೋಟಿ ನಗದು ಜಪ್ತಿ
5.85 ಕೋಟಿ ರು. ನಗದು, 5.87 ಲಕ್ಷ ರು. ಮೌಲ್ಯದ ಉಚಿತ ಉಡುಗೊರೆಗಳು, 6.84 ಲಕ್ಷ ರು. ಮೌಲ್ಯದ 21.48 ಲಕ್ಷ ಲೀಟರ್ ಮದ್ಯ, 15.21 ಲಕ್ಷ ರು. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 4.50 ಲಕ್ಷ ರು. ಮೌಲ್ಯದ ಚಿನ್ನ, 6.10 ಲಕ್ಷ ರು. ಮೌಲ್ಯದ ಎರಡು ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಂಗಳೂರು(ಮಾ.21): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮ ತಡೆಯಲು ನಿಯೋಜನೆಗೊಂಡಿರುವ ವಿವಿಧ ತನಿಖಾ ತಂಡಗಳು 5.85 ಕೋಟಿ ರು. ನಗದು ಸೇರಿದಂತೆ ಏಳು ಕೋಟಿ ರು. ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿ ಮಾಡಿವೆ. ನೀತಿಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 27.62 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
5.85 ಕೋಟಿ ರು. ನಗದು, 5.87 ಲಕ್ಷ ರು. ಮೌಲ್ಯದ ಉಚಿತ ಉಡುಗೊರೆಗಳು, 6.84 ಲಕ್ಷ ರು. ಮೌಲ್ಯದ 21.48 ಲಕ್ಷ ಲೀಟರ್ ಮದ್ಯ, 15.21 ಲಕ್ಷ ರು. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 4.50 ಲಕ್ಷ ರು. ಮೌಲ್ಯದ ಚಿನ್ನ, 6.10 ಲಕ್ಷ ರು. ಮೌಲ್ಯದ ಎರಡು ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಮಾಹಿತಿ ನೀಡಿದೆ.
ಹಾವೇರಿಯ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೇಲಿ ಗದ್ದಲ: ಕೈಕೈ ಮಿಲಾಯಿಸಿದ ಕಾರ್ಯಕರ್ತರು
ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 205 ಎಫ್‌ಐಆರ್ ದಾಖಲಿಸಲಾಗಿದೆ. 47,868 ಶಸ್ತಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ. 827 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂಟು ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಸಿಆರ್‌ಪಿಸಿ ತಡೆಗಟ್ಟುವ ವಿಭಾಗದಡಿ 2,173 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 2.93 ಕೋಟಿ ರು. ನಗದು, ಬಳ್ಳಾರಿ ಲೋಕಸಭಾ ಕ್ಷೇತ್ರದ ಸಿರಗುಪ್ಪ ತಾಲೂಕಿನಲ್ಲಿ 32.92 ಲಕ್ಷ ರು. ಮತ್ತು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಜಿನಲ್ಲಿ 50 ಲಕ್ಷ ರು. ನಗದನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.