ಬೆಂಗಳೂರು, (ಜುಲೈ.31): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, ಇಂದು (ಶುಕ್ರವಾರ) 5483 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,24,115ಕ್ಕೆ ಏರಿಕೆಯಾಗಿದೆ. 5483 ಹೊಸ ಕೇಸ್‌ ಪತ್ತೆಯಾಗಿದ್ರೆ,  84 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ನಾಳೆ ಪ್ರಧಾನಿ ಮೋದಿ ಭಾಷಣ, ಸೆಕ್ಸ್ ವರ್ಕರ್ ಮಕ್ಕಳಿಗೆ ಉಚಿತ ಶಿಕ್ಷಣ; ಜು.31ರ ಟಾಪ್ 10 ಸುದ್ದಿ!

ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ದಿನವೊಂದರಲ್ಲಿ 3130 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2230 ಮಂದಿ ಸಾವನ್ನಪ್ಪಿದ್ದು, 71,968 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರ ಸೋಂಕಿನ ವಿವರ
ಬೆಂಗಳೂರು ನಗರ 2220, ಬಳ್ಳಾರಿ 340, ಬೆಳಗಾವಿ 217, ಉಡುಪಿ 213, ದಕ್ಷಿಣಕನ್ನಡ, ಮೈಸೂರು ತಲಾ 204, ಧಾರವಾಡ 180, ಶಿವಮೊಗ್ಗ 158, ಕಲಬುರ್ಗಿ 144, ದಾವಣಗೆರೆ 122, ರಾಯಚೂರು 119, ವಿಜಯಪುರ 118, ಬೆಂಗಳೂರು ಗ್ರಾಮಾಂತರ 105, ಬೀದರ್ 104, ಹಾಸನ 100, ತುಮಕೂರು 95,  ಉತ್ತರಕನ್ನಡ, ಗದಗ ತಲಾ 92, ರಾಮನಗರ 89, ಬಾಗಲಕೋಟೆ 88, ಚಿಕ್ಕಮಗಳೂರು 74, ಮಂಡ್ಯ 65, ಹಾವೇರಿ 57, ಯಾದಗಿರಿ 56, ಚಿಕ್ಕಬಳ್ಳಾಪುರ 48, ಚಾಮರಾಜನಗರ 44, ಕೊಪ್ಪಳ 38, ಚಿತ್ರದುರ್ಗ 35, ಕೋಲಾರ 32, ಕೊಡಗು 30 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.