Coronavirus ಬೆಂಗಳೂರಿನಲ್ಲಿ ಕೊರೋನಾ ಕೊಂಚ ಇಳಿಕೆ, ಇಲ್ಲಿದೆ ಕರ್ನಾಟಕದ ಅಂಕಿ-ಸಂಖ್ಯೆ
* ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ
* ಬೆಂಗಳೂರಿನಲ್ಲಿ ಕೊರೋನಾ ಕೇಸ್ ಸಂಖ್ಯೆ ಇಳಿಕೆ
* ಕೋವಿಡ್ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ
ಬೆಂಗಳೂರು, (ಜ.21): ಕರ್ನಾಟಕದಲ್ಲಿ(Karnataka) ಕೊರೋನಾ(Covid-19) ಪಾಸಿಟಿವ್ ಕೇಸ್‍ಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಇಂದು(ಶುಕ್ರವಾರ) 48,049 ಹೊಸ ಕೇಸ್ ಪತ್ತೆಯಾಗಿದ್ದು. 22 ಜನ ಸೋಂಕಿಗೆ ಬಲಿಯಾಗಿದ್ದಾರೆ.
ಇತ್ತ ಬೆಂಗಳೂರಿನಲ್ಲಿ(Bengaluru) ನಿನ್ನೆಗೆ(ಜ.20) ಹೋಲಿಕೆ ಮಾಡಿದ್ರೆ ಕೇಸ್ ಸಂಖ್ಯೆ ಇಳಿಕೆ ಕಂಡಿದೆ. ನಿನ್ನೆ(ಗುರುವಾರ) 30,540 ಕೇಸ್‌ಗಳು ಪತ್ತೆಯಾಗಿದ್ದವು. ಶುಕ್ರವಾರ ಒಟ್ಟು 29,068 ಕೇಸ್ ದಾಖಲಾಗಿದೆ. 6 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸಿಲಿಕಾನ್ ಸಿಟಿಯಲ್ಲಿ 2,23,000 ಸಕ್ರಿಯ ಪ್ರಕರಣಗಳಿವೆ.
Covid Guidelines ಸಿಎಂ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು, ಹೊಸ ಮಾರ್ಗಸೂಚಿ ಇಲ್ಲಿದೆ
ಕಳೆದ 24 ಗಂಟೆಗಳಲ್ಲಿ 18,115 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 34,25,002 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 30,63,292 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 38,537 ಜನರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,23,143ಕ್ಕೆ ಏರಿಕೆಯಾಗಿದೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ತುಸು ಕಡಿಮೆಯಾಗಿದ್ದು, ಶೇ 19.23ಕ್ಕೆ ಇಳಿದಿದೆ. ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಶೇ 0.04 ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಂಗಳೂರು ನಗರ 6, ಉಡುಪಿ 4, ಮೈಸೂರು 3, ಹಾವೇರಿ 2, ರಾಮನಗರ, ಶಿವಮೊಗ್ಗ ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ 1.
ಯಾವ ಜಿಲ್ಲೆಯಲ್ಲಿ ಎಷ್ಟು ಕೊರೋನಾ ಕೇಸ್?
ಬೆಂಗಳೂರು ನಗರ 29,068, ಬಾಗಲಕೋಟೆ 85, ಬಳ್ಳಾರಿ 767, ಬೆಳಗಾವಿ 518, ಬೆಂಗಳೂರು ಗ್ರಾಮಾಂತರ 1036, ಬೀದರ್ 351, ಚಾಮರಾಜನಗರ 576, ಚಿಕ್ಕಬಳ್ಳಾಪುರ 772, ಚಿಕ್ಕಮಗಳೂರು 319, ಚಿತ್ರದುರ್ಗ 438, ದಕ್ಷಿಣ ಕನ್ನಡ 897, ದಾವಣಗೆರೆ 249, ಧಾರವಾಡ 373, ಗದಗ 336, ಹಾಸನ 1889, ಹಾವೇರಿ 143, ಕಲಬುರಗಿ 1164, ಕೊಡಗು 317, ಕೋಲಾರ 645, ಕೊಪ್ಪಳ 324, ಮಂಡ್ಯ 1506, ಮೈಸೂರು 915, ರಾಯಚೂರು 367, ರಾಮನಗರ 330, ಶಿವಮೊಗ್ಗ 500, ತುಮಕೂರು 2021, ಉಡುಪಿ 1018, ಉತ್ತರ ಕನ್ನಡ 682, ವಿಜಯಪುರ 327, ಯಾದಗಿರಿ 116.
ಸಿಎಂ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು
ಹಲವರು ವಿರೋಧಿಸಿದ್ದರಿಂದ ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಪ್ಯೂ ( Weekend Curfew ) ಹಿಂಪಡೆಯಲು ಸಭೆಯಲ್ಲಿ ತೀರ್ಮಾನವಾಗಿದೆ.
* ರಾತ್ರಿ ಕರ್ಫ್ಯೂ ಅವಧಿ ವಾರದ 7 ದಿನಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ.
* ಸಾರ್ವಜನಿಕ ಬೇಡಿಕೆ ಮೇರೆಗೆ ಹಾಗೂ ತಜ್ಞರೊಂದಿಗೆ ಚರ್ಚಿಸಿದ ಅಂಶಗಳನ್ನ ಆಧರಿಸಿ, ಈ ವಾರಾಂತ್ಯದಲ್ಲಿ ವಾರಾಂತ್ಯ ಕರ್ಫ್ಯೂ ಸದ್ಯಕ್ಕೆ ಹಿಂಪಡೆಯಲು ನಿರ್ಧರಿಸಲಾಗಿದೆ. ಆದ್ರೆ, ಮುಂದಿನ ವಾರ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ನೋಡಿಕೊಂಡು ನಿರ್ಬಂಧಗಳನ್ನ ವಿಧಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು.
* ಆದ್ದರಿಂದ ಸಾರ್ವಜನಿಕರು ಜವಾಬ್ದಾರಿಯುತವಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಅತಿ ಅಗತ್ಯವಾಗಿದೆ.
* ಮಾಲ್, ಹೋಟೆಲ್, ಬಾರ್, ಕ್ಲಬ್, ಪಬ್ಮ ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ತೆರೆಯಲು ತೀರ್ಮಾನಿಸಲಾಗಿದೆ. ಹಾಗೂ ಎರಡೂ ಡೋಸ್ ಲಸಿಕೆ ಕಡ್ಡಾಯ.
ಸರ್ಕಾರದ ಹೊಸ ಮಾರ್ಗಸೂಚಿ ಇಂತಿದೆ.
* ಈ ಹಿಂದೆ ಜಾರಿಗೊಳಿಸಿದ್ದಂತ ಶುಕ್ರವಾರ ರಾತ್ರಿ 10 ರಿಂದ ಆರಂಭಗೊಂಡು ಸೋಮವಾರ ಬೆಳಿಗ್ಗೆ 5 ಗಂಟೆಗೆಯವರೆಗಿನ ವೀಕೆಂಡ್ ಕರ್ಪ್ಯೂವನ್ನು ವಾಪಾಸ್ ಪಡೆಯಲಾಗಿರೋದಾಗಿ ತಿಳಿಸಿದ್ದಾರೆ.
* ವೀಕೆಂಡ್ ಕರ್ಪ್ಯೂ ಮಾತ್ರವೇ ರದ್ದುಗೊಳಿಸಲಾಗಿದೆ. ಕೊರೋನಾ ನಿಯಂತ್ರಣ ಕ್ರಮವಾಗಿ ಈ ಹಿಂದೆ ಜಾರಿಯಲ್ಲಿದ್ದಂತ ಎಲ್ಲಾ ನಿಯಮಗಳು ಮುಂದುವರೆಯಲಿವೆ. Rally, ಧರಣಿ, ಪ್ರತಿಭಟನೆ ಸೇರಿದಂತೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ.
* ಮದುವೆ ಸಮಾರಂಭಗಳಿಗೆ ಕೊರೋನಾ ಸೋಂಕಿನ ತೀವ್ರತೆಯ ನಡುವೆಯೂ ಅವಕಾಶ ನೀಡಲಾಗಿದೆ. ಓಪನ್ ಸ್ಥಳದಲ್ಲಿ ನಡೆಯೋ ಮದುವೆಗೆ 200 ಜನ. ಮುಚ್ಚಿದ ಪ್ರದೇಶದಲ್ಲಿ ನಡೆಯೋ ಮದುವೆಗೆ 100 ಜನರ ಮಿತಿಯನ್ನು ಮುಂದುವರೆಸಲಾಗಿದೆ.
* ಈ ಹಿಂದಿನಂತೆ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ರಾಜ್ಯಾದ್ಯಂತ ಮುಂದುವರೆಯಲಿದೆ. ಎಲ್ಲಾ ದಿನಗಳಲ್ಲಿಯೂ ರಾತ್ರಿ ಕರ್ಪ್ಯೂ ಜಾರಿಯಲ್ಲಿ ಇರಲಿದೆ.
* ಎಲ್ಲಾ ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್, ಊಟದ ಸ್ಥಳಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಶೇ.50ರ ಜನರು ಸೇರುವ ಮಿತಿಯ ನಿರ್ಬಂಧ ವಿಧಿಸಲಾಗಿದೆ. ಕೊರೋನಾ ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಸಂಪೂರ್ಣ ಡೋಸ್ ಲಸಿಕೆ ಪಡೆದಂತವರಿಗೆ ಮಾತ್ರವೇ ಅವಕಾಶ ನೀಡಲಾಗಿದೆ.
* ಸಿನಿಮಾ, ಹಾಲ್, ಮಲ್ಟಿಪ್ಲೆಕ್ಸ್, ಚಿತ್ರಮಂದಿರ, ರಂಗಮಂದಿರ, ಆಡಿಟೋರಿಯಂ, ಹೆಚ್ಚು ಜನರು ಸೇರಿವಂತ ಸ್ಥಳದಲ್ಲಿ ಶೇ.50 ಜನರು ಸೇರುವಂತ ಮಿತಿಯನ್ನು ವಿಧಿಸಲಾಗಿದೆ.
* ಮಹಾರಾಷ್ಟ್ರ, ಕೇರಳ ಮತ್ತು ಗೋವಾ ಸೇರಿದಂತೆ ಗಡಿ ಭಾಗಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ನಿಯಮ ಮೀರಿದವರ ವಿರುದ್ಧ ಕೋವಿಡ್ ನಿಯಂತ್ರಣ ಕ್ರಮದಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.