Asianet Suvarna News

ಕರ್ನಾಟಕದಲ್ಲಿ ಕೊರೋನಾ ಇಳಿಕೆ: ಪಾಸಿಟಿವಿಟಿ ದರ ಶೇಕಡ 2.59

* ರಾಜ್ಯದಲ್ಲಿ ಜೂನ್ 23ರಂದು 1,70,654 ಕೊರೋನಾ ಪರೀಕ್ಷೆ 
* 4436 ಜನರಿಗೆ ಕೊರೋನಾ ಸೋಂಕು ದೃಢ
* ಪಾಸಿಟಿವಿಟಿ ದರ ಶೇಕಡ 2.59ಕ್ಕೆ ಇಳಿಕೆ

4436 New Coronavirus Cases and 123 deaths In Karnataka On June 23 rbj
Author
Bengaluru, First Published Jun 23, 2021, 7:40 PM IST
  • Facebook
  • Twitter
  • Whatsapp

ಬೆಂಗಳೂರು, (ಜೂನ್.23): ರಾಜ್ಯದಲ್ಲಿ ಇಂದು (ಬುಧವಾರ) ಹೊಸದಾಗಿ 4436 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು,123 ಸೋಂಕಿತರು ಸಾವನ್ನಪ್ಪಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 28,19,465 ಏರಿಕೆಯಾಗಿದ್ರೆ, ರಾಜ್ಯದಲ್ಲಿ ಇದುವರೆಗೆ 34,287 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್ 3ನೇ ಅಲೆ: ಉನ್ನತ ಮಟ್ಟದ ತಜ್ಞ ಸಮಿತಿ ಸಭೆಯ ಮುಖ್ಯಾಂಶಗಳು 

ಇವತ್ತು 6455 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈ ಮೂಲಕ ಸದ್ಯ 1,16,450. ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 26,68,705 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು 1,70,654 ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇಕಡ 2.59 ರಷ್ಟು ಇದೆ.

ಇವತ್ತು 1,70,654 ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನಲ್ಲಿ 1008 ಜನರಿಗೆ ಸೋಂಕು ತಗಲಿದ್ದು, 24 ಮಂದಿ ಮೃತಪಟ್ಟಿದ್ದಾರೆ.

Follow Us:
Download App:
  • android
  • ios