ಬೆಂಗಳೂರು, (ಜೂನ್.20): ರಾಜ್ಯದಲ್ಲಿ ಇಂದು (ಶನಿವಾರ) ಒಂದೇ ದಿನ 416 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದದ್ದು, ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಒಟ್ಟು 181 ಮಂದಿ ಬಿಡುಗಡೆಗೊಂಡಿದ್ದಾರೆ ಇದರೊಂದಿಗೆ ರಾಜ್ಯದಲ್ಲಿ ಒಟ್ಟು 5391 ಮಂದಿ ಗುಣಮುಖರಾಗಿ ಆಸ್ಪತ್ರಯಿಂದ ಬಿಡುಗಡೆಗೊಂಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಕಂಟ್ರೋಲ್: ಈ ಯಶಸ್ಸು ಹಿಂದಿನ ರೂವಾರಿ ಮುನೀಶ್ ಮೌದ್ಗಿಲ್...!

ಇನ್ನು ಶನಿವಾರ ಒಂದೇ ದಿನ ಒಟ್ಟು 09 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು ಇದರೊಂದಿಗೆ ರಾಜ್ಯದಲ್ಲಿ ಒಟ್ಟು 132 ಮಂದಿ ಸಾವನ್ನಪ್ಪಿದ್ದಾರೆ.

ಇವತ್ತು ರಾಜ್ಯದಲ್ಲಿ ಒಟ್ಟು 181 ಮಂದಿ ಡಿಸ್ಚಾರ್ಜ್ ಆಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು 5391 ಮಂದಿ ಗುಣಮುಖರಾಗಿ ಆಸ್ಪತ್ರಯಿಂದ ಬಿಡುಗಡೆಗೊಂಡಿದ್ದಾರೆ. ಇಂದಿನ 416 ಹೊಸ ಪ್ರಕರಣ ಸೇರಿ ಒಟ್ಟು 3170 ಪ್ರಕರಣಗಳು ಸಕ್ರೀಯವಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ \ ಹೆಲ್ತ್ ಬುಲೆಟಿನ್ ಮೂಲಕ ತಿಳಿಸಿದೆ.

ಶನಿವಾರದ ಜಿಲ್ಲಾವಾರು ಅಂಕಿ-ಅಂಶ
ರಾಜ್ಯದ 30 ಜಿಲ್ಲೆಗಳ ಪೈಕಿ 4 ಹೊರತುಪಡಿಸಿ ಇನ್ನುಳಿದ 24 ಜಿಲ್ಲೆಗಳಲ್ಲೂ ಶನಿವಾರ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಯಾದಗಿರಿ, ಕೊಪ್ಪಳ, ಚಿತ್ರದುರ್ಗ ಮತ್ತು ಕೊಡುಗು ಜಿಲ್ಲೆಯಲ್ಲಿ ಯಾವುದೇ ಕೋವಿಡ್19 ಕೇಸ್ ಪತ್ತೆಯಾಗಿಲ್ಲ. ಹಾಗಾದ್ರೆ ಇನ್ನುಳಿದ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು ಕಂಡುಬಂದಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಶನಿವಾರ 94 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 1000 ಗಡಿ ದಾಟಿದೆ. ಬೀದರ್ ನಲ್ಲಿ 73 ಪ್ರಕರಣಗಳು , ಬಳ್ಳಾರಿ 38, ರಾಮನಗರ 38, ಕಲಬುರಗಿ 34, ಮೈಸೂರು 22, ಹಾಸನ 16, ರಾಯಚೂರು 15, ಉಡುಪಿ 13, ಹಾವೇರಿಯಲ್ಲಿ 12, ವಿಜಯಪುರ 9, ಚಿಕ್ಕಮಗಳೂರು 8, ಧಾರವಾಡ 5, ಚಿಕ್ಕಬಳ್ಳಾಪುರ  5, ದಕ್ಷಿಣ ಕನ್ನಡ 4,  ಮಂಡ್ಯ 4, ಉತ್ತರ ಕನ್ನಡ 4, ಕೋಲಾರ 4, ಬೆಂಗಳೂರು ಗ್ರಾಮಾಂತರ 4, ದಾವಣಗೆರೆ 3, ಬಾಗಲಕೋಟೆ 2, ಶಿವಮೊಗ್ಗ 2, ಗದಗ 2, ತುಮಕೂರು 2, ಬೆಳಗಾವಿ 1, ಚಾಮರಾಜನಗರ 1 ಪ್ರಕರಣ ದೃಢಪಟ್ಟಿದೆ.