ರಾಜ್ಯದಲ್ಲಿ ಕೊರೋನಾ ಕಂಟ್ರೋಲ್: ಈ ಯಶಸ್ಸು ಹಿಂದಿನ ರೂವಾರಿ ಮುನೀಶ್ ಮೌದ್ಗಿಲ್...!

First Published Jun 20, 2020, 6:28 PM IST

ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಇದಕ್ಕೆ ಇಡೀ ಪ್ರಪಂಚವೇ ನಡುಗಿ ಹೋಗಿದೆ. ಅದರಲ್ಲೂ ದೇಶದಲ್ಲಿ ಅದರ ಆರ್ಭಟ ಜೋರಾಗಿದೆ. ಆದ್ರೆ, ದೇಶದ ಕೆಲ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಕರ್ನಾಟಕ ಸರ್ಕಾರ ಕೊರೋನಾ ಕಂಟ್ರೋಲ್ ಮಾಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಹೊಗಳಿದೆ. ಎಲ್ಲಾ ರಾಜ್ಯಗಳಿಗೂ ಕರ್ನಾಟಕದ ಈ ವಿಚಾರದಲ್ಲಿ ಮಾದರಿ ಎಂದಿದೆ. ಇದರ ಶ್ರೇಯಸ್ಸು  ಐಎಎಸ್ ಅಧಿಕಾರಿ, ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಗೆ ಸೇರಬೇಕು.